
ಅನಿಮಲ್ ಖ್ಯಾತಿಯ ತೃಪ್ತಿ ದಿಮ್ರಿ ಅವರು ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದ ಕಾರ್ಟರ್ ರೋಡ್ ನಲ್ಲಿ 14 ಕೋಟಿ ರೂಪಾಯಿ ಮೌಲ್ಯದ ಎರಡು ಅಂತಸ್ತಿನ ಬಂಗಲೆಯನ್ನು ಖರೀದಿಸಿದ್ದಾರೆ.
ದಾಖಲೆಗಳ ಪ್ರಕಾರ ವಹಿವಾಟಿಗೆ 70 ಲಕ್ಷ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ. ಬಂಗಲೆಯ ಒಟ್ಟು ವಿಸ್ತೀರ್ಣವು 2,226 ಚದರ ಅಡಿಗಳಿದ್ದರೆ ಮತ್ತು 2,194 ಚದರ ಅಡಿಗಳಲ್ಲಿ ಮನೆ ನಿರ್ಮಾಣಗೊಂಡಿದೆ.
ದಿಮ್ರಿ 30,000 ರೂಪಾಯಿ ನೋಂದಣಿ ಶುಲ್ಕವನ್ನೂ ಪಾವತಿಸಿದ್ದಾರೆ. ದಾಖಲೆಗಳ ಪ್ರಕಾರ, ಬಂಗಲೆ ಸೆಡ್ರಿಕ್ ಪೀಟರ್ ಫೆರ್ನಾಂಡಿಸ್ ಮತ್ತು ಮಾರ್ಗರೇಟ್ ಆನಿ ಮೇರಿ ಫರ್ನಾಂಡಿಸ್ ಎಂಬುವರಿಗೆ ಸೇರಿತ್ತು ಎಂದು ತಿಳಿದುಬಂದಿದೆ.
2023ರಲ್ಲಿ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿ ದಿಮ್ರಿ ಅವರು ರಣಬೀರ್ ಕಪೂರ್ ಜೊತೆಗೆ ನಟಿಸಿದರು. ಇತ್ತೀಚೆಗೆ IMDbಯ ಟಾಪ್ 100 ಹೆಚ್ಚು ಸರ್ಚ್ ಆಗಿದ್ದ ಭಾರತೀಯ ತಾರೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 2024ರ ಮೇನಲ್ಲಿ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಧಡಕ್ 2 ಚಿತ್ರವನ್ನು ಘೋಷಿಸಿದ್ದು ಅದರಲ್ಲಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ.
Advertisement