ಸಲ್ಮಾನ್ ಖಾನ್ ನಟನೆಯ 'ಸಿಕಂದರ್'ಗೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ; ಚಿತ್ರತಂಡದಿಂದ ಅಧಿಕೃತ ಘೋಷಣೆ

ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ. ಈ ಚಿತ್ರವು ಇವರಿಬ್ಬರ ಮೊದಲ ಸಹಯೋಗವಾಗಿದೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ.
ಸಲ್ಮಾನ್ ಖಾನ್ - ರಶ್ಮಿಕಾ ಮಂದಣ್ಣ
ಸಲ್ಮಾನ್ ಖಾನ್ - ರಶ್ಮಿಕಾ ಮಂದಣ್ಣ

ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ. ಈ ಚಿತ್ರವು ಇವರಿಬ್ಬರ ಮೊದಲ ಸಹಯೋಗವಾಗಿದೆ. ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಜಿದ್ ನಾಡಿಯಾದ್ವಾಲಾ ಬಂಡವಾಳ ಹೂಡಿದ್ದಾರೆ.

ಈ ಕುರಿತು ಪ್ರೊಡಕ್ಷನ್ ಹೌಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಸಿಕಂದರ್‌ನಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ನಟಿಸಲು ಅಸಾಧಾರಣ ಪ್ರತಿಭೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಸ್ವಾಗತಿಸುತ್ತೇನೆ! ಮುಂದಿನ ವರ್ಷ ಈದ್ ವೇಳೆಗೆ ಅವರ ಆನ್-ಸ್ಕ್ರೀನ್ ಜೋಡಿ ತೆರೆಮೇಲೆ ಮ್ಯಾಜಿಕ್ ಮಾಡಲಿದೆ. ಎಆರ್ ಮುರುಗದಾಸ್ ನಿರ್ದೇಶನದ ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ಸಿಕಂದರ್ 2025ರ ಈದ್ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ' ಎಂದಿದೆ.

ಈ ಹಿಂದೆ ಸಂಗೀತ ನಿರ್ದೇಶಕ ಪ್ರೀತಮ್ ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು.

ರಶ್ಮಿಕಾ ಕೊನೆಯದಾಗಿ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿಕಂದರ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕ ಎಆರ್ ಮುರುಗದಾಸ್ ಮತ್ತು ನಟ ಸಲ್ಮಾನ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ನಟನೆಯ 2014 ರ ಜೈ ಹೋ ಚಿತ್ರದ ಕಥೆಯನ್ನು ಮುರುಗದಾಸ್ ಬರೆದಿದ್ದರು ಮತ್ತು ಇದು 2006 ರ ತೆಲುಗು ಚಿತ್ರ ಸ್ಟಾಲಿನ್ ಅನ್ನು ಆಧರಿಸಿದೆ. ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com