
ಮುಂಬೈ: ನಟ ಅಜಯ್ ದೇವಗನ್ ಮತ್ತು ನಟಿ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ Singham Again ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಹೌದು.. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನ ಬಹುತಾರಾಗಣದ Singham Again ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೊಬ್ಬರಿ 138 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಆ ಮೂಲಕ ಟ್ರೈಲರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಮೊದಲ ಚಿತ್ರ ಎಂಬ ಕೀರ್ತಿಗೂ Singham Again ಪಾತ್ರವಾಗಿದೆ.
ಈ ಬಗ್ಗೆ ಚಿತ್ರದ ವಿತರಣೆ ಮಾಡುತ್ತಿರುವ ಜಿಯೋ ಪಿಕ್ಚರ್ಸ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, Singham Again ದಾಖಲೆ ಬರೆದಿದ್ದು, ಟ್ರೈಲರ್ ಅತೀ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಿಂದಿ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ಈ ಬಹುನಿರೀಕ್ಷಿತ ಚಿತ್ರದಲ್ಲಿ ನಟ ಅಜಯ್ ದೇವಗನ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿ ಪಾತ್ರದಲ್ಲಿ ಕರೀನಾ ಕಪೂರ್ ನಟಿಸಿದ್ದಾರೆ.
ಇನ್ನು ವಿಶೇಷ ಅತಿಥಿ ಪಾತ್ರಗಳಲ್ಲಿ ನಟ ಅಕ್ಷಯ್ ಕುಮಾರ್, ದೀಪಿಕ ಪಡುಕೋಣೆ, ರಣವೀರ್ ಸಿಂಗ್, ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದು, ವಿಲ್ಲನ್ ಪಾತ್ರದಲ್ಲಿ ಅರ್ಜುನ್ ಕಪೂರ್ ಮತ್ತು ಜಾಕಿಶ್ರಾಫ್ ನಟಿಸಿದ್ದಾರೆ.
ಟ್ರೈಲರ್ ನಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಇದ್ದು, ಇದೇ ಮನರಂಜನೆ ಚಿತ್ರದಲ್ಲೂ ಕಾಣಿಸುತ್ತದೆಯೇ ಕಾದು ನೋಡಬೇಕಿದೆ.
Advertisement