ಕಂಗನಾ ರಣಾವತ್
ಕಂಗನಾ ರಣಾವತ್TNIE

10 ಸೀನ್ ಕಟ್, 3 ಬದಲಾವಣೆ: ಕಂಗನಾ ರಣಾವತ್ 'ಎಮರ್ಜೆನ್ಸಿ' ಚಿತ್ರಕ್ಕೆ ಸಿಕ್ತು U/A ಪ್ರಮಾಣಪತ್ರ!

ಸರ್ಟಿಫಿಕೇಟ್ ಸಿಕ್ಕ ನಂತರ ಚಿತ್ರಕ್ಕೆ ದಾರಿ ಸುಗಮವಾಗಿದೆ. ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಮೂರು ಬದಲಾವಣೆ ಮಾಡಲು ಹೇಳಿದೆ. ಚಿತ್ರದಲ್ಲಿನ ಅನೇಕ ವಿವಾದಾತ್ಮಕ ಹೇಳಿಕೆಗಳಿಗೆ ನೈಜ ಸಂಗತಿಗಳನ್ನು ಆಧರಿಸಿದ ಮೂಲಗಳನ್ನು ಸೆನ್ಸಾರ್ ಮಂಡಳಿಯು ಸಹ ಕೋರಿದೆ.
Published on

ನಟಿ ಕಂಗನಾ ರಣಾವತ್ ಅಭಿನಯದ 'ಎಮರ್ಜೆನ್ಸಿ' ಚಿತ್ರಕ್ಕೆ ಕವಿದಿದ್ದ ಕಾರ್ಮೋಡ ತಿಳಿಕೊಂಡಿದೆ. ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಜನರು ಅದರ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. 'ಎಮರ್ಜೆನ್ಸಿ' ಸೆಪ್ಟೆಂಬರ್ 6 ರಂದೇ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ವಿವಾದಗಳು ಸುತ್ತಿಕೊಂಡ ಕಾರಣ, ಅದರ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾಯಿತು. ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಜನ ಒತ್ತಾಯಿಸುತ್ತಿದ್ದರೂ ಇತ್ತೀಚೆಗೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದಲ್ಲದೆ, ಸೆನ್ಸಾರ್ ಮಂಡಳಿಯು ಪ್ರಮಾಣಪತ್ರಕ್ಕಾಗಿ ಹಲವಾರು ಬದಲಾವಣೆಗಳನ್ನು ಮಾಡಲು ನಿರ್ಮಾಪಕರನ್ನು ಕೇಳಿದೆ. ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಸರ್ಟಿಫಿಕೇಟ್ ಸಿಕ್ಕ ನಂತರ ಚಿತ್ರಕ್ಕೆ ದಾರಿ ಸುಗಮವಾಗಿದೆ. ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ ಮೂರು ಬದಲಾವಣೆ ಮಾಡಲು ಹೇಳಿದೆ. ಚಿತ್ರದಲ್ಲಿನ ಅನೇಕ ವಿವಾದಾತ್ಮಕ ಹೇಳಿಕೆಗಳಿಗೆ ನೈಜ ಸಂಗತಿಗಳನ್ನು ಆಧರಿಸಿದ ಮೂಲಗಳನ್ನು ಸೆನ್ಸಾರ್ ಮಂಡಳಿಯು ಸಹ ಕೋರಿದೆ. ಇವುಗಳಲ್ಲಿ ಅಮೆರಿಕದ ರಿಚರ್ಡ್ ನಿಕ್ಸನ್ ಅವರ ಹೇಳಿಕೆಯೂ ಸೇರಿದೆ. ಇದರಲ್ಲಿ ಅವರು ಭಾರತೀಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಏನನ್ನಾದರೂ ಹೇಳಿದ್ದಾರಾ, ಇನ್ನೊಂದು ಹೇಳಿಕೆಯಲ್ಲಿ, ವಿನ್‌ಸ್ಟನ್ ಚರ್ಚಿಲ್ ಅವರು "ಮೊಲದಂತಹ ತಳಿ" ಎಂಬ ಪದವನ್ನು ಭಾರತೀಯರಿಗೆ ಬಳಸಿದ್ದಾರೆ.

ಕಂಗನಾ ರಣಾವತ್
ನಾನು ಎಲ್ಲರ ಮೆಚ್ಚಿನ ಟಾರ್ಗೆಟ್ ಆಗಿದ್ದೇನೆ: ಕಂಗನಾ ಕಿಡಿ

10ರಲ್ಲಿ 9 ಬದಲಾವಣೆಗಳನ್ನು ಒಪ್ಪಿಕೆ

ಮೂಲಗಳನ್ನು ನಂಬುವುದಾದರೆ, ನಿರ್ಮಾಪಕರು ಜುಲೈ 8ರಂದು ಚಲನಚಿತ್ರವನ್ನು ಪ್ರಮಾಣೀಕರಣಕ್ಕಾಗಿ ಸಲ್ಲಿಸಿದ್ದರು. ನಂತರ ಸುಮಾರು 3 ವಾರಗಳ ನಂತರ, ಅಕಲ್ ತಖ್ತ್ ಮತ್ತು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಸೇರಿದಂತೆ ಸಿಖ್ ಸಂಘಟನೆಗಳು ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಲು ಪ್ರಾರಂಭಿಸಿದವು. ಚಿತ್ರದಲ್ಲಿ 10 ಬದಲಾವಣೆಗಳನ್ನು ಮಾಡಲು CBFC ಕೇಳಿಕೊಂಡಿದ್ದು, ಈ ಪೈಕಿ ಮಣಿಕರ್ಣಿಕಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ 9 ಬದಲಾವಣೆಗಳಿಗೆ ಒಪ್ಪಿಕೊಂಡಿದೆ. ಚಿತ್ರದಲ್ಲಿನ ಒಂದು ದೃಶ್ಯವನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಕೇಳಲಾಗಿದೆ. ಇದರಲ್ಲಿ ಪಾಕಿಸ್ತಾನಿ ಸೈನಿಕರು ಬಾಂಗ್ಲಾದೇಶಿ ನಿರಾಶ್ರಿತರ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ದೃಶ್ಯದಲ್ಲಿ ಒಂದು ಮಗು ಮತ್ತು ಮೂವರು ಮಹಿಳೆಯರ ಶಿರಚ್ಛೇದವನ್ನು ತೋರಿಸಲಾಗಿದೆ.

ಚಿತ್ರದಲ್ಲಿ ಬದಲಾವಣೆಗಳನ್ನು ಮಾಡುವಂತೆ ಸಿಬಿಎಫ್‌ಸಿ ಆಗಸ್ಟ್ 8 ರಂದು ಮಣಿಕರ್ಣಿಕಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಪತ್ರವನ್ನು ಕಳುಹಿಸಿದ್ದು, ಆಗಸ್ಟ್ 14 ರಂದು ಅವರು ಉತ್ತರವನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ದಿನ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಮಂಡಳಿ ಸೂಚಿಸಿದ 10 ಬದಲಾವಣೆಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದ 9 ಬದಲಾವಣೆಗಳಿಗೆ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ, ಹೇಳಿಕೆಗಳಿಗೆ ಸಂಬಂಧಿಸಿದಂತೆ ಹುಡುಕಲಾದ ವಾಸ್ತವಿಕ ಮೂಲಗಳನ್ನು ಸಹ ಒದಗಿಸಲಾಗಿದೆ.

X

Advertisement

X
Kannada Prabha
www.kannadaprabha.com