
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಹೋಸ್ಟ್ ಮಾಡುವ ಹಿಂದಿ ಬಿಗ್‌ಬಾಸ್‌ನ ಮುಂಬರುವ ಸೀಸನ್‌ಗೆ ತಮ್ಮನ್ನು ಸಂಪರ್ಕಿಸಲಾಗಿತ್ತು ಎಂದು ಕುನಾಲ್ ಕಮ್ರಾ ತಿಳಿಸಿದ್ದಾರೆ. ಮುಂಬರುವ ಸೀಸನ್‌ನ ಜವಾಬ್ದಾರಿ ವಹಿಸಿಕೊಂಡಿದ್ದ ಕಾಸ್ಟಿಂಗ್ ನಿರ್ದೇಶಕರು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಫರ್ ನೀಡಿದ್ದಾರೆ.
ಈ ಆಫರ್ ಅನ್ನು ತಿರಸ್ಕರಿಸಿರುವ ಕುನಾಲ್ ಕಾಮ್ರಾ, ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುವುದಕ್ಕಿಂತ 'ಮೆಂಟಲ್ ಆಸ್ಪತ್ರೆಗೆ' ದಾಖಲಾಗುವುದೇ ಉತ್ತಮ ಎಂದಿರುವ ತಮ್ಮ ಚಾಟ್‌ನ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
'ಬಿಗ್ ಬಾಸ್‌ನ ಈ ಸೀಸನ್‌ನ ಕಾಸ್ಟಿಂಗ್ ಅನ್ನು ನಾನು ನಿರ್ವಹಿಸುತ್ತಿದ್ದೇನೆ ಮತ್ತು ನಿಮ್ಮ ಹೆಸರನ್ನು ವ್ಯಕ್ತಿಯೊಬ್ಬರು ಸೂಚಿಸಿದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲದಿರಬಹುದು ಎಂದು ನನಗೆ ತಿಳಿದಿದೆ. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿಮ್ಮ ನಿಜವಾದ ಉತ್ಸಾಹವನ್ನು ತೋರಿಸಲು ಮತ್ತು ದೊಡ್ಡ ಮಟ್ಟದ ಪ್ರೇಕ್ಷಕರನ್ನು ಗೆಲ್ಲಲು ಇದು ಒಂದು ಹುಚ್ಚು ವೇದಿಕೆಯಾಗಿದೆ. ನಿಮ್ಮ ಅಭಿಪ್ರಾಯವೇನು? ನಾವು ಅದರ ಬಗ್ಗೆ ಮಾತನಾಡಣವೇ?' ಎಂದು ಚಾಟ್‌ನಲ್ಲಿ ಕಳುಹಿಸಿದ್ದಾರೆ.
ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕುನಾಲ್, 'ನಾನು ಮಾನಸಿಕ ಆಸ್ಪತ್ರೆಗೆ ದಾಖಲಾಗುವುದು ಉತ್ತಮ...' ಎಂದು ಬರೆದಿದ್ದಾರೆ.
ಕುನಾಲ್ ಕಾಮ್ರಾ ಅವರಿಗೆ ಬಿಗ್‌ಬಾಸ್ OTT ಅಥವಾ ಬಿಗ್‌ಬಾಸ್ 19ಗೆ ಆಹ್ವಾನ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕುನಾಲ್ ಕಮ್ರಾ ವಿರುದ್ಧ ದೂರುಗಳು ದಾಖಲಾಗಿದ್ದು, ಹಲವು ಎಫ್ಐಆರ್‌ಗಳು ದಾಖಲಾಗಿವೆ. ಮದ್ರಾಸ್ ಹೈಕೋರ್ಟ್ ಈ ಹಿಂದೆ ಕುನಾಲ್ ಕಮ್ರಾ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಮುಂಬೈ ಪೊಲೀಸರು ಮೂರು ಬಾರಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಹಾಸ್ಯನಟ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement