
ನವದೆಹಲಿ: ಬಿಪಾಶಾ ಬಸು ಅವರ ಲುಕ್ ಬಗ್ಗೆ ನಟಿ ಮೃಣಾಲ್ ಠಾಕೂರ್ ಕಮೆಂಟ್ ಮಾಡಿದ್ದ ಹಳೆಯ ವಿಡಿಯೋವೊಂದು ವೈರಲ್ ಆದ ಕೆಲವು ದಿನಗಳ ನಂತರ, ನಟಿ ಮೃಣಾಲ್ ಠಾಕೂರ್ ಅವರು ಬಿಪಾಶಾ ಬಸು ಅವರ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ 'ಸನ್ ಆಫ್ ಸರ್ದಾರ್ 2' ನಲ್ಲಿ ಅಜಯ್ ದೇವಗನ್ ಜೊತೆಗೆ ಕಾಣಿಸಿಕೊಂಡಿದ್ದ ಮೃಣಾಲ್ ಠಾಕೂರ್ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಿಪ್ಪಣಿ ಬರೆದಿದ್ದಾರೆ.
33 ವರ್ಷದ ನಟಿ, ಯಾರ ಹೆಸರನ್ನೂ ಉಲ್ಲೇಖಿಸದೆ, ತಾನು ಮಾತನಾಡಿದ ರೀತಿಯಲ್ಲಿ ತಪ್ಪಾಗಿದೆ. ನಾನು ಆಯ್ಕೆ ಮಾಡಿಕೊಂಡ ಪದಗಳ ಆಯ್ಕೆಗೆ ವಿಷಾದಿಸುತ್ತೇನೆ ಮತ್ತು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದರು.
'ಹದಿನೈದು ವರ್ಷದವಳಾಗಿದ್ದಾಗ ನಾನು ಅನೇಕ ಅಸಂಬದ್ಧ ಮಾತುಗಳನ್ನು ಆಡುತ್ತಿದ್ದೆ. ನನ್ನ ಮಾತು ಅಥವಾ ತಮಾಷೆಯಲ್ಲಿನ ಎಷ್ಟು ಪದಗಳು ಇತರರಿಗೆ ನೋವುಂಟುಮಾಡಬಹುದು ಎಂಬುದನ್ನು ನಾನು ಯಾವಾಗಲೂ ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಆದರೆ, ಅದು ಆಗಿ ಹೋಗಿದೆ ಮತ್ತು ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ' ಎಂದು ಅವರು ಬರೆದಿದ್ದಾರೆ.
'ಯಾರನ್ನೂ ನೋಯಿಸುವುದು ಅಥವಾ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ, ಅದು ಆ ಸಂಭಾಷಣೆಯ ಸಮಯದಲ್ಲಿ ಸಂಭವಿಸಿತು. ತನ್ನ ಮಾತುಗಳು ಹೇಗೆ ನೋವುಂಟುಮಾಡಿರಬಹುದು ಎಂಬುದನ್ನು ನಾನು ಈಗ ಅರಿತುಕೊಂಡೆ ಮತ್ತು ಅವುಗಳನ್ನು ಹೇಳಿದ್ದಕ್ಕೆ ವಿಷಾದಿಸುತ್ತೇನೆ. ಕಾಲಾನಂತರದಲ್ಲಿ, ನಾನು ಎಲ್ಲ ರೀತಿಯ ದೇಹ ಪ್ರಕಾರಗಳನ್ನು ಗೌರವಿಸಲು ಕಲಿತಿದ್ದೇನೆ ಮತ್ತು ಈಗ ಸೌಂದರ್ಯವು ಎಲ್ಲಾ ರೂಪಗಳಲ್ಲಿಯೂ ಇರುತ್ತದೆ ಎಂದು ನಂಬುತ್ತೇನೆ' ಎಂದು ಅವರು ಹೇಳಿದರು.
ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಹಳೆಯ ಕ್ಲಿಪ್ ಒಂದು ಹರಿದಾಡಲು ಪ್ರಾರಂಭಿಸಿತು. ಅದರಲ್ಲಿ ಠಾಕೂರ್ ಅವರು ತಮ್ಮ 'ಕುಂಕುಮ ಭಾಗ್ಯ' ಸಹನಟ ಅರ್ಜಿತ್ ತನೇಜಾ ಜೊತೆಗೆ ಕಾಣಿಸಿಕೊಂಡಿದ್ದರು.
ಆ ಸಂದರ್ಶನದಲ್ಲಿ, ತನೇಜಾ ಮೃಣಾಲ್ ಅವರನ್ನು ಹೆಡ್‌ಸ್ಟ್ಯಾಂಡ್ ಮಾಡುವಂತೆ ಸವಾಲೆಸೆಯುತ್ತಾರೆ. ಅದಕ್ಕೆ ಉತ್ತರಿಸುವ ಮೃಣಾಲ್, ನಾನು ಹೆಡ್‌ಸ್ಟ್ಯಾಂಡ್ ಮಾಡುವಾಗ ನೀವು ಸುಮ್ಮನೆ ಕುಳಿತುಕೊಳ್ಳಬಹುದು ಎಂದು ಉತ್ತರಿಸಿದ್ದಾರೆ.
ನಂತರ ಆಕೆಯನ್ನು ಪುಷ್-ಅಪ್‌ಗಳನ್ನು ಮಾಡಲು ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಮೃಣಾಲ್ ಅವರು, ತನೇಜಾ ಅವರು ಸ್ನಾಯುಗಳುಳ್ಳ ಮಹಿಳೆಯನ್ನು ಮದುವೆಯಾಗಲು ಆಸಕ್ತಿ ಹೊಂದಿರಬಹುದು ಮತ್ತು ಬಿಪಾಶಾ ಬಸುವಿನ ಉದಾಹರಣೆ ನೀಡಿದರು.
'ನೀವು ಪುರುಷರ ರೀತಿಯಲ್ಲಿ ಸ್ನಾಯುಗಳುಳ್ಳ ಹುಡುಗಿಯನ್ನು ಮದುವೆಯಾಗಲು ಬಯಸುತ್ತೀರಾ? ಹೋಗಿ ಬಿಪಾಶಾ ಅವರನ್ನು ಮದುವೆಯಾಗಿ. ಕೇಳಿ, ನಾನು ಬಿಪಾಶಾಗಿಂತ ಉತ್ತಮವಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.
ಇದಾದ ನಂತರ, ಬಿಪಾಶಾ ಬಸು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ನಿಗೂಢ ಪೋಸ್ಟ್ ಅನ್ನು ಹಂಚಿಕೊಂಡಿದ್ದು, 'ಬಲಶಾಲಿ ಮಹಿಳೆಯರು ಒಬ್ಬರನ್ನೊಬ್ಬರು ಮೇಲಕ್ಕೆತ್ತುತ್ತಾರೆ. ಆ ಸ್ನಾಯುಗಳನ್ನು ಪಡೆಯಿರಿ, ಸುಂದರ ಮಹಿಳೆಯರೇ. ನಾವು ಬಲಶಾಲಿಯಾಗಿರಬೇಕು. ಸ್ನಾಯುಗಳು ನಿಮಗೆ ಶಾಶ್ವತವಾಗಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆಯಲು ಸಹಾಯ ಮಾಡುತ್ತವೆ! ಮಹಿಳೆಯರು ಬಲಶಾಲಿಯಾಗಿ ಕಾಣಬಾರದು ಅಥವಾ ದೈಹಿಕವಾಗಿ ಬಲಶಾಲಿಯಾಗಿರಬಾರದು ಎಂಬ ಹಳೆಯ ಚಿಂತನೆಯ ಪ್ರಕ್ರಿಯೆಯನ್ನು ಮುರಿಯಿರಿ' ಎಂದು ಬರೆದಿದ್ದರು.
Advertisement