ಅಕ್ಷಯ್ ಕುಮಾರ್- ಶಿಲ್ಪಾ ಶೆಟ್ಟಿ ಮದುವೆ ಮುರಿದು ಬೀಳಲು ಇದೇ ಕಾರಣ! ಅವರಿಬ್ಬರ 'ಗುಟ್ಟು ರಟ್ಟು' ಮಾಡಿದ ನಿರ್ದೇಶಕ

ಶಿಲ್ಪಾಶೆಟ್ಟಿ ಪೋಷಕರು ಹಾಕಿದ್ದ ನಿರ್ದಿಷ್ಟ ಬೇಡಿಕೆಗಳನ್ನು ದರ್ಶನ್ ವಿವರಿಸಲಿಲ್ಲ. ಆದರೆ ಅವು ಸಾಮಾನ್ಯವಾಗಿ ಪೋಷಕರು ಸಾಮಾನ್ಯವಾಗಿ ಬಯಸುವ ರೀತಿಯಲ್ಲಿ ಇದ್ದವು ಎಂದು ನಿರ್ದೇಶಕರು ಹೇಳಿದರು.
Akshay Kumar-Shilpa Shetty
ಶಿಲ್ಪಾಶೆಟ್ಟಿ, ಅಕ್ಷಯ್ ಕುಮಾರ್
Updated on

1990 ರ ದಶಕದಲ್ಲಿ ಜನಪ್ರಿಯ ಜೋಡಿಯಾಗಿದ್ದ ಬಾಲಿವುಡ್ ನ ಅಕ್ಷಯ್ ಕುಮಾರ್ ಹಾಗೂ ಶಿಲ್ಪಾಶೆಟ್ಟಿ ಗಂಭೀರ ಸಂಬಂಧದಲ್ಲಿದ್ದರು. ಇವರಿಬ್ಬರೂ ಮದುವೆಗೂ ಪ್ಲಾನ್ ಮಾಡಿದ್ದರು. ಆದರೆ, ಮದುವೆಯಾಗಲಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ಸುನೀಲ್ ದರ್ಶನ್ ಈಗ ಬಹಿರಂಗಪಡಿಸಿದ್ದಾರೆ.

ಅಂಥದು ಏನಾಯಿತು? ಬಾಲಿವುಡ್ ಥಿಕಾನಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸುನೀಲ್ ದರ್ಶನ್, ಶಿಲ್ಪಾ ಅವರ ಪೋಷಕರು ಮದುವೆಗೆ ಒಪ್ಪುವ ಮೊದಲು ಕೆಲವು ಷರತ್ತುಗಳನ್ನು ಹಾಕಿದ್ದರಿಂದ ಮದುವೆ ಮುರಿದು ಬಿದ್ದಿತು ಎಂದು ಅವರು ಹೇಳಿದ್ದಾರೆ.

ವಿಧಿ ಬೇರೆಯಾಗಿತ್ತು!

ಅವರಿಬ್ಬರದೂ ಒಳ್ಳೆಯ ಜೋಡಿಯಾಗಿತ್ತು. ಆದರೆ ವಿಧಿ ಬೇರೆಯಾಗಿತ್ತು. ಟ್ವಿಂಕಲ್ ಖನ್ನಾ ಅವರ ತಂದೆ ರಾಜೇಶ್ ಖನ್ನಾ ಅವರೊಂದಿಗೆ ಸಂಪರ್ಕ ಹೊಂದಿದ್ದ ಜ್ಯೋತಿಷಿ, ಅಕ್ಷಯ್ ಮತ್ತು ಟ್ವಿಂಕಲ್ ಮದುವೆಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದನ್ನು ಸುನೀಲ್ ನೆನಪಿಸಿಕೊಂಡಿದ್ದಾರೆ. ಶಿಲ್ಪಾ ಅವರ ಪೋಷಕರು ಆ ಷರತ್ತುಗಳನ್ನು ಹಾಕದಿದ್ದರೆ ಬೇರೆ ರೀತಿಯಾಗುತಿತ್ತು ಎಂದು ಅವರು ಹೇಳಿದರು.

ಶಿಲ್ಪಾಶೆಟ್ಟಿ ಪೋಷಕರು ಹಾಕಿದ್ದ ನಿರ್ದಿಷ್ಟ ಬೇಡಿಕೆಗಳನ್ನು ದರ್ಶನ್ ವಿವರಿಸಲಿಲ್ಲ. ಆದರೆ ಅವು ಸಾಮಾನ್ಯವಾಗಿ ಪೋಷಕರು ಸಾಮಾನ್ಯವಾಗಿ ಬಯಸುವ ರೀತಿಯಲ್ಲಿ ಇದ್ದವು. ಪೋಷಕರಾಗಿ, ತಮ್ಮ ಮಗಳ ಸುರಕ್ಷತೆಗೆ ಏನು ಬೇಕೋ ಅದನ್ನೇ ಮಾಡ್ತಾರೆ. ಅದು ತಪ್ಪಲ್ಲ ಎಂದರು.

ಹಣಕಾಸಿನ ನಿರೀಕ್ಷೆಯಾಗಿತ್ತೇ? ಇದು ಹಣಕಾಸಿನ ನಿರೀಕ್ಷೆಯಾಗಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಎಲ್ಲಾ ರೀತಿಯ ಭದ್ರತೆ, ಎಲ್ಲಾ ಪೋಷಕರು ಅದನ್ನು ಬಯಸುತ್ತಾರೆ. ಆದಾಗ್ಯೂ, ಅವರು ತಮ್ಮದೇ ಆದ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತಾ, "ಇದು ಪೋಷಕರ ತಪ್ಪು ಎಂದು ನಾನು ಭಾವಿಸಿದೆ. ಅವರು ಹಾಗೆ ಮಾಡಿದ್ದರೆ ಅವರಿಬ್ಬರೂ ಮದುವೆಯಾಗುತ್ತಿದ್ದರು ಎಂದರು.

ಅಕ್ಷಯ್-ಶಿಲ್ಪಾಶೆಟ್ಟಿ ಬೇರೆಯಾದದ್ದು ಯಾವಾಗ?

'Ek Rishta' ಚಿತ್ರೀಕರಣಕ್ಕೆ ಸ್ವಲ್ಪ ಮುನ್ನಾ ಅವರಿಬ್ಬರೂ ಬೇರ್ಪಟ್ಟರು. ಆ ಸಮಯದಲ್ಲಿ ಅಕ್ಷಯ್ ಭಾವನಾತ್ಮಕವಾಗಿ ನೊಂದಿರಲಿಲ್ಲ. ಆತನ ಹೃದಯ ಮುರಿದಿರಲಿಲ್ಲ. ಅವರು ಚೆನ್ನಾಗಿಯೇ ಇದ್ದರು. ಅವರು ಮತ್ತೆ ಕಂಬ್ಯಾಕ್ ಆಗಿದ್ದರು. ಅಂತಹ ಸಂದರ್ಭದಲ್ಲೂ ಧಡ್ಕನ್, ಹೇರಾ ಫೇರಿ ಮತ್ತು ಏಕ್ ರಿಷ್ಟಾದಂತಹ ಸಿನಿಮಾಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದು ಸುನೀಲ್ ಹೇಳಿದ್ದಾರೆ.

Akshay Kumar-Shilpa Shetty
Valmiki: 'ವಾಲ್ಮೀಕಿ ಪಾತ್ರ'ದ ವಿಡಿಯೋ ವೈರಲ್! ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಿಡಿ, ಆಗಿರೋದು ಏನು?

ಅಕ್ಷಯ್ ಕುಮಾರ್ ವಿವಾಹ: 2001 ರಲ್ಲಿ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾದ ಅಕ್ಷಯ್ ಕುಮಾರ್ ಗೆ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ ಶೆಟ್ಟಿ 2009 ರಲ್ಲಿ ರಾಜ್ ಕುಂದ್ರಾ ಅವರನ್ನು ವಿವಾಹವಾದ ಶಿಲ್ಬಾಶೆಟ್ಟಿಗೆ ಇಬ್ಬರು ಮಕ್ಕಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com