
ನವದೆಹಲಿ: ಬಾಲಿವುಡ್ ನಟಿ ಕಾಜೋಲ್ ನಟಿಸಿರುವ ಪೌರಾಣಿಕ ಹಾರರ್ ಚಿತ್ರ 'ಮಾ', ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 25.41 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಪಕರು ಸೋಮವಾರ ತಿಳಿಸಿದ್ದಾರೆ.
ಲಪಾಚಪಿ, ಕ್ರಿಮಿನಲ್ ಜಸ್ಟೀಸ್ ಮತ್ತು ಚೋರಿ ಚಿತ್ರಗಳಿಗೆ ಹೆಸರುವಾಸಿಯಾದ ವಿಶಾಲ್ ಫ್ಯೂರಿಯಾ ನಿರ್ದೇಶಿಸಿದ ಈ ಚಿತ್ರಕ್ಕೆ ಸೈವಿನ್ ಕ್ವಾಡ್ರಾಸ್ ಕಥೆ ಬರೆದಿದ್ದಾರೆ.
ಚಿತ್ರವು ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜಿಯೋ ಸ್ಟುಡಿಯೋಸ್ ಮತ್ತು ದೇವಗನ್ ಫಿಲ್ಮ್ಸ್ ಪ್ರಸ್ತುತಪಡಿಸಿದ ಈ ಚಿತ್ರವನ್ನು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ ಮತ್ತು ಕುಮಾರ್ ಮಂಗತ್ ಪಾಠಕ್ ಸಹ-ನಿರ್ಮಾಪಕರಾಗಿದ್ದಾರೆ.
ಚಿತ್ರತಂಡ ಎಕ್ಸ್ ಖಾತೆಯಲ್ಲಿ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಹಂಚಿಕೊಂಡಿದೆ.
'ಮೈಥೋ ಹಾರರ್ ದೊಡ್ಡ ಗೆಲುವು ಸಾಧಿಸಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಒಟ್ಟು 25.41 ಕೋಟಿ ಗಳಿಕೆ ಕಂಡಿದೆ' ಎಂದು ಚಿತ್ರದ ಪೋಸ್ಟರ್‌ನ ಮೇಲೆ ತಿಳಿಸಲಾಗಿದೆ. ಬಿಡುಗಡೆಯಾದ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 4.93 ಕೋಟಿ ರೂ. ಗಳಿಸಿದ್ದ ಈ ಚಿತ್ರವು ನಂತರದ ದಿನಗಳಲ್ಲಿ 6.26 ಕೋಟಿ ರೂ. ಮತ್ತು 7.24 ಕೋಟಿ ರೂ. ಗಳಿಕೆ ಕಂಡಿದೆ.
'ಮಾ' ಚಿತ್ರದ ಒಟ್ಟು ದೇಶೀಯ ಬಾಕ್ಸ್ ಆಫೀಸ್ ಗಳಿಕೆಯು 18.43 ಕೋಟಿ ರೂ. ಆಗಿದೆ.
'ಪೌರಾಣಿಕವು ಹಾರರ್ ಅನ್ನು ಭೇಟಿಯಾದಾಗ, ಪ್ರೇಕ್ಷಕರು ಅದರಿಂದ ಬೇರೆಡೆಗೆ ನೋಡಲಾಗಲಿಲ್ಲ! #MaaTheFilm ಈಗ ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿದೆ. ಈಗಲೇ ನಿಮ್ಮ ಟಿಕೆಟ್‌ಗಳನ್ನು ಇಲ್ಲಿ ಬುಕ್ ಮಾಡಿ' ಎಂದು ಶೀರ್ಷಿಕೆ ನೀಡಲಾಗಿದೆ.
ಭಯ, ರಕ್ತ ಮತ್ತು ದ್ರೋಹದಲ್ಲಿ ಬೇರೂರಿರುವ ರಾಕ್ಷಸನ ಶಾಪವನ್ನು ಕೊನೆಗೊಳಿಸಲು ಕಾಳಿ ದೇವತೆಯಾಗುವ ತಾಯಿಯ ಕಥೆಯನ್ನು ಈ ಚಿತ್ರ ವಿವರಿಸುತ್ತದೆ. ಚಿತ್ರದಲ್ಲಿ ಇಂದ್ರನೀಲ್ ಸೇನ್‌ಗುಪ್ತಾ, ಖೇರಿನ್ ಶರ್ಮಾ ಮತ್ತು ರೋನಿತ್ ರಾಯ್ ಕೂಡ ನಟಿಸಿದ್ದಾರೆ.
Advertisement