
ಮುಂಬೈ: 40ರ ವಯಸ್ಸಿನಲ್ಲೂ ಸೌಂದರ್ಯದೊಂದಿಗೆ ಫಿಟ್ ಆಗಿರುವಂತಹ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ನಲ್ಲಿ ಅದ್ಬುತವಾದಂತಹ 'ವರ್ಕೌಟ್' ವೊಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಟ್ರ್ಯಾಂಪೊಲೈನ್ ಮೇಲೆ ಕುಳಿತು ಶಿಲ್ಪಾಶೆಟ್ಟಿ ವರ್ಕೌಟ್ ಮಾಡುತ್ತಿರುವುದು ವಿಡಿಯೋದಲ್ಲಿದ್ದು, ವರ್ಕೌಟ್ ಹೇಗೆ ಪರಿಣಾಮಕಾರಿ ಹಾಗೂ ಆನಂದ ದಾಯಕವಾಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ. ಜಂಪ್ ಮಾಡುವುದರ ಮೂಲಕವೂ ಆನಂದ ಪಡಬಹುದು ಎಂದು ಅವರು ಹೇಳಿದ್ದಾರೆ.
ಹಂಗಮಾ 2 ಎಂದು ವಿಡಿಯೋ ಹಂಚಿಕೊಂಡಿರುವ ಶಿಲ್ಬಾಶೆಟ್ಟಿ, Shut up ಮತ್ತು ಬೌನ್ಸ್ ಮೂಲಕ ಮಾಂಸ ಖಂಡ ಸದೃಢಗೊಳಿಸಬಹುದು. ಜಂಪ್ ಮಾಡುವುದರಿಂದ ಆನಂದ ಸಿಗುವುದಿಲ್ಲ ಎಂದು ಹೇಳಿದ್ದು ಯಾರು ಎಂದು ಬರೆದುಕೊಂಡಿದ್ದಾರೆ.
ಟ್ರ್ಯಾಂಪೊಲೈನ್ ಮೂಲಕ ವರ್ಕೌಟ್ ನಿಂದ ಆಗುವ ಪ್ರಯೋಜನಗಳನ್ನು ಅವರು ಈ ವಿಡಿಯೋ ಮೂಲಕ ತೋರಿಸಿದ್ದಾರೆ. ಆಗಾಗ್ಗೆ ತನ್ನ ವರ್ಕೌಟ್ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಸಲಹೆ ನೀಡುವ ಶಿಲ್ಪಾಶೆಟ್ಟಿ, ಇತ್ತೀಚಿಗೆ ಮಂಗಳೂರಿನ ಪ್ರಸಿದ್ಧ ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಕುಟುಂಬಸ್ಥರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
Advertisement