
ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಸಿಕೊಳ್ಳುವ ನಟ Aamir Khan ಗೆ 60ನೇ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ.
ಈಗಾಗಲೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ನೀಡಿರುವ ಆಮಿರ್ ಖಾನ್, ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ. 2ನೇ ಪತ್ನಿ ಕಿರಣ್ ರಾವ್ಗೆ ಡಿವೋರ್ಸ್ ನೀಡಿರುವ ಆಮಿರ್ ಖಾನ್ ಗೆ ಈಗ ಬೆಂಗಳೂರಿನ ಮಹಿಳೆಯ ಜೊತೆಗೆ ಲವ್ ಆಗಿದೆ.
ಮುಂಬೈ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಆಮಿರ್ ಖಾನ್ ತಮ್ಮ ಹೊಸ ಪ್ರೇಯಸಿ ಬಗ್ಗೆ ಖುಲ್ಲಂ ಖುಲ್ಲಾ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಒಂದೂವರೆ ವರ್ಷದಿಂದ ನಾವು ಒಟ್ಟಿಗೆ ವಾಸ ಮಾಡುತ್ತಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಆಮಿರ್ ಖಾನ್ ಹೊಸ ಗರ್ಲ್ಫ್ರೆಂಡ್ ಹೆಸರು ಗೌರಿ, ಆಕೆಗೆ 6 ವರ್ಷದ ಮಗ ಇದ್ದು, ತಮ್ಮ ಹೊಸ ಪ್ರೇಯಸಿಯನ್ನು ಮಾಜಿ ಪತ್ನಿ ಹಾಗೂ ಮಕ್ಕಳಿಗೂ ಪರಿಚಯ ಮಾಡಿಕೊಟ್ಟಿದ್ದೇನೆ, ನಾವಿಬ್ಬರೂ ರಿಲೇಷನ್ ಶಿಪ್ ನಲ್ಲಿರುವುದು ಕುಟುಂಬದವರಿಗೆ ಸಂತಸ ತಂದಿದೆ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದಾರೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ಅದು ಅಧಿಕೃತವಾಗಿದೆ.
25 ವರ್ಷಗಳಿಂದ ಗೌರಿ ಹಾಗೂ ನನಗೆ ಪರಿಚಯ ಇತ್ತು. ಕೆಲವು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಕಿರಣ್ ರಾವ್ ಗೆ ವಿಚ್ಛೇದನ ನೀಡಿದ ಬಳಿಕ ಗೌರಿ ಜೊತೆ ಆಮಿರ್ ಖಾನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನಲಾಗಿದೆ.
25 ವರ್ಷಗಳ ಹಿಂದೆ ಪರಿಚಯ ಆಗಿದ್ದ ಗೌರಿ ಈಗ ನನಗೆ ಬಾಳ ಸಂಗಾತಿ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಿದ್ದೇವೆ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಗೌರಿ ಬೆಂಗಳೂರಿನ ಮೂಲದ ಮಹಿಳೆಯಾಗಿದ್ದು, ಸಿನಿಮಾ ನಿರ್ಮಾಣದ ವಿಭಾಗದಲ್ಲಿ ಗೌರಿ ಕೆಲಸ ಮಾಡುತ್ತಾರೆ. ನನ್ನ ಮಕ್ಕಳಿಗೆ ಈ ವಿಷಯದಲ್ಲಿ ಖುಷಿ ಇದೆ. ಮಾಜಿ ಪತ್ನಿಯರ ಜೊತೆ ಶ್ರೇಷ್ಠವಾದ ಬಾಂಧವ್ಯ ಹೊಂದಿದ್ದು ನನ್ನ ಅದೃಷ್ಟ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಮತ್ತೊಂದು ವಿಶೇಷವೆಂದರೆ ಆಮಿರ್ ಖಾನ್ ನಾಯಕನಾಗಿದ್ದ ‘ಲಗಾನ್’ ಸಿನಿಮಾದಲ್ಲಿ ಕಥಾನಾಯಕಿಯ ಹೆಸರು ಗೌರಿ ಆಗಿತ್ತು. ಆ ಚಿತ್ರದಲ್ಲಿ ಆಮಿರ್ ಖಾನ್ ಭುವನ್ ಎಂಬ ಪಾತ್ರದಲ್ಲಿ ನಟಿಸಿದ್ದರು. ‘ಈಗ ಭುವನ್ಗೆ ಗೌರಿ ಸಿಕ್ಕಿದ್ದಾಳೆ’ ಎಂದು ಆಮಿರ್ ಖಾನ್ ತಮ್ಮ ಹೊಸ ಪ್ರೇಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಮಾ.14 ರಂದು ಆಮಿರ್ ಖಾನ್ ಜನ್ಮದಿನವಾಗಿದ್ದು 60 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಧಿಕೃತವಾಗಿ ಆಮಿರ್ ಖಾನ್ ಈಗ ಸೀನಿಯರ್ ಸಿಟಿಜನ್ ಆಗಿದ್ದರೂ ನನಗೆ ನಾನು ಸೀನಿಯರ್ ಸಿಜಿಟನ್ ಎನಿಸುವುದಿಲ್ಲ, ಆ ರೀತಿ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಹೊಸದನ್ನು ಕಲಿಯುವಲ್ಲಿ ಎಂದಿಗೂ ಮುಂದಿರುವ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಕಳೆದ 2 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಸುಚೇತಾ ಭಟ್ಟಾಚಾರ್ಯ ಮಾರ್ಗದರ್ಶನದಲ್ಲಿ ಆಮಿರ್ ಖಾನ್ ಸಂಗೀತ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
Advertisement