
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸೀಮಿತ ಆವೃತ್ತಿಯ 'ರಾಮ ಆವೃತ್ತಿ' ಗಡಿಯಾರವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಧರಿಸಿದ್ದು ಇದು ಮುಸ್ಲಿಂರ ಆಕ್ರೋಶಕ್ಕೆ ಕಾರಣವಾಗಿದೆ. ಸಲ್ಮಾನ್ ಖಾನ್ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಜಮಾಅತ್ ಆಕ್ರೋಶ ವ್ಯಕ್ತಪಡಿಸಿದೆ.
ಸಿಕಂದರ್ ಚಿತ್ರದ ಪ್ರಚಾರದ ವೇಳೆ ಸಲ್ಮಾನ್ ಖಾನ್ 'ರಾಮ್ ಎಡಿಷನ್' ಗಡಿಯಾರ ಧರಿಸಿದ್ದರು. ಇನ್ನು ರಂಜಾನ್ ಮಾಸದಲ್ಲಿ ಮುಸ್ಲಿಂ ನಟ ಈ ವಾಚ್ ಧರಿಸುವ ಮೂಲಕ ಶರಿಯಾ, ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. 'ರಾಮ್ ಎಡಿಷನ್' ಗಡಿಯಾರವು ಹೊಳೆಯುವ ಚಿನ್ನದ ಡಯಲ್ ಅನ್ನು ಹೊಂದಿದ್ದು, ರಾಮ ಜನ್ಮಭೂಮಿಗೆ ಸಂಬಂಧಿಸಿದ ಸಂಕೀರ್ಣ ಕೆತ್ತನೆಗಳು ಮತ್ತು ಕೇಸರಿ ಪಟ್ಟಿಯನ್ನು ಹೊಂದಿದೆ. ಡಯಲ್ ಮತ್ತು ಅಂಚಿನ ಮೇಲೆ ಹಿಂದೂ ದೇವತೆಗಳ ಶಾಸನಗಳಿವೆ.
ಬರೇಲ್ವಿ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ, ಸಲ್ಮಾನ್ ಖಾನ್ 'ರಾಮ್ ಎಡಿಷನ್' ಗಡಿಯಾರವನ್ನು ಧರಿಸುವುದನ್ನು "ಹರಾಮ್" ಎಂದು ಕರೆದಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಜಮಾಅತ್‌ನ ಅಧ್ಯಕ್ಷರೂ ಆಗಿರುವ ಮೌಲಾನಾ, ನಟನ ನಡೆಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಕಾನೂನಿನ ಬಗ್ಗೆ ಪ್ರಶ್ನೆಗಳನ್ನು ಸ್ವೀಕರಿಸಿರುವುದಾಗಿ ಹೇಳಿದರು. ಸಲ್ಮಾನ್ ಖಾನ್ ಬಗ್ಗೆ ಶರಿಯತ್ ನಿರ್ಧಾರದ ಬಗ್ಗೆ ನನ್ನನ್ನು ಕೇಳಲಾಗಿದೆ. ಅವರು ಮಾಡಿರುವ ಕೆಲಸದ ಬಗ್ಗೆ ಶರಿಯತ್ ನಿರ್ಧಾರದ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಅವರು ರಾಮ ಮಂದಿರದ ಪ್ರಚಾರಕ್ಕಾಗಿ ತಯಾರಿಸಿದ ರಾಮ್ ಆವೃತ್ತಿಯ ಗಡಿಯಾರವನ್ನು ಧರಿಸಿದ್ದಾರೆ. ಮುಸ್ಲಿಂ ಆಗಿರುವುದರಿಂದ ಕೈಯಲ್ಲಿ ಅಂತಹ ಗಡಿಯಾರವನ್ನು ಧರಿಸುವುದು ಕಾನೂನುಬಾಹಿರ ಮತ್ತು ಹರಾಮ್" ಎಂದು ಅವರು ಹೇಳಿದರು.
ರಾಮ್ ಆವೃತ್ತಿಯ ಗಡಿಯಾರವನ್ನು ಧರಿಸುವುದು ಮತ್ತು ಪ್ರಚಾರ ಮಾಡುವುದು ಇಸ್ಲಾಮಿಕ್ ವಿರೋಧಿ ಧಾರ್ಮಿಕ ನಡೆಯನ್ನು ಅನುಮೋದಿಸಿದಂತೆ ಎಂದು ಮೌಲಾನಾ ಹೇಳಿದರು. ದೊಡ್ಡ ಮುಸ್ಲಿಂ ಅಭಿಮಾನಿಗಳನ್ನು ಹೊಂದಿರುವ ಪ್ರಮುಖ ಭಾರತದ ನಟ ಸಲ್ಮಾನ್ ಖಾನ್ ಅಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ಪ್ರತಿಪಾದಿಸಿದರು."ರಾಮ್ ಎಡಿಷನ್" ಗಡಿಯಾರಗಳನ್ನು ಧರಿಸುವುದು ಮತ್ತು ಪ್ರಚಾರ ಮಾಡುವುದು ವಿಗ್ರಹಗಳು ಅಥವಾ ಇಸ್ಲಾಮಿಕ್ ಅಲ್ಲದ ಧಾರ್ಮಿಕ ಚಿಹ್ನೆಗಳನ್ನು ಪ್ರಚಾರ ಮಾಡಿದಂತೆ. ಇದು ಅನುಚಿತ ಮತ್ತು ಇಸ್ಲಾಮಿಕ್ ಕಾನೂನಿನ ಪ್ರಕಾರ ನಿಷೇಧಿಸಲಾಗಿದೆ. ಅವರ ಈ ಇಸ್ಲಾಮಿಕ್ ಅಲ್ಲದ ಚಟುವಟಿಕೆಗಳಿಗೆ ಪಶ್ಚಾತ್ತಾಪ ಪಡಬೇಕು ಎಂದು ಮೌಲಾನಾ ಹೇಳಿದರು.
2025ರ ಬಹುನಿರೀಕ್ಷಿತ ಸಲ್ಮಾನ್ ಖಾನ್ ಚಿತ್ರ ಸಿಕಂದರ್, ಈದ್ ಹಬ್ಬದಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರವು ಎಲ್ಲಾ ಪ್ರೇಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು, 2 ಗಂಟೆ 20 ನಿಮಿಷಗಳ ಅವಧಿಯನ್ನು ಹೊಂದಿದೆ. ಈ ಚಿತ್ರವನ್ನು ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. 2014ರ ಬ್ಲಾಕ್‌ಬಸ್ಟರ್ ಚಿತ್ರ ಕಿಕ್ ನಂತರ ಸಲ್ಮಾನ್ ಮತ್ತು ನಿರ್ಮಾಪಕರ ನಡುವಿನ ಪುನರ್ಮಿಲನವನ್ನು ಸೂಚಿಸುತ್ತದೆ. ಟ್ರೇಡ್ ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ಪ್ರಕಾರ, ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರವು ಶುಕ್ರವಾರ ರಾತ್ರಿ 10.30 ರವರೆಗೆ ಸುಮಾರು 10.75 ಕೋಟಿ ರೂ.ಗಳ ಮುಂಗಡ ಬುಕಿಂಗ್ ಗಳಿಸಿದೆ.
Advertisement