
ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ 'ಸಿತಾರೆ ಜಮೀನ್ ಪರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಶುಭ ಮಂಗಲ್ ಸಾವಧಾನ್ ಖ್ಯಾತಿಯ ಆರ್ ಎಸ್ ಪ್ರಸನ್ನ ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಜೂನ್ 20 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ.
ಅಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಅಂಗವಿಕಲರ ತಂಡಕ್ಕೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕಹಾನಿ ಈ ಸಿನಿಮಾದಲ್ಲಿ ಇದೆ
ಮೂರು ವರ್ಷಗಳ ವಿರಾಮದ ಬಳಿಕ ಅಮೀರ್ ಖಾನ್ ಮತ್ತೆ ಅಭಿನಯಕ್ಕೆ ಮರಳಿದ್ದು, ಈ ಚಿತ್ರದ ಗೆಲುವಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಹೊಸಬರಾದ ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ಶರ್ಮಾ ಮತ್ತಿತರರ ತಾರಾಗಣವಿದೆ. ಇದರಲ್ಲಿ ಜೆನಿಲಿಯಾ ದೇಶಮುಖ್ ಕೂಡ ನಟಿಸಿದ್ದಾರೆ.
Advertisement