ಧರ್ಮೇಂದ್ರ: ರಾಜನಂತೆ ಬದುಕಿ ಬಾಳಿದ 'ಹಿ-ಮ್ಯಾನ್'

ಈ ಚಿತ್ರವು ಧರ್ಮೇಂದ್ರ ಅವರ ವ್ಯಕ್ತಿತ್ವದ ಒಂದು ಮುಖವನ್ನು ತೋರಿಸಿತು. ಅದನ್ನು ಅವರು ತಮ್ಮ ಜೀವನದುದ್ದಕ್ಕೂ ಗುರುತಿಸಿಕೊಂಡಿದ್ದರು.
Dharmendra
ಧರ್ಮೇಂದ್ರ
Updated on

ಮುಂಬೈ: ಅರ್ಜುನ್ ಹಿಂಗೋರಾನಿ ಅವರ 'ದಿಲ್ ಭಿ ತೇರಾ ಹಮ್ ಭಿ ತೇರೆ' (1960) ಚಿತ್ರದಲ್ಲಿ ಮುಖೇಶ್ ಅವರ "ಮುಜ್ಕೋ ಇಸ್ ರಾತ್ ಕಿ ತನ್ಹೈ ಮೇ ಆವಾಜ್ ನ ದೋ" ಹಾಡಿನ ಮೂಲಕ ಧರ್ಮೇಂದ್ರ ಹಿಂದಿ ಚಿತ್ರರಂಗದಲ್ಲಿ ಮೃದುವಾಗಿ ಹೆಜ್ಜೆ ಹಾಕಿದ್ದರು. ಮುಂಬೈ ನಗರಿಯ ಬಡವರು ಮತ್ತು ಅಶಕ್ತರ ಬಗ್ಗೆ, ತಮ್ಮ ಪರಿಸ್ಥಿತಿಯಿಂದ ಮೇಲೇರಲು ಸಾಧ್ಯವಾಗದವರ ಬಗ್ಗೆ ದುಃಖಕರ, ಅದ್ಭುತ ಪ್ರೇಮಕಥೆ ಚಿತ್ರವದು.

ಈ ಚಿತ್ರವು ಧರ್ಮೇಂದ್ರ ಅವರ ವ್ಯಕ್ತಿತ್ವದ ಒಂದು ಮುಖವನ್ನು ತೋರಿಸಿತು. ಅದನ್ನು ಅವರು ತಮ್ಮ ಜೀವನದುದ್ದಕ್ಕೂ ಗುರುತಿಸಿಕೊಂಡಿದ್ದರು. ಧರ್ಮೇಂದ್ರ ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದರು. ಬೀದಿ ಮಾರಾಟಗಾರನಾಗಿ ಬದಲಾದ ಬಾಕ್ಸರ್ ಆಗಿ ಅವರ ಸುಂದರ ನೋಟ ಮತ್ತು ಟ್ರಿಮ್ ದೇಹವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದರು.

ಕೆಲವು ವರ್ಷಗಳ ನಂತರ, ಓ ಪಿ ರಾಲ್ಹಾನ್ ಅವರ ಫೂಲ್ ಔರ್ ಪತ್ತರ್ (1966) ಚಿತ್ರದಲ್ಲಿ ಪರದೆ ಮೇಲೆ ಮತ್ತೆ ಖದರ್ ತೋರಿಸಿದ್ದರು. ಗರಂ-ಧರಮ್ (ನಂತರ ಅವರನ್ನು ಜನ ಹಾಗೆ ಕರೆಯುತ್ತಿದ್ದರು) ಮಲಗಿದ್ದ ಮೀನಾ ಕುಮಾರಿಯ ಮೇಲೆ ನಿಂತು, ಚಳಿಯಿಂದ ಅವಳನ್ನು ರಕ್ಷಿಸಲು ತನ್ನ ಅಂಗಿಯನ್ನು ತೆಗೆದು ಕೊಡುವ ದೃಶ್ಯ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು.

Dharmendra
ಬಾಲಿವುಡ್ ದಂತಕಥೆ ಧರ್ಮೇಂದ್ರ ನಿಧನ: 'ಶೋಲೆ' ಸಹನಟ, ಗೆಳೆಯನ ಬಗ್ಗೆ ಅಮಿತಾಬ್ ಬಚ್ಚನ್ ಭಾವನಾತ್ಮಕ ಸಾಲುಗಳು...

ಫಿಟ್ನೆಸ್ ಹಿಂದಿ ಚಲನಚಿತ್ರ ನಾಯಕನ ಲಕ್ಷಣವಲ್ಲದ ಸಮಯದಲ್ಲಿ, ಧರ್ಮೇಂದ್ರ ದೃಢತೆಯ ಹೊಸ ಮಾದರಿಯಲ್ಲಿ ಮೊಳಗಿದರು. ವಿನೋದ್ ಖನ್ನಾ ಮತ್ತು ಸಲ್ಮಾನ್ ಖಾನ್ ಮೊದಲಾದವರು ಫಿಟ್ನೆಸ್ ಗೆ ನಂತರದ ದಿನಗಳಲ್ಲಿ ಆದ್ಯತೆ ನೀಡಿದರು.

ಧರ್ಮೇಂದ್ರ ಅವರದು ನುಣುಪಾದ, ಜಿಮ್ ಟೋನ್ಡ್, ಸಿಕ್ಸ್ ಪ್ಯಾಕ್ ಆಬ್ಸ್ ಹೊಂದಿದವರಲ್ಲ. ಬದಲಾಗಿ ದೃಢವಾದ, ಆರೋಗ್ಯಕರ ಪುರುಷನಾಗಿದ್ದರು. 80 ರ ದಶಕ ನಂತರ ಆಕ್ಷನ್, ಸ್ಟಂಟ್‌ಗಳಿಂದ ಹೀರೋಗಳು ಆಕರ್ಷಿತವಾಗುವ ಮೊದಲು ಧರ್ಮೇಂದ್ರ ಅವರು ಶಾಂತ ಮೃದುತ್ವ, ಅಗಾಧವಾದ ಪ್ರಣಯ ಮತ್ತು ತಮಾಷೆಯ ಹಾಸ್ಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.

ಧರ್ಮೇಂದ್ರ ತಮ್ಮ ಸಮಕಾಲೀನರಾದ ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್ ಅವರ ಸೂಪರ್‌ಸ್ಟಾರ್‌ಪಟ್ಟಕ್ಕೆ ವಿರುದ್ಧವಾಗಿದ್ದರು. ತಮ್ಮದೇ ಆದ ಖ್ಯಾತಿಯನ್ನು ಅಷ್ಟಾಗಿ ಆಚರಿಸಿಕೊಳ್ಳಲಿಲ್ಲ. 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮತ್ತು 65 ವರ್ಷಗಳ ಕಾಲ ಚಲನಚಿತ್ರೋದ್ಯಮದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಹೊಂದಿದ್ದರೂ, ಅಸಂಖ್ಯಾತ ಹಿಟ್‌ಗಳಿಂದ ತುಂಬಿದ್ದರೂ, ಹೀ-ಮ್ಯಾನ್ ಎನಿಸಿಕೊಂಡ ಧರ್ಮೇಂದ್ರ ಸೀಮಿತತೆ ಹೊಂದಿದ್ದರು.

ಆದರೆ ರಾಜ್ ಖೋಸ್ಲಾ ಅವರ ಮೇರಾ ಗಾಂವ್ ಮೇರಾ ದೇಶ್ (1971), ಮತ್ತು ನಾಸಿರ್ ಹುಸೇನ್ ಅವರ ಯಾದೋಂಕಿ ಬಾರಾತ್ (1973) ನಂತಹ ಪ್ರತಿಯೊಂದು ಆಕ್ಷನ್ ಎಂಟರ್‌ಟೈನರ್‌ಗೂ, ಹೃಷಿಕೇಶ್ ಮುಖರ್ಜಿ ಅವರ ಹಾಸ್ಯಮಯ ಚುಪ್ಕೆ ಚುಪ್ಕೆ ಮತ್ತು ಅದೇ ಚಲನಚಿತ್ರ ನಿರ್ಮಾಪಕರ ಹೃದಯಸ್ಪರ್ಶಿ ಸತ್ಯಕಂನಲ್ಲಿ ನಟಿಸಿದ್ದರು. ರಮೇಶ್ ಸಿಪ್ಪಿ ಅವರ ಶೋಲೆ ಅವರ ವೃತ್ತಿ ಬದುಕಿನ ಮೈಲಿಗಲ್ಲು.

80, 90 ಮತ್ತು 2000 ದ ದಶಕಗಳಲ್ಲಿ, ಅವರ ವೃತ್ತಿಜೀವನವು ಕುಸಿಯಲು ಪ್ರಾರಂಭಿಸಿತು, ಅವರ ಮಕ್ಕಳು ಸನ್ನಿ, ಬಾಬಿ, ಇಶಾ ಮತ್ತು ಅಭಯ್ ಡಿಯೋಲ್ - ಚಿತ್ರರಂಗಕ್ಕೆ ಬಂದರು. ನಂತರದ ದಿನಗಳಲ್ಲಿ ಲೋನಾವಾಲಾದಲ್ಲಿರುವ ತಮ್ಮ ತೋಟದ ಮನೆಯಲ್ಲಿಯೇ ಕಳೆದು ನಿವೃತ್ತಿ ಜೀವನವನ್ನು ಅನುಭವಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com