ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್ 2’: ವಿಶ್ವಾದ್ಯಂತ 1564 ಕೋಟಿ ರೂ. ಕಲೆಕ್ಷನ್, ಭಾರತದಲ್ಲಿ 1000 ಕೋಟಿ ಕ್ಲಬ್‌'ನತ್ತ ಚಿತ್ರ..!

ಭಾರತದಲ್ಲಿಯೂ ಈ ಚಿತ್ರದ ಯಶಸ್ಸು ಭರ್ಜರಿಯಾಗಿದ್ದು, ರೂ.1000 ಕೋಟಿ ಕ್ಲಬ್‌ ತಲುಪುವ ಹಂತದಲ್ಲಿದೆ. ಈಗಾಗಲೇ ರೂ.900 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿರುವ ಈ ಚಿತ್ರ, ಶೀಘ್ರದಲ್ಲೇ ಭಾರತದಲ್ಲಿ 1000 ಕೋಟಿ ಕ್ಲಬ್‌ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Dhurandhar Movie Photo
ಧುರಂಧರ್ 2 ಚಿತ್ರದ ಪೋಸ್ಟರ್
Updated on

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಬಿಡುಗಡೆಯಾಗಿ 17 ದಿನಗಳಲ್ಲಿ ವಿಶ್ವದಾದ್ಯಂತ ರೂ,1564 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ಈ ಸಿನಿಮಾ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಭಾರತದಲ್ಲಿಯೂ ಈ ಚಿತ್ರದ ಯಶಸ್ಸು ಭರ್ಜರಿಯಾಗಿದ್ದು, ರೂ.1000 ಕೋಟಿ ಕ್ಲಬ್‌ ತಲುಪುವ ಹಂತದಲ್ಲಿದೆ. ಈಗಾಗಲೇ ರೂ.900 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿರುವ ಈ ಚಿತ್ರ, ಶೀಘ್ರದಲ್ಲೇ ಭಾರತದಲ್ಲಿ 1000 ಕೋಟಿ ಕ್ಲಬ್‌ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸಿನಿಮಾದ ಆ್ಯಕ್ಷನ್, ಕಥಾಹಂದರ ಮತ್ತು ರಣವೀರ್ ಸಿಂಗ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಯುವಕರಲ್ಲಿ ಈ ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಮಲ್ಟಿಪ್ಲೆಕ್ಸ್‌ಗಳ ಜೊತೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ವಿದೇಶದಲ್ಲಿಯೂ ‘ಧುರಂಧರ 2’ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಉತ್ತರ ಅಮೆರಿಕಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರಿಂದ ಒಟ್ಟಾರೆ ಜಾಗತಿಕ ಕಲೆಕ್ಷನ್ ರೂ.1500 ಕೋಟಿಗೂ ಮೀರಿದ್ದು, ಈ ಕ್ರೇಜ್ ಇದೇ ರೀತಿ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿದೆ.

Dhurandhar Movie Photo
ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ ರೂ!

ಈಗಾಗಲೇ ಭಾರತದ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಹಿಂದಿಕ್ಕಿದೆ. ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ), ರಾಜಮೌಳಿ ನಿರ್ದೇಶನ ‘ಆರ್​ಆರ್​ಆರ್​’ (782.20 ಕೋಟಿ) ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (646 ಕೋಟಿ) ಸಿನಿಮಾಗಳ ಒಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮೀರಿಸಿದೆ.

ಸದ್ಯ ‘ಧುರಂಧರ್ 2’ ಸಿನಿಮಾದ ಮುಂದೆ ಕೆಲವು ದೈತ್ಯ ಸಿನಿಮಾಗಳ ಕಲೆಕ್ಷನ್ ದಾಖಲೆ ಹಾಗೆಯೇ ಇದೆ. ಈ ಮೊದಲು ‘ಬಾಹುಬಲಿ 2’ ಸಿನಿಮಾ 1,030 ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಸಿನಿಮಾ 1,234.10 ಕೋಟಿ ರೂಪಾಯಿ ಚಾಚಿಕೊಂಡಿತ್ತು. ಆ ಸಿನಿಮಾಗಳ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಅಳಿಸಿ ಹಾಕುತ್ತಾ ಇಲ್ಲವಾ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com