

ಮುಂಬೈ: ಬಾಲಿವುಡ್ ಹಾಸ್ಯನಟ ಜಾಕಿರ್ ಖಾನ್ ಧುರಂಧರ್ 2: ದಿ ರಿವೆಂಜ್ ಯಶಸ್ಸಿನ ಬಗ್ಗೆ ಲೇವಡಿ ಮಾಡಿದ್ದು,ಪುಲ್ ಟ್ರೋಲ್ ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಹೌದು. 2026 ರ ಸ್ಕ್ರೀನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಾಸ್ಯನಟ, ರಣವೀರ್ ಸಿಂಗ್ ನಾಯಕರಾಗಿರುವ ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಚಿತ್ರದ ಬಗ್ಗೆ ಉದ್ಯಮದ ಪ್ರತಿಕ್ರಿಯೆ ನಕಲಿ ಪ್ರೇಮ ಎಂದು ವಾಗ್ದಾಳಿ ನಡೆಸಿದರು.
ಆಯ್ದ ಸಿನಮಾಗಳ ಯಶಸ್ಸನ್ನು ಮಾತ್ರ ಆಚರಿಸುವ ಬಾಲಿವುಡ್ ಪ್ರವೃತ್ತಿಯನ್ನು ಲೇವಡಿ ಮಾಡಿದ್ದಾರೆ. ಸಿನಿಮಾಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಹೆಚ್ಚಿದ್ದನ್ನು ಅಣಕಿಸಿದ ಅವರು, ಅದರಲ್ಲಿ ಹೆಚ್ಚಿನವು ನೈಜಕ್ಕಿಂತ ಹೆಚ್ಚಾಗಿ ಶೋಆಫ್ ಕಾಣುತ್ತದೆ ಎಂದಿದ್ದಾರೆ.
ನಿಮ್ಮ ಫೇವರಿಟ್ ಸಿನಿಮಾ ಬಗ್ಗೆ ಎಷ್ಟೇ ಅಭಿನಂದನಾ ಪೋಸ್ಟ್‌ಗಳನ್ನು ಹಾಕಿದರೂ, ಎಷ್ಟೇ ಸ್ಟೋರಿ ಹಂಚಿಕೊಂಡರೂ ಯಾವುದೇ ಸಂದರ್ಶನದಲ್ಲೂ ಹೇಳಿದರೂ ಅದು ಮುಖ್ಯವಲ್ಲ. ಎಲ್ಲರೂ ಧುರಂಧರನಿಗೆ ಅಸೂಯೆ ಪಡುತ್ತಾರೆ. ಇದೇ ಸತ್ಯ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಲಿಯಾರಿಯಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ ಆದರೆ ಬಾಂದ್ರಾ ಮತ್ತು ಜುಹು ನಡುವೆ ಹೊಗೆ ಇತ್ತು ಎಂದು ಹೇಳುವಾಗ ನಕ್ಕಿದ್ದಾರೆ. ಈ ಅಣಕ ಹಿನ್ನೆಲೆಯಲ್ಲಿ ಜಾಕಿರ್ ಖಾನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
Advertisement