"ನೀವಿನ್ನೂ ನಿಮ್ಮ ಮಾಜಿ ಪತ್ನಿಯ ಮಾತು ಕೇಳುತ್ತಿದ್ದೀರಾ? ಸಹೋದರ ಸೊಹೈಲ್ ಖಾನ್‌ ಕಾಲೆಳೆದ ಸಲ್ಮಾನ್ ಖಾನ್: Video

ಈ ಭೇಟಿಯ ಒಂದು ವಿಡಿಯೋ ತುಣುಕು ಈಗ ವೈರಲ್ ಆಗಿದ್ದು, ಇದರಲ್ಲಿ ಸಲ್ಮಾನ್ ಅವರು ಸೊಹೈಲ್ ಅವರ ಮಾಜಿ ಪತ್ನಿ ಸೀಮಾ ಸಜ್ದೇ ಬಗ್ಗೆ ತಮಾಷೆಯ ಹಾಗೂ ಭಾವನಾತ್ಮಕವಾದ ಮಾತನ್ನಾಡಿದ್ದಾರೆ.
Salman Khan Teases Sohail Khan
ಸಹೋದರ ಸೊಹೈಲ್ ಖಾನ್‌ ಕಾಲೆಳೆದ ಸಲ್ಮಾನ್ ಖಾನ್
Updated on

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ವಿಶಿಷ್ಟ ಹಾಗೂ ಮುಕ್ತ ಹಾಸ್ಯಪ್ರಜ್ಞೆಯಿಂದ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು 'ಅಲಯನ್ಸ್' (Alliance) ಎಂಬ ರಿಯಾಲಿಟಿ ಶೋನ ಸೆಟ್‌ಗೆ ಭೇಟಿ ನೀಡಿದ್ದರು. ಅಲ್ಲಿ ತಮ್ಮ ಕಿರಿಯ ಸಹೋದರ ಸೊಹೈಲ್ ಖಾನ್ ಅವರೊಂದಿಗೆ ನಡೆಸಿದ ಮಾತುಕತೆಯು ಆನ್‌ಲೈನ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಈ ಭೇಟಿಯ ಒಂದು ವಿಡಿಯೋ ತುಣುಕು ಈಗ ವೈರಲ್ ಆಗಿದ್ದು, ಇದರಲ್ಲಿ ಸಲ್ಮಾನ್ ಅವರು ಸೊಹೈಲ್ ಅವರ ಮಾಜಿ ಪತ್ನಿ ಸೀಮಾ ಸಜ್ದೇ ಬಗ್ಗೆ ತಮಾಷೆಯ ಹಾಗೂ ಭಾವನಾತ್ಮಕವಾದ ಮಾತನ್ನಾಡಿದ್ದಾರೆ.

ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸೊಹೈಲ್ ಅವರೊಂದಿಗೆ ಸಲ್ಮಾನ್ ಮುಕ್ತವಾಗಿ ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ಒಂದು ಸಂದರ್ಭದಲ್ಲಿ, ಸಲ್ಮಾನ್ ತಮ್ಮ ಸಹೋದರನನ್ನು, "ನೀವಿನ್ನೂ ನಿಮ್ಮ ಮಾಜಿ ಪತ್ನಿಯ ಮಾತು ಕೇಳುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ನೀವಿನ್ನೂ ಸೀಮಾ ಮಾತು ಕೇಳ್ತಿದ್ದೀರಾ? ನಾನಿದನ್ನು ಹೇಳಬಾರದು, ಆದರೂ ಹೇಳಲೇ? ನನ್ನ ಪ್ರೀತಿಯ, ಒಳ್ಳೆಯ ಮನಸ್ಸಿನ ಸಹೋದರ ಎಲ್ಲ ದೋಷವನ್ನೂ ತನ್ನ ಮೇಲೆಯೇ ಹೊತ್ತುಕೊಂಡ. ಆದರೆ ಒಬ್ಬ ಸಹೋದರನಾಗಿ, ಅವನು ಎಷ್ಟು ಪ್ರಯತ್ನಿಸಿದ್ದಾನೆ ಎಂಬುದು ನನಗೆ ಗೊತ್ತು. ನಾವೇನು ​​ನೋಡಿದ್ದೇವೆ ಎಂಬುದು ನನಗೆ ತಿಳಿದಿದೆ. ಅಂದರೆ, ಭಾವನಾತ್ಮಕವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾ, ಒಳಗೇ ಇಟ್ಟುಕೊಳ್ಳುತ್ತಾ ಬಂದಿದ್ದಾನೆ ಎಂದು ಹೇಳಿದರು.

Salman Khan Teases Sohail Khan
'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ವೈರಲ್ ವಿಡಿಯೋದಿಂದ ಅಭಿಮಾನಿಗಳು ಆತಂಕಗೊಂಡ ಬೆನ್ನಲ್ಲೇ ಸಲ್ಮಾನ್ ಖಾನ್!

ಸಲ್ಮಾನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸೊಹೈಲ್, ನಾನು ತುಂಬಾ ಗಾಬರಿಯಾದೆ (freaked out)ಎಂದು ಒಪ್ಪಿಕೊಂಡರು. ಆಗ ಸಲ್ಮಾನ್ ತಕ್ಷಣವೇ ಇಂದು ಗಾಬರಿಯಾದ್ರಾ?" ಎಂದು ಮರುಪ್ರಶ್ನಿಸಿದರು. 'ಅಲಯನ್ಸ್' ಕಾರ್ಯಕ್ರಮದ ಭಾವನಾತ್ಮಕ ಸಂಚಿಕೆಯ ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com