'ಅವರಿಲ್ಲದೆ 'ಗಜಿನಿ' ಆ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ': ಪ್ರದೀಪ್ ರಾವತ್ ನಿಧನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಸಂತಾಪ

ತಮಿಳಿನ 'ಗಜಿನಿ'ಯಲ್ಲಿ (2005) ಖಳನಾಯಕನ ಪಾತ್ರ ನಿರ್ವಹಿಸಿದ್ದ ಅವರು 2008ರಲ್ಲಿ ಬಂದ ಅದರ ಹಿಂದಿ ರೀಮೇಕ್‌ನಲ್ಲಿಯೂ ಅಮೀರ್ ಖಾನ್ ಎದುರು ಅದೇ ಪಾತ್ರವನ್ನು ನಿರ್ವಹಿಸಿದ್ದರು.
Aamir Khan
ಅಮೀರ್ ಖಾನ್
Updated on

ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ಆಗಸ್ಟ್ 4 ರಂದು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಚಿತ್ರರಂಗವು ಅವರ ಅಗಲಿಕೆಗೆ ಸಂತಾಪ ಸೂಚಿಸಿದೆ. ಇತ್ತ ನಟ ಅಮೀರ್ ಖಾನ್ ಕೂಡ ಅಗಲಿದ ನಟನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

'ವೆರೈಟಿ ಇಂಡಿಯಾ'ದೊಂದಿಗೆ ಮಾತನಾಡಿದ ಅಮೀರ್, 'ಒಬ್ಬ ನಟನಾಗಿ ಅವರು ಅತ್ಯಂತ ಬದ್ಧತೆ ಮತ್ತು ನಿರ್ಭಯತೆಯನ್ನು ಹೊಂದಿದ್ದರು. 'ಗಜಿನಿ' ಚಿತ್ರದಲ್ಲಿ ಪ್ರದೀಪ್‌ಜೀ ಅವರು ಪ್ರಮುಖ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ನಮ್ಮ ಚಿತ್ರರಂಗದಲ್ಲಿನ ಅತ್ಯಂತ ಪ್ರಭಾವಶಾಲಿ ಖಳನಾಯಕನ ಪಾತ್ರಗಳಲ್ಲಿ ಇದೂ ಒಂದು ಎಂದು ನಾನು ಭಾವಿಸುತ್ತೇನೆ. ಅವರು ಇಲ್ಲದೆ ಆ ಚಿತ್ರವು ಅಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ' ಎಂದರು.

'ಲಗಾನ್' ಚಿತ್ರದಲ್ಲಿ ದೇವ್ ಸಿಂಗ್ ಸೋಧಿ ಪಾತ್ರದಲ್ಲಿ ಪ್ರದೀಪ್ ರಾವತ್ ಅವರ ಅಭಿನಯವನ್ನು ಸ್ಮರಿಸಿದ ಅಮೀರ್, ಆ ಪಾತ್ರಕ್ಕೆ ಅವರು ನೀಡಿದ ವಿಶಿಷ್ಟ ಆಕರ್ಷಣೆಗಾಗಿ ಶ್ಲಾಘಿಸಿದರು. 'ಸೋಧಿ ಪಾತ್ರವನ್ನು ಅಂತಹ ವಿಶಿಷ್ಟ ಶೈಲಿ ಮತ್ತು ಆತ್ಮವಿಶ್ವಾಸದಿಂದ ಬೇರೆ ಯಾರೂ ನಿರ್ವಹಿಸಬಹುದಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಅವರು ಬಹುಮುಖ ಪ್ರತಿಭೆಯುಳ್ಳ ನಟರಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು' ಎಂದು ಹೇಳಿದರು.

ಪ್ರದೀಪ್ ರಾವತ್ ಅವರನ್ನು ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು; ನಂತರ ಹೆಚ್ಚಿನ ಚಿಕಿತ್ಸೆಗಾಗಿ ಭಿವಂಡಿಯ ಕ್ಯಾನ್ಸರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಪತ್ನಿ ಮತ್ತು ಪುತ್ರ ವಿಕ್ರಮಾದಿತ್ಯ ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

Aamir Khan
ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ

ತಮಿಳಿನ 'ಗಜಿನಿ'ಯಲ್ಲಿ (2005) ಕ್ರೂರ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅವರು ವ್ಯಾಪಕ ಮನ್ನಣೆ ಪಡೆದರು. ಅವರ ಅಭಿನಯವು ಎಷ್ಟು ಮೆಚ್ಚುಗೆಗೆ ಪಾತ್ರವಾಯಿತೆಂದರೆ, 2008ರಲ್ಲಿ ಬಂದ ಅದರ ಹಿಂದಿ ರೀಮೇಕ್‌ನಲ್ಲಿಯೂ ಅಮೀರ್ ಖಾನ್ ಎದುರು ಅದೇ ಪಾತ್ರವನ್ನು ನಿರ್ವಹಿಸಲು ಅವರನ್ನು ಮತ್ತೆ ಆಯ್ಕೆ ಮಾಡಲಾಯಿತು. ಅವರು ಇದಕ್ಕೂ ಮುನ್ನ 'ಲಗಾನ್' (2001) ಚಿತ್ರದಲ್ಲಿಯೂ ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು.

ಬಿಆರ್ ಚೋಪ್ರಾ ಅವರ ಜನಪ್ರಿಯ ಟೆಲಿವಿಷನ್ ಧಾರಾವಾಹಿ 'ಮಹಾಭಾರತ'ದಲ್ಲಿ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನ ಪಾತ್ರವನ್ನು ನಿರ್ವಹಿಸುವ ಮೂಲಕ ರಾವತ್ ಅವರು ಬಹುತೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

1985ರಲ್ಲಿ 'ಮೇರಿ ಜಂಗ್' ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರೂ, 'ಮಹಾಭಾರತ'ದಲ್ಲಿನ ಅವರ ಪಾತ್ರವೇ ಅವರಿಗೆ ವ್ಯಾಪಕ ಮನ್ನಣೆ ತಂದುಕೊಟ್ಟಿತು.

ಅವರ ವೃತ್ತಿಜೀವನದ ಒಂದು ಪ್ರಮುಖ ಮೈಲಿಗಲ್ಲು ಎಸ್.ಎಸ್. ರಾಜಮೌಳಿ ಅವರ 'ಸೈ' (2004) ಚಿತ್ರದೊಂದಿಗೆ ಬಂದಿತು; ಇದು ಅವರ ತೆಲುಗು ಚೊಚ್ಚಲ ಚಿತ್ರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com