ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!

ಇದು ಎರಡು ವರ್ಷಗಳಿಂದ ನಡೆಯುತ್ತಿತ್ತು, ಆದರೆ ಈಗ ಅಂತಿಮವಾಗಿ ಮುಕ್ತಾಯಗೊಂಡಿದೆ. ಇಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯುವ ಅರ್ಜಿ ಸಲ್ಲಿಸಿದ್ದಾರೆ ಎಂದು ಶಶಿ ಸಿನ್ಹಾ ತಿಳಿಸಿದ್ದಾರೆ.
Govinda's wife Sunita Ahuja
ಪತ್ನಿ ಸುನೀತಾ ಅಹುಜಾ ಜೊತೆಗೆ ನಟ ಗೋವಿಂದಾ
Updated on

ಮುಂಬೈ: ಬಾಲಿವುಡ್ ನಟ ಗೋವಿಂದಾ ಅವರ ದಾಂಪತ್ಯ ಕಿತ್ತಾಟ ಸ್ಫೋಟಕ ತಿರುವು ಪಡೆದಿದ್ದು, ಅವರ ವಿರುದ್ಧ ಪತ್ನಿ ಸುನೀತಾ ಅಹುಜಾ ಹೂಡಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಗೋವಿಂದಾ ಅವರ ಮ್ಯಾನೇಜರ್ ಶಶಿ ಸಿನ್ಹಾ ಬುಧವಾರ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಬುಧವಾರ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಸುನೀತಾ ಅಹುಜಾ ತಮ್ಮ ಪುತ್ರ ಯಶವರ್ಧನ್ ಅಹುಜಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಸುನೀತ್ ಅಹುಜಾ, ವಿಚ್ಛೇದನ ಪ್ರಕರಣವನ್ನು ವಾಪಸ್ ಪಡೆದಿದ್ದಾರೆ. ಅವರು ಎರಡು ವರ್ಷಗಳ ಹಿಂದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ಗೋವಿಂದಾ ಅವರ ಮ್ಯಾನೇಜರ್ ಶಶಿ ಸಿನ್ಹಾ ತಿಳಿಸಿದ್ದಾರೆ.

ಇದು ಎರಡು ವರ್ಷಗಳಿಂದ ನಡೆಯುತ್ತಿತ್ತು, ಆದರೆ ಈಗ ಅಂತಿಮವಾಗಿ ಮುಕ್ತಾಯಗೊಂಡಿದೆ. ಇಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯುವ ಅರ್ಜಿ ಸಲ್ಲಿಸಿದ್ದಾರೆ ಎಂದು ಶಶಿ ಸಿನ್ಹಾ ಸುದ್ದಿಸಂಸ್ಥೆ ಎಎನ್‌ಐ (ANI) ಗೆ ತಿಳಿಸಿದ್ದಾರೆ.

ಈ ಬಗ್ಗೆ ಗೋವಿಂದಾ ಅವರ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, "ಪ್ರಕರಣದ ಆರಂಭದಿಂದಲೂ ಗೋವಿಂದಾ ತಟಸ್ಥವಾಗಿದ್ದಾರೆ. ಇಂದಿಗೂ ಅವರು ಅದೇ ರೀತಿ ಇದ್ದಾರೆ ಎಂದು ಸಿನ್ಹಾ ಹೇಳಿದರು.

ಸುನೀತಾ ಅಹುಜಾ ತಮ್ಮ ಮಗನೊಂದಿಗೆ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ಹೊರಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೋವಿಂದಾ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ಬಗ್ಗೆ ಸುದ್ದಿಗಳು ಹರಿದಾಡಿತ್ತು.

Govinda's wife Sunita Ahuja
'Divorce ತಗೋತಿದ್ದಾರೆ..': ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡ ಸುನೀತಾ ಅಹುಜಾ; ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು?

ಇತ್ತೀಚೆಗಷ್ಟೇ, ತಮ್ಮ ಖ್ಯಾತಿ, ವೃತ್ತಿಜೀವನ ಮತ್ತು ಚಿತ್ರರಂಗದಲ್ಲಿನ ಸ್ಥಾನಮಾನದ ಮೇಲೆ ಪರಿಣಾಮ ಬೀರಬಹುದಾದ ಹೇಳಿಕೆಗಳನ್ನು ನೀಡದಂತೆ ಗೋವಿಂದಾ ಅವರು ತಮ್ಮ ಪತ್ನಿಗೆ ಮನವಿ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com