'ಉದ್ಯೋಗಿಗಳು, ಮಳಿಗೆಗಳ ಸುರಕ್ಷತೆಯೇ ಆದ್ಯತೆ': ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನ ಜಾಹೀರಾತು ಹಿಂಪಡೆದ ಬಗ್ಗೆ GIVA

ಆಗಸ್ಟ್ 26 ರಂದು 'ಗೌರವದ ದೃಷ್ಟಿಯಿಂದ' ಆ ಜಾಹೀರಾತನ್ನು ಹಿಂಪಡೆಯುತ್ತಿರುವುದಾಗಿ GIVA ಘೋಷಿಸಿದ ಕೆಲವೇ ದಿನಗಳ ನಂತರ ಕಂಪನಿಯ ಸಂಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.
Kriti Sanon in Rakshabandhan Ad
ರಕ್ಷಾ ಬಂಧನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಸನೋನ್
Updated on

ಬಾಲಿವುಡ್ ನಟಿ ಕೃತಿ ಸನೋನ್ ಕಾಣಿಸಿಕೊಂಡಿದ್ದ ತಮ್ಮ ರಕ್ಷಾಬಂಧನ ಜಾಹೀರಾತಿನ ಕುರಿತಾದ ವಿವಾದದ ಬಗ್ಗೆ ಆಭರಣ ಬ್ರಾಂಡ್ 'GIVA' ಪ್ರತಿಕ್ರಿಯಿಸಿದ್ದು, ತಮ್ಮ ಉದ್ಯೋಗಿಗಳು ಮತ್ತು ಮಳಿಗೆಗಳ ಸುರಕ್ಷತೆಯ ಕುರಿತಾದ ಕಳವಳಗಳ ಹಿನ್ನೆಲೆಯಲ್ಲಿ ಆ ಜಾಹೀರಾತನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಜಾಹೀರಾತನ್ನು ಹಿಂಪಡೆದಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ ನಂತರ GIVA ಸಂಸ್ಥಾಪಕ ಇಶೇಂದ್ರ ಅಗರ್ವಾಲ್ ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವಿರೋಧ ವ್ಯಕ್ತವಾದ ನಂತರ GIVA ಅಭಿಯಾನ ಮತ್ತು ಅದರ ಸಂದೇಶದಿಂದ ದೂರ ಸರಿದಿದೆ ಎಂಬ ಭಾವನೆ ಇತ್ತು. ಅಭಿಯಾನದ ಉದ್ದೇಶದಲ್ಲಿ ಬ್ರ್ಯಾಂಡ್‌ನ ನಂಬಿಕೆ 'ಬದಲಾಗದೇ ಉಳಿದಿದೆ' ಎಂದು ಅಗರ್‌ವಾಲ್ ಹೇಳಿದ್ದಾರೆ.

ಕೃತಿ ಸನೋನ್ ಅವರ ಸಹಯೋಗದೊಂದಿಗೆ ಈ ಜಾಹೀರಾತನ್ನು ರೂಪಿಸಲಾಗಿದ್ದು, ರಕ್ಷಾ ಬಂಧನವನ್ನು ಕುಟುಂಬ ಮತ್ತು ಒಗ್ಗಟ್ಟಿನ ಹಬ್ಬವಾಗಿ ಬಿಂಬಿಸುವುದು ಇದರ ಉದ್ದೇಶವಾಗಿತ್ತು. ತಮ್ಮ ಕೆಲವು ಮಳಿಗೆಗಳ ಸುತ್ತಲಿನ ಪರಿಸ್ಥಿತಿ ಉಲ್ಬಣಗೊಂಡ ನಂತರ ಈ ಜಾಹೀರಾತನ್ನು ಹಿಂಪಡೆಯಲು 'GIVA' ನಿರ್ಧರಿಸಿತು. ವಿಶೇಷವಾಗಿ ಈ ಆಭರಣ ಬ್ರ್ಯಾಂಡ್ ಇನ್ನೂ ನಷ್ಟದಲ್ಲಿರುವ ಸಂಸ್ಥೆಯಾಗಿರುವುದರಿಂದ, ಕಂಪನಿ ಈ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಬೇಕಾಯಿತು ಎಂದು ಸಂಸ್ಥಾಪಕರು ಹೇಳಿದರು.

ಈ ಕ್ರಮಕ್ಕೆ 'ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನಮ್ಮ ತಂಡಗಳಿಗೆ ಅಸುರಕ್ಷಿತ ವಾತಾವರಣ ಸೃಷ್ಟಿಸುವ ಘಟನೆಗಳು' ಕಾರಣ. ಉದ್ಯೋಗಿಗಳು ಮತ್ತು ಮಳಿಗೆಗಳನ್ನು ರಕ್ಷಿಸುವುದು ಕಂಪನಿಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅಗರ್ವಾಲ್ ತಿಳಿಸಿದರು.

Kriti Sanon in Rakshabandhan Ad
'ನಿಮಗೆಲ್ಲರಿಗೂ ಪ್ರೀತಿ ಮತ್ತು ಸಕಾರಾತ್ಮಕತೆ ಸಿಗಲಿ': ಕೃತಿ ಸನೋನ್ ಉಡುಪಿನ ಕುರಿತು ತೀವ್ರ ಟೀಕೆಗಳ ನಂತರ 'ರಕ್ಷಾ ಬಂಧನ' ಜಾಹೀರಾತು ಹಿಂಪಡೆದ GIVA

ಆಗಸ್ಟ್ 26 ರಂದು 'ಗೌರವದ ದೃಷ್ಟಿಯಿಂದ' ಆ ಜಾಹೀರಾತನ್ನು ಹಿಂಪಡೆಯುತ್ತಿರುವುದಾಗಿ GIVA ಘೋಷಿಸಿದ ಕೆಲವೇ ದಿನಗಳ ನಂತರ ಕಂಪನಿಯ ಸಂಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.

ಆ ಸಂದರ್ಭದಲ್ಲಿ, ತಾವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಗೌರವಿಸುವುದಾಗಿ ಕಂಪನಿಯು ತಿಳಿಸಿತ್ತು. ಅಲ್ಲದೆ, ಕುಟುಂಬಗಳು ಮತ್ತು ಸಾಕುಪ್ರಾಣಿಗಳೊಂದಿಗೆ ರಕ್ಷಾಬಂಧನವನ್ನು ಆಚರಿಸುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿತ್ತು. ಸಮಾಜದ ಕೆಲವು ವರ್ಗಗಳ ಭಾವನೆಗಳಿಗೆ ಆ ಜಾಹೀರಾತು ಅರಿವಿಲ್ಲದೆ ನೋವುಂಟು ಮಾಡಿದ್ದರೆ, ಅದು ಬ್ರ್ಯಾಂಡ್‌ನ ಉದ್ದೇಶವಾಗಿರಲಿಲ್ಲ ಎಂದೂ ಅದು ಹೇಳಿತ್ತು.

ರಕ್ಷಾಬಂಧನವನ್ನು ಆಚರಿಸುವ ಈ ಜಾಹೀರಾತಿನಲ್ಲಿ, ಕೃತಿ ಸನೋನ್ ಅವರು ಕೇಪ್ (cape) ಮತ್ತು ಡ್ರೇಪ್ಡ್ ಸ್ಕರ್ಟ್‌ನೊಂದಿಗೆ ಬ್ರಾಲೆಟ್-ಶೈಲಿಯ ಬ್ಲೌಸ್ ಧರಿಸಿದ್ದರು. ಕುಟುಂಬದ ಸದಸ್ಯನಂತೆಯೇ ಪರಿಗಣಿಸಲಾದ ನಾಯಿಯೊಂದಕ್ಕೆ ಅವರು ರಾಖಿ ಕಟ್ಟುವುದನ್ನೂ ಇದರಲ್ಲಿ ತೋರಿಸಲಾಗಿತ್ತು.

Kriti Sanon in Rakshabandhan Ad
'ಮಹಿಳೆಯರು ಏನು ಧರಿಸಬೇಕೆಂದು ಹೇಳುವುದನ್ನು ನಿಲ್ಲಿಸಿ': ಕಂಗನಾ ರಣಾವತ್ ಟೀಕೆಗೆ ಕೃತಿ ಸನೋನ್ ತಿರುಗೇಟು

ಸಾಂಪ್ರದಾಯಿಕ ಹಬ್ಬಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸುವುದರೊಂದಿಗೆ, ಈ ಅಭಿಯಾನವು ಟೀಕೆಗೆ ಗುರಿಯಾಯಿತು. ಜೊತೆಗೆ, ಸಾಕುಪ್ರಾಣಿಯನ್ನು ಇದರಲ್ಲಿ ಸೇರಿಸಿಕೊಂಡಿದ್ದೂ ಸಹ ಚರ್ಚೆಯ ವಿಷಯವಾಯಿತು.

ಈ ವಿವಾದವು ಶೀಘ್ರದಲ್ಲೇ ರಾಜಕೀಯ ರಂಗಕ್ಕೂ ವ್ಯಾಪಿಸಿತು. ಬಿಜೆಪಿ ಸಂಸದೆ ಕಂಗನಾ ರಣಾವತ್ ಈ ಅಭಿಯಾನವನ್ನು ಟೀಕಿಸಿ ಸನೋನ್ ಅವರ ವಸ್ತ್ರವಿನ್ಯಾಸದ ಬಗ್ಗೆ ಪ್ರಶ್ನೆ ಎತ್ತಿದರೆ, ರಾಹುಲ್ ಗಾಂಧಿ ಅವರು ಕೃತಿ ಸನೋನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಜಾಹೀರಾತಿಗೆ ಸಂಬಂಧಿಸಿದ ಟೀಕೆಗಳಿಗೆ ಸನೋನ್ ಕೂಡ ಪ್ರತಿಕ್ರಿಯಿಸಿದರು. ಹಬ್ಬವೊಂದರ ಮಹತ್ವವನ್ನು ಮಹಿಳೆಯ ಉಡುಪಿನ ಆಧಾರದ ಮೇಲೆ ನಿರ್ಧರಿಸಬಾರದು ಎಂದು ಅವರು ಪ್ರತಿಪಾದಿಸಿದರು.

X
Kannada Prabha
www.kannadaprabha.com