ಆಲಿಯಾ ಭಟ್ ಅಭಿನಯದ ಆಲ್ಫಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್; ಮೊದಲ ದಿನವೇ 17.42 ಕೋಟಿ ರೂ. ಗಳಿಕೆ

'ಆಲ್ಫಾ ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ. ಮೊದಲ ದಿನವೇ ವಿಶ್ವಾದ್ಯಂತ 17.42 ಕೋಟಿ ರೂ. ಗಳಿಸಿದೆ' ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Alia Bhatt And Sharvari's Bikini Scene
ಆಲಿಯಾ ಭಟ್, ಶಾರ್ವರಿ
Updated on

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಶಾರ್ವರಿ ಅಭಿನಯದ ಆಲ್ಫಾ ಸಿನಿಮಾ ಶುಕ್ರವಾರ ತೆರೆ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿದೆ.

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 17.42 ಕೋಟಿ ರೂ. ಗಳಿಸಿದೆ ಎಂದು ಸಿನಿಮಾ ನಿರ್ಮಾಪಕರು ಶನಿವಾರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬಾಕ್ಸ್ ಆಫೀಸ್ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ.

'ಆಲ್ಫಾ ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ. ಮೊದಲ ದಿನವೇ ವಿಶ್ವಾದ್ಯಂತ 17.42 ಕೋಟಿ ರೂ. ಗಳಿಸಿದೆ' ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

Alia Bhatt And Sharvari's Bikini Scene
'Masterclass In Garbage Filmmaking':' ಅಲ್ಫಾ' ದಲ್ಲಿ ಆಲಿಯಾ ಭಟ್, ಶಾರ್ವರಿ ಬಿಕಿನಿ ದೃಶ್ಯಗಳಿಗೆ ನೆಟ್ಟಿಗರ ಆಕ್ರೋಶ!

ಈ ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 11.20 ಕೋಟಿ ರೂ. ಮತ್ತು ವಿದೇಶಗಳಲ್ಲಿ 6.22 ಕೋಟಿ ರೂ. ಗಳಿಸಿದೆ.

ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಶಿವ್ ರಾವೈಲ್ ನಿರ್ದೇಶಿಸಿದ್ದು, ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ.

ಈ ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಫ್ರ್ಯಾಂಚೈಸಿಯಲ್ಲಿ ಈಗಾಗಲೇ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್ 3 ಮತ್ತು ವಾರ್ 2ನಂತಹ ಹಿಟ್​ ಸಿನಿಮಾಗಳು ಮೂಡಿ ಬಂದಿವೆ.

ಈ ಚಿತ್ರವು ಶುಕ್ರವಾರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com