Matching Bracelets! ಸಿರಾಜ್ ಅಲ್ಲ, ಅಭಿಷೇಕ್ ಶರ್ಮಾ ಜೊತೆಗೆ ಮಹಿರಾ ಶರ್ಮಾ ಡೇಟಿಂಗ್?

ಇವರಿಬ್ಬರೂ ಒಂದೇ ರೀತಿಯ ಹಸಿರು ಬಣ್ಣದ ಬ್ರೇಸ್ ಲೇಟ್ ಧರಿಸಿದ್ದಾರೆ ಎಂದು ಅಭಿಮಾನಿಗಳು ಗುರುತಿಸಿದಾಗಿನಿಂದ ಈ ಪ್ರೇಮಕಥೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
Abhishek Sharma  and
ಅಭಿಷೇಕ್ ಶರ್ಮಾ ಜೊತೆಗೆ ಮಹಿರಾ ಶರ್ಮಾ
Updated on

ಬಾಲಿವುಡ್ ನಟಿ ಮಹಿರಾ ಶರ್ಮಾ ಜೊತೆಗೆ ಕ್ರಿಕೆಟಿಗ ಅಭಿಷೇಕ್ ಶರ್ಮಾ ಡೇಟಿಂಗ್ ಬಗ್ಗೆ ವದಂತಿಗಳು ಹರಿದಾಡುತ್ತಿದೆ. ಒಂದೇ ರೀತಿಯ ಬ್ರೇಸ್ ಲೇಟ್ ಈ ವದಂತಿಗಳಿಗೆ ಪ್ರಮುಖ ಕಾರಣವಾಗಿದೆ.

ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಇಬ್ಬರು ಬ್ರೇಸ್ ಲೇಟ್ ಫೋಟೋ ಪೋಸ್ಟ್ ಮಾಡಿದ ನಂತರ ಅವರಿಬ್ಬರ ಸಂಬಂಧದ ಬಗ್ಗೆ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿದೆ. ಆದರೆ ಇಲ್ಲಿಯವರೆಗೆ ಡೇಟಿಂಗ್ ಕುರಿತ ವರದಿಗಳು ದೃಢೀಕರಿಸಲ್ಪಟ್ಟಿಲ್ಲ, ಯಾರು ಕೂಡಾ ಯಾವುದೇ ಹೇಳಿಕೆ ನೀಡಿಲ್ಲ.

ಇವರಿಬ್ಬರೂ ಒಂದೇ ರೀತಿಯ ಹಸಿರು ಬಣ್ಣದ ಬ್ರೇಸ್ ಲೇಟ್ ಧರಿಸಿದ್ದಾರೆ ಎಂದು ಅಭಿಮಾನಿಗಳು ಗುರುತಿಸಿದಾಗಿನಿಂದ ಈ ಪ್ರೇಮಕಥೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅಂದಿನಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಊಹಾಪೋಹಗಳು ಹರಡುತ್ತಿವೆ.

Abhishek Sharma  and
BiggBoss ಖ್ಯಾತಿಯ ಮಹಿರಾ ಶರ್ಮಾ ಜೊತೆ ಮೊಹಮ್ಮದ್ ಸಿರಾಜ್ ಸುತ್ತಾಟ; ಪ್ರಣಯ ಪಕ್ಷಿಗಳ Video!

ವ್ಯಾಪಕ ವದಂತಿಯ ಹೊರತಾಗಿಯೂ, ಮಹಿರಾ ಶರ್ಮಾ ಅಥವಾ ಅಭಿಷೇಕ್ ಶರ್ಮಾ ವದಂತಿಗಳನ್ನು ಸ್ಪಷ್ಪಪಡಿಸಿಲ್ಲ ಅಥವಾ ಅವರ ನಡುವಿನ ಸಂಬಂಧವನ್ನು ದೃಢೀಕರಿಸುವ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಈ ಹಿಂದೆ ಮಹಿರಾ ಶರ್ಮಾ ,ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಅನ್ನುವ ವದಂತಿಗಳು ಹರಿದಾಡಿತ್ತು. ಆದಾಗ್ಯೂ, ಮಹಿರಾ ಮತ್ತು ಸಿರಾಜ್ ಇಬ್ಬರೂ ವರದಿಗಳನ್ನು ತಳ್ಳಿಹಾಕಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com