ರಿಷಿಕೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಬೈಕ್ ರೈಡ್! 'ಹರ ಹರ ಗಂಗೇ' ಘೋಷಣೆ- Video

ಯಾವುದೇ ಪ್ರಚಾರವಿಲ್ಲ, ಕುಟುಂಬವಿಲ್ಲ, ಗದ್ದಲವಿಲ್ಲದೆ ರವೀಂದ್ರ ಟಂಡನ್ ಗಂಗೆಯ ದರ್ಶನ ಮಾಡಿದ್ದು, ಬೈಕ್ ನಲ್ಲಿ ತೆರಳುವಾಗ ಭಕ್ತಿಯಿಂದ ಹರ ಹರ ಗಂಗೇ ಎಂದು ಘೋಷಣೆ ಕೂಗಿದ್ದಾರೆ. ಇದು ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದೆ.
Raveena Tandon
ರವೀನಾ ಟಂಡನ್
Updated on

ಬಾಲಿವುಡ್ ನಟಿ ರವೀನಾ ಟಂಡನ್ ಆಗಾಗ್ಗೆ ಜನರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈ ಬಾರಿ ಸಿನಿಮಾ ಅಥವಾ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿಲ್ಲ. ಬದಲಿಗೆ ಸಾಮಾನ್ಯ ಜನರಂತೆ ಸ್ಕೂಟರಿ ಸವಾರಿ ಮಾಡುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು. ಉತ್ತರಾಖಂಡದ ರಿಷಿಕೇಶದಲ್ಲಿರುವ ರಾಮ್ ಜೂಲಾ ಬಳಿಯ ರಸ್ತೆಯಲ್ಲಿ ರವೀಂದ್ರ ಟಂಡನ್ ಸ್ಕೂಟರ್ ಹಿಂದೆ ಕುಳಿತು ಪ್ರಯಾಣಿಸಿದ್ದಾರೆ. ಈ ವೇಳೆ ಅವರು ಧಾರ್ಮಿಕ ಚಿಹ್ನೆ ಹೊಂದಿರುವ ಹಳದಿ ದುಪಟ್ಟಾದೊಂದಿಗೆ ಸರಳ ಹತ್ತಿ ಸೀರೆ ಧರಿಸಿರುವುದು ಕಂಡುಬಂದಿದೆ.

ಯಾವುದೇ ಪ್ರಚಾರವಿಲ್ಲ, ಕುಟುಂಬವಿಲ್ಲ, ಗದ್ದಲವಿಲ್ಲದೆ ರವೀಂದ್ರ ಟಂಡನ್ ಗಂಗೆಯ ದರ್ಶನ ಮಾಡಿದ್ದು, ಬೈಕ್ ನಲ್ಲಿ ತೆರಳುವಾಗ ಭಕ್ತಿಯಿಂದ ಹರ ಹರ ಗಂಗೇ ಎಂದು ಘೋಷಣೆ ಕೂಗಿದ್ದಾರೆ. ಇದು ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದೆ.

Raveena Tandon
ಮಹಾಕುಂಭ ಮೇಳ: ಪವಿತ್ರ ಸ್ನಾನದ ವೇಳೆ ಕತ್ರಿನಾ ಕೈಫ್ ವಿಡಿಯೋ ರೆಕಾರ್ಡ್; 'ಅಸಹ್ಯಕರ' ಎಂದ ರವೀನಾ ಟಂಡನ್
Raveena Tandon
ನಟಿ ರವೀನಾ ಟಂಡನ್ ವಿರುದ್ಧದ ಪ್ರಕರಣ: ತನಿಖೆ ನಡೆಸಲು ಪೊಲೀಸರಿಗೆ ಕೋರ್ಟ್ ಆದೇಶ

ರವೀನಾ ಅವರ ಸರಳ, ನೈಜ ಬದುಕಿಗೆ ಜನರು ಮನಸೋತಿದ್ದು ಪ್ರೀತಿ ಮತ್ತು ಮೆಚ್ಚುಗೆಯಿಂದ ಪೋಸ್ಟ್ ಮಾಡುತ್ತಿದ್ದಾರೆ. ಆಕೆ ಜೀವನವನ್ನು ಆನಂದಿಸುತ್ತಿದ್ದಾಳೆ!" ಎಂದು ಬಳಕೆದಾರನೊಬ್ಬ ಎಕ್ಸ್ ನಲ್ಲಿ ಬರೆದಿದ್ದರೆ, ಇತರರು, "ತುಂಬಾ ಚೆನ್ನಾಗಿದೆ, ನೀವು ಎಲ್ಲರಿಗಿಂತ ಭಿನ್ನರು, ನಿಮ್ಮಂತಹ ನಟಿ ಇಲ್ಲ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com