

ಹಿಂದಿಯ ಕುಂಕುಮ್ ಭಾಗ್ಯ ಧಾರಾವಾಹಿ ಖ್ಯಾತಿಯ ನಟಿ ಸಂಚಿತಾ ಉಗಾಳೆ 22ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡಿದ್ದಾರೆ. ಭಾನುವಾರ ರಾತ್ರಿ 7.30ಕ್ಕೆ ಮುಂಬೈನ ತಮ್ಮ ನಿವಾಸದಲ್ಲಿಯೇ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸಂಚಿತ 'ಕುಂಕುಮ್ ಭಾಗ್ಯ' ಧಾರಾವಾಹಿ ಮತ್ತು ಜನಪ್ರಿಯ ಚಿತ್ರ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದಲ್ಲಿಯೂ ನಟಿಸಿದ್ದರು.
ನಟಿಯ ತಂದೆ ಎನ್‌ಡಿಟಿವಿ ಜೊತೆ ಮಾತನಾಡಿ, ಸಾಯುವ ಮೊದಲು ಭಾವನಾತ್ಮಕವಾಗಿ ತುಂಬಾ ಕಷ್ಟಪಡುತ್ತಿದ್ದರು. ಮೇಲ್ನೋಟಕ್ಕೆ ಅವರು ಸಾಮಾನ್ಯವಾಗಿ ಕಾಣಿಸಿಕೊಂಡರೂ ಸಹ ಆಗಾಗ್ಗೆ ತೊಂದರೆಗೊಳಗಾಗುತ್ತಿದ್ದರು. ಅವರು ನಿರಂತರ ಒತ್ತಡದಲ್ಲಿದ್ದರು ಮತ್ತು ಕೆಲವು ಬೇಡಿಕೆಗಳಿಗಾಗಿ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎಂದು ಆರೋಪಿಸಿದ್ದಾರೆ.
ಸಂಚಿತಾ ಅವರ ತಂದೆ ಮಚ್ಚಿಂದ್ರ ಉಗಾಳೆ, 'ಆಕೆ ಆಗ್ಗಾಗ್ಗೆ ಅಸಮಾಧಾನಗೊಳ್ಳುತ್ತಿದ್ದಳು. ಕಾರಣ ಏನೆಂಬುದನ್ನು ನಮಗೆ ಹೇಳುತ್ತಿರಲಿಲ್ಲ. ಒಳ್ಳೆಯ ಮನಸ್ಥಿತಿಯಲ್ಲಿದ್ದಾಗಲೂ, ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾಗುತ್ತಿದ್ದಳು' ಎಂದು ಹೇಳಿದರು.
'ನಾವು ಇದನ್ನು ಗಮನಿಸಿದ್ದೆವು. ಅದಕ್ಕಾಗಿಯೇ ನಾವು ಪ್ರತಿದಿನ ಅವಳೊಂದಿಗೆ ಹೋಗುತ್ತಿದ್ದೆವು. ಆ ಕೇವಲ ಅರ್ಧಗಂಟೆ ಅವಳೊಂದಿಗೆ ಇಲ್ಲದಿದ್ದಾಗ ಆಕೆ ತಪ್ಪು ನಿರ್ಧಾರ ಕೈಗೊಂಡಿದ್ದಾಳೆ. ಇದು ನಮ್ಮ ತಪ್ಪು ಎಂದು ನೀವು ಪರಿಗಣಿಸಬಹುದು. ಆದರೆ, ಆಕೆ ಅಂತಹ ಹೆಜ್ಜೆ ಇಡುತ್ತಾಳೆ ಎಂದು ನಮಗೆ ತಿಳಿದಿರಲಿಲ್ಲ' ಎಂದರು.
'ನಾವು ಆಕೆಯೊಂದಿಗೆ ಮಾತನಾಡಿದ್ದೆವು. ಆದರೆ, ಯಾರೋ ಒಬ್ಬರು ಆಕೆಗೆ ತೊಂದರೆ ನೀಡುತ್ತಿದ್ದರು, ಹಣ ಅಥವಾ ಬೇರೆ ಯಾವುದೋ ವಿಷಯಕ್ಕೆ ಬೇಡಿಕೆಗಳನ್ನು ಇಡುತ್ತಿದ್ದರು. ಹೀಗಾಗಿಯೇ, ನಿರಂತರ ಒತ್ತಡ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದಳು. ಇದು ಒಂದೇ ಅಲ್ಲ, ಇದೊಂದು ರೂಪದಲ್ಲಿ ನಡೆಯುತ್ತಿತ್ತು. ಆದರೆ, ಈಗ ನನಗೆ ಸ್ಪಷ್ಟವಾಗಿದೆ. ಖಂಡಿತವಾಗಿಯೂ ಇದು ನಡೆಯುತ್ತಿತ್ತು' ಎಂದು ದೂರಿದರು.
ಆಡಳಿತಕ್ಕೆ ನನ್ನ ಒಂದೇ ಒಂದು ವಿನಂತಿ ಇದೆ. ನನ್ನ ಮಗಳಿಗೆ ಏನೇ ತಪ್ಪಾಗಿದ್ದರೂ, ಅದಕ್ಕೆ ಅವಳಿಗೆ ನ್ಯಾಯ ಸಿಗಬೇಕು. ನನ್ನ ಮಗಳು ಮತ್ತು ಭಾರತದ ಎಲ್ಲ ಹೆಣ್ಣುಮಕ್ಕಳು ನ್ಯಾಯಕ್ಕೆ ಅರ್ಹರು. ಹೀಗಾಗಿ, ನನ್ನ ಮಗಳಿಗೆ ನ್ಯಾಯ ಸಿಗಬೇಕು ಮತ್ತು ಭಾರತದ ಪ್ರತಿಯೊಬ್ಬ ಹೆಣ್ಣುಮಗಳಿಗೂ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘಟನೆ ಜೂನ್ 14 ರಂದು ನಲಸೋಪರಾ ಪೂರ್ವದ ಅಚೋಲೆ ಗ್ರಾಮದಲ್ಲಿರುವ ಸಾಯಿ ಸಂತೋಷಿ ಕಟ್ಟಡದಲ್ಲಿರುವ ಸಂಚಿತಾ ಅವರ ನಿವಾಸದಲ್ಲಿ ನಡೆದಿದೆ.
Advertisement