'ಹಿಂದಿಯಲ್ಲಿ ಹಾಡನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಾನು ಆರಂಭದಲ್ಲೇ ಹೇಳಿದ್ದೆ, ನಿರ್ದೇಶಕ ಪ್ರೇಮ್ ಗೆ ಕಾಂಟ್ರೊವರ್ಸಿ ಆಗ್ಬೇಕಿತ್ತು': ಸಾಹಿತಿ ರಕೀಬ್ ಆಲಂ

ಹಿಂದಿ ಆವೃತ್ತಿಯ ಸಾಹಿತ್ಯಗಾರ ರಕೀಬ್ ಆಲಂ ಈ ವಿವಾದದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
Lyricist Raqueeb Alam, Screenshot of song Sarke Chunar
ಗೀತ ಸಾಹಿತಿ ರಕೀಬ್ ಆಲಂ ಮತ್ತು ಹಾಡಿನ ದೃಶ್ಯ
Updated on

ಕೆಡಿ: ದ ಡೆವಿಲ್ ಚಿತ್ರದ ಸರ್ಸೆ ನಿನ್ನಾ ಸೆರಗು ಸರ್ಸೆ ಹಾಡನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಹಿಂದಿಯಲ್ಲಿ “ಸರ್ಕೆ ಚುನ್ನರ್ ತೆರಿ ಸರ್ಕೆ” ಹಾಡಿನ ಸಾಲಿಗಂತೂ ತೀವ್ರ ಟೀಕೆ ವ್ಯಕ್ತವಾಗಿದ್ದು ಯೂಟ್ಯೂಬ್ ನಿಂದ ಲಿರಿಕ್ಸ್ ವಿಡಿಯೊ ಡಿಲೀಟ್ ಆಗಿದೆ.

ಜನರ ಆಕ್ರೋಶ, ದೂರುಗಳು ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ನೀಡಿದ ಕಾನೂನು ನೊಟೀಸ್ ನಂತರ, ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳಿಂದ ತೆಗೆದುಹಾಕಲಾಗಿದೆ. ಕನ್ನಡ, ತಮಿಳು ಮತ್ತು ತೆಲುಗು ಆವೃತ್ತಿಗಳು ಇನ್ನೂ ಲಭ್ಯವಿವೆ.

ಹಿಂದಿ ಆವೃತ್ತಿಯ ಸಾಹಿತ್ಯಗಾರ ರಕೀಬ್ ಆಲಂ ಈ ವಿವಾದದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕನ್ನಡ ಭಾಷೆಯಿಂದ ಯಥಾವತ್ತಾಗಿ ಹಿಂದಿಗೆ ಪ್ರತಿಸಾಲು ಮತ್ತು ಪದಗಳನ್ನು ಅನುವಾದ ಮಾಡಿದ್ದು, ಅಶ್ಲೀಲ ಸಾಹಿತ್ಯಕ್ಕೆ ತಾವು ಕಾರಣವಲ್ಲ ಎಂದು ವಾದಿಸಿದ್ದಾರೆ.

ನಿರ್ದೇಶಕ ಪ್ರೇಮ್ ನನ್ನನ್ನು ಹಾಡು ಬರೆಯಲು ಕೇಳಿದಾಗ, ನಾನು ಆರಂಭದಲ್ಲಿ ನಿರಾಕರಿಸಿದ್ದೆ. ನಾನು ಬರೆಯಬೇಕಾದರೆ ನನ್ನ ರೀತಿಯಲ್ಲಿ ಬರೆಯುತ್ತೇನೆ ಎಂದು ಹೇಳಿದ್ದೆ. ನಾನೇ ಸಾಹಿತ್ಯ ಬರೆದಿದ್ದು, ಅದನ್ನು ಯಥಾವತ್ತಾಗಿ ಹಿಂದಿಗೆ ಅನುವಾದಿಸಿ ಎಂದು ಹೇಳಿದರು ಎಂದು ಆಲಂ ಹೇಳುತ್ತಾರೆ.

ಪ್ರೇಮ್ ಅವರಿಗೆ ಚಿತ್ರದ ಪ್ರಚಾರಕ್ಕಾಗಿ ಹೈಪ್ ಬೇಕಿತ್ತು, ವಿವಾದವಾಗಬೇಕಿತ್ತು. ನಾನು ಈ ಹಾಡು ಸೆನ್ಸಾರ್ ಆಗುತ್ತದೆ ಎಂದು ಹೇಳಿದ್ದೆ. ಆದರೆ ಯೂಟ್ಯೂಬ್‌ನಲ್ಲಿ ಮೊದಲು ಬಿಡುಗಡೆ ಮಾಡಿ ಹೈಪ್ ಸೃಷ್ಟಿಸಬಹುದು ಎಂದು ಪ್ರೇಮ್ ಯೋಚಿಸಿದ್ದಿರಬಹುದು ಎಂದು ಆಲಂ ಹೇಳುತ್ತಾರೆ.

Lyricist Raqueeb Alam, Screenshot of song Sarke Chunar
'ಪ್ರೇಮ್ ಅವರನ್ನು ಪ್ರಶ್ನಿಸುವ ಹಕ್ಕಿದೆ, ನಿಂದಿಸುವುದು ಸರಿಯಲ್ಲ': ಪತಿಯ ಬೆನ್ನಿಗೆ ನಿಂತ ರಕ್ಷಿತಾ ಪ್ರೇಮ್

ನನ್ನ ಹೆಸರನ್ನು ಹಾಡಿಗೆ ಸೇರಿಸಬೇಡಿ ಎಂದು ಕೂಡ ಕೇಳಿಕೊಂಡಿದ್ದೆ. ನಾನು ಅವರಿಗೆ ಈ ಹಾಡು ಹಿಂದಿಯಲ್ಲಿ ಪ್ರಸಾರವಾಗಲು ಸಾಧ್ಯವಿಲ್ಲ, ಸಾಹಿತ್ಯ, ಬಹಳ ಅಸಭ್ಯವಾಗಿದೆ ಎಂದು ಹೇಳಿದ್ದೆ. ಆದರೆ ಅವರು ಪದೇಪದೇ ಅನುವಾದ ಮಾಡಲು ಒತ್ತಾಯಿಸಿದರು. ಆಗ ನಾನು ಅನುವಾದ ಮಾಡುತ್ತೇನೆ, ಆದರೆ ನನಗೆ ಕ್ರೆಡಿಟ್ ಕೊಡಬೇಡಿ ಎಂದು ಹೇಳಿದೆ ಎನ್ನುತ್ತಾರೆ.

ನಂತರ ನಿರ್ದೇಶಕರ ಸಹಾಯಕ ಅಯ್ಯಪ್ಪ ಅವರೊಂದಿಗೆ ಕುಳಿತು ಕನ್ನಡದಿಂದ ಹಿಂದಿಗೆ ಹಾಡನ್ನು ಅನುವಾದ ಮಾಡಲಾಗಿದೆ ಎಂದು ಆಲಂ ತಿಳಿಸಿದ್ದಾರೆ.

ನಿರ್ದೇಶಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹಾಡಿಗೆ ಸಂಗೀತವನ್ನು ರೂಪಿಸಿದರು ಎಂದರು. ವಿವಾದದ ಬಗ್ಗೆ ತಿಳಿದ ನಂತರ, ನಿರ್ದೇಶಕರಿಗೆ ಕರೆ ಮಾಡಿ ಹಾಡನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದೇನೆ ಎಂದು ಆಲಂ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com