

ನಿರ್ದೇಶಕ ಆದಿತ್ಯ ಧರ್ ಅವರ ಧುರಂಧರ್: ದ ರಿವೆಂಜ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಓಟವನ್ನು ಮುಂದುವರಿಸುತ್ತಿದೆ.
ಸೆಲೆಬ್ರಿಟಿ ಮೆಕಪ್ ಆರ್ಟಿಸ್ಟ್ ಪ್ರೀತಿಶೀಲ್ ಸಿಂಗ್ ಅವರು ಹಂಚಿಕೊಂಡ ಬಿಹೈಂಡ್-ದಿ-ಸೀನ್ಸ್ ವಿಡಿಯೋ ಚಿತ್ರದ ಸುತ್ತಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಡಿಯೋದಲ್ಲಿ ರಣವೀರ್ ಸಿಂಗ್ ಅವರ ‘Ghost Born of Shadows’ ಲುಕ್‌ಗಾಗಿ ಮಾಡಿದ ಮೇಕಪ್ ನಲ್ಲಿ ಟ್ರಾನ್ಸ್ ಫಾರ್ಮೇಷನ್ ತೋರಿಸಲಾಗಿದೆ.
ವಿಡಿಯೋದಲ್ಲಿ ನಟ ಶಾಂತವಾಗಿ ಕುಳಿತಿರುವಾಗ, ಕಲಾವಿದರ ತಂಡ ಅವರ ಮುಖವನ್ನು ಹಂತ ಹಂತವಾಗಿ ಬಣ್ಣ ಹಚ್ಚಿ ಭಯಾನಕ ಲುಕ್ ನಿರ್ಮಿಸುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋವನ್ನು ಹಂಚಿಕೊಂಡಾಗ ಪ್ರೀತಿಶೀಲ್ ಸಿಂಗ್, “ಮನಸ್ಸು ದಣಿದಾಗ, ಭ್ರಮೆ ನಾವು ನಂಬಲು ಬಯಸುವ ಬಣ್ಣಗಳಲ್ಲಿ ಸುಳ್ಳುಗಳನ್ನು ಚಿತ್ರಿಸುತ್ತದೆ. ರಣವೀರ್ ಸಿಂಗ್ ಅವರನ್ನು ‘Ghost born of Shadows’ ಆಗಿ ಪರಿವರ್ತಿಸುತ್ತಿದ್ದೇವೆ! ಎಂದು ಬರೆದಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಅನೇಕರು ಈ ಲುಕ್ ವಿಎಫ್ ಎಕ್ಸ್ ಅಥವಾ ಸಿಜಿಐ ಮೂಲಕ ಮಾಡಲಾಗಿದೆ ಎಂದು ಭಾವಿಸಿದ್ದರು. ಒಬ್ಬ ಬಳಕೆದಾರ, “ವಾವ್ಙ್ ! ನಾನು ವಿಎಫ್ ಎಕ್ಸ್ ಅಂತ ಅನಿಸಿಕೊಂಡಿದ್ದೆ,” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ನನಗೆ ಇದು ಎಐ ಅಥವಾ ಸಿಜಿಐ ಅಂತ ತೋಚಿತ್ತು” ಎಂದು ಹೇಳಿದ್ದಾರೆ. ಜಿಯೊ ಸ್ಟುಡಿಯೊಸ್ ಕೂಡ ಕಾಮೆಂಟ್‌ನಲ್ಲಿ ಅಬ್ಬಾ ಎಂಥಹ ಮೇಕ್ ಓವರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಧುರಂಧರ್: ದ ರಿವೆಂಜ್ ಮಾರ್ಚ್ 19 ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದರೂ, ರಣವೀರ್ ಸಿಂಗ್ ಅವರ ಅಭಿನಯ ಪ್ರಮುಖ ಆಕರ್ಷಣೆಯಾಗಿದ್ದು, ಹಲವರು ಇದನ್ನು ಅವರ ಕರಿಯರ್‌ನ ಅತ್ಯುತ್ತಮ ಪ್ರದರ್ಶನವೆಂದು ಹೇಳಿದ್ದಾರೆ.
ಚಿತ್ರಕ್ಕೆ ಚಿತ್ರರಂಗದ ಹಲವಾರು ಗಣ್ಯರಿಂದಲೂ ಪ್ರಶಂಸೆ ಸಿಕ್ಕಿದೆ. ಕಂಗನಾ ರಾನಾವತ್ ಅವರು ಆದಿತ್ಯ ಧರ್ ಅವರನ್ನು ಸೂಪರ್‌ಸ್ಟಾರ್ ನಿರ್ದೇಶಕ ಎಂದು ಕೊಂಡಾಡಿದ್ದಾರೆ. ಜಾಗತಿಕ ಸಿನೆಮಾದಲ್ಲಿ ಸ್ಟೀವನ್ ಸ್ಪಿಲ್ ಬರ್ಗ್, ಕ್ವಿಂಟಿನ್ ಟರಂಟಿನೊ ಮತ್ತು ಕ್ರಿಸ್ಟೊಫರ್ ನೊಲನ್ ಅವರಂತಹ ನಿರ್ದೇಶಕರು ಪ್ರಮುಖ ಸೃಜನಶೀಲ ಶಕ್ತಿಗಳಾಗಿರುವುದನ್ನು ಉಲ್ಲೇಖಿಸಿ, ಧರ್ ಅವರ ಯಶಸ್ಸು ಹೊಸ ನಿರ್ದೇಶಕರಿಗೆ ಪ್ರೇರಣೆ ನೀಡಬಹುದು ಎಂದು ಹೇಳಿದ್ದಾರೆ.
ಎಸ್ ಎಸ್ ರಾಜಮೌಳಿ ಅವರು ಚಿತ್ರವನ್ನು ಹಿಟ್ ಮಾಡಿದೆ ಎಂದು ಪ್ರಶಂಸಿಸಿದರೆ, ರಾಕೇಶ್ ರೋಶನ್ ಇದು ಹೊಸ ಚಲನಚಿತ್ರ ಯುಗವನ್ನು ಆರಂಭಿಸಿದೆ ಎಂದು ಹೇಳಿದ್ದಾರೆ. ನಟರಾದ ಮಹೇಶ್ ಬಾಬು, ಜೂನಿಯರ್ ಎನ್ ಟಿಆರ್, ಅಲ್ಲು ಅರ್ಜುನ್ ಕೂಡ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಆರ್ ಮಾಧವನ್, ರಾಕೇಶ್ ಬೇಡಿ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
Advertisement