ಬಾಲಿವುಡ್ ನಟಿ ದಾಂಪತ್ಯ ಬ್ರೇಕ್? ಗಂಡನನ್ನು ಅನ್‌ಫಾಲೋ ಮಾಡಿದ ಮೌನಿ ರಾಯ್!

ಆದರೆ 2024ರಲ್ಲಿ ಅಪ್‌ಲೋಡ್‌ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್‌ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ.
Suraj nambiyar And mouni roy
ಸೂರಜ್ ನಂಬಿಯಾರ್ ಮತ್ತು ಮೌನಿ ರಾಯ್
Updated on

ನಟಿ ಮೌನಿ ರಾಯ್‌ ಹಾಗೂ ಸೂರಜ್‌ ನಂಬಿಯಾರ್‌ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಬೇರೆಯವರನ್ನು ಫಾಲೋ ಮಾಡುತ್ತಿರುವ ಇವರಿಬ್ಬರು ಮಾತ್ರ ಫಾಲೋ ಮಾಡ್ತಿಲ್ಲ.

ಆದರೆ 2024ರಲ್ಲಿ ಅಪ್‌ಲೋಡ್‌ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್‌ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ.

ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ದಂಪತಿಯ ಫೋಟೋಗಳನ್ನು ಡಿಲಿಟ್‌ ಮಾಡಿದರೆ, ಸೋಶಿಯಲ್‌ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದರೆ, ಅಥವಾ ನಟಿ ತನ್ನ ಪತಿಯ ಸರ್‌ನೇಮ್‌ ತೆಗೆದು ಹಾಕಿದರೆ ಡಿವೋರ್ಸ್‌ ಎಂದು ಗಾಸಿಪ್‌ ಶುರುವಾಗುತ್ತದೆ.

ಮೌನಿ ರಾಯ್‌ ಅವರು ಹಿಂದಿ ಕಿರುತೆರೆಯಲ್ಲಿ ಫೇಮಸ್‌ ಆಗಿದ್ದಾರೆ.'ನಾಗಿನ್'‌ ಧಾರಾವಾಹಿಯಲ್ಲಿ ಮೌನಿ ನಟಿಸಿದ್ದರು. ಅಷ್ಟೇ ಅಲ್ಲದೆ ಕೆಲ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಕೂಡ ಆಗಿದ್ದರು. ಅಂದಹಾಗೆ ಸೂರಜ್‌ ಅವರು ಬೆಂಗಳೂರು ಮೂಲದವರು.

Suraj nambiyar And mouni roy
ಪತ್ನಿ ಡಿವೋರ್ಸ್ ಗೆ ಅರ್ಜಿ ಹಾಕಿದ ಬೆನ್ನಲ್ಲೇ ತ್ರಿಷಾ ಕೃಷ್ಣನ್ ಜೊತೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ದಳಪತಿ ವಿಜಯ್; Video

ಜೈನ ಕುಟುಂಬಕ್ಕೆ ಸೇರಿದ ಸೂರಜ್‌ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. KGF ಸಿನಿಮಾದಲ್ಲಿ ಮೌನಿ ರಾಯ್‌ ಅವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ನಾಗಿನ್ ನಟಿ ಮೌನಿ ರಾಯ್ ಭಾರತೀಯ ಸಿನಿಪ್ರೇಮಿಗಳಿಗೆ ಚಿರಪರಿಚಿತ. ಈ ಜೋಡಿ ಅಗಾಗ ಜೊತೆಗಿದ್ದ ಪೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಿದ್ದರು.

ಆದರೆ ಈ ಜೋಡಿ ಈಗ ಜೊತೆಯಾಗಿಲ್ಲ, ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com