ಐಶ್ವರ್ಯಾ ರೈ ಕೇನ್ಸ್ ಲುಕ್‌ಗೆ ಬಾಡಿ ಶೇಮಿಂಗ್: ಕಂಗನಾ ನಂತರ ಟ್ರೋಲರ್ಸ್ ವಿರುದ್ಧ ಮಾಧುರಿ ದೀಕ್ಷಿತ್ ಗರಂ!

ಐಶ್ವರ್ಯಾ ರೈ ಅವರು 2026 ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಮಿತ್ ಅಗರ್ವಾಲ್ ಗೌನ್‌ನಲ್ಲಿ ಮಿಂಚಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಟ್ ಆಂಟಿ ಎಂದು ಟ್ರೋಲ್‌ಗೆ ಗುರಿಯಾಗಿದ್ದರು.
'You Can't Reduce Her To That': Madhuri Dixit On Aishwarya Rai Bachchan Being Body-Shamed After Cannes Appearance
ಮಾಧುರಿ ದೀಕ್ಷಿತ್ - ಐಶ್ವರ್ಯಾ ರೈ
Updated on

ಮುಂಬೈ: ಇತ್ತೀಚಿಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಕೇನ್ಸ್ ಲುಕ್ ಅನ್ನು ಟೀಕಿಸಿದ ಟ್ರೋಲ್‌ಗಳಿಗೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಹ ಐಶ್ವರ್ಯಾ ರೈ ಬೆಂಬಲಕ್ಕೆ ನಿಂತಿದ್ದು, ಬಾಡಿ ಶೇಮಿಂಗ್ ಮತ್ತು ಟ್ರೋಲರ್ಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಶ್ವರ್ಯಾ ರೈ ಅವರು 2026 ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಮಿತ್ ಅಗರ್ವಾಲ್ ಗೌನ್‌ನಲ್ಲಿ ಮಿಂಚಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಟ್ ಆಂಟಿ ಎಂದು ಟ್ರೋಲ್‌ಗೆ ಗುರಿಯಾಗಿದ್ದರು.

ಟ್ರೋಲರ್ಸ್ ವಿರುದ್ಧ ಕಿಡಿ ಕಾರಿದ ಹಿರಿಯ ನಟಿ ಮಾಧುರಿ ದೀಕ್ಷಿತ್, ಐಶ್ವರ್ಯಾ ಕಳೆದ 20 ವರ್ಷಗಳಿಂದ ಕೇನ್ಸ್ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

'You Can't Reduce Her To That': Madhuri Dixit On Aishwarya Rai Bachchan Being Body-Shamed After Cannes Appearance
'ಐಶ್ವರ್ಯ ರೈ ನಿಮ್ಮನ್ನು ಮೆಚ್ಚಿಸಲು ಕೇನ್ಸ್​​ಗೆ ಹೋಗಿಲ್ಲ': ಫ್ಯಾಟ್ ಆಂಟಿ ಎಂದ ಟ್ರೋಲರ್ಸ್ ವಿರುದ್ಧ ಕಂಗನಾ ಕಿಡಿ

ಐಶ್ವರ್ಯಾ ಅವರನ್ನು ಅವರ ದೇಹದ ತೂಕ, ಉಡುಪಿನ ಗಾತ್ರ ಅಥವಾ ವಯಸ್ಸಿನ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಅವರು ಸುಂದರವಾಗಿದ್ದಾರೆ. ನೋಡಲು ಮಾತ್ರವಲ್ಲ, ಮನಸ್ಸಿನಿಂದ ಸುಂದರವಾಗಿದ್ದಾರೆ ಎಂದು ಮಾಧುರಿ ಹೇಳಿದ್ದಾರೆ.

ಮಹಿಳೆಯರ ಸಾಧನೆಗಿಂತ ಅವರ ನೋಟವನ್ನು ಹೆಚ್ಚು ಚರ್ಚೆ ಮಾಡುವುದು ತಪ್ಪು. ಇಂತಹ ಕಾಮೆಂಟ್‌ಗಳು ಯುವಜನತೆಗೆ ತಪ್ಪು ಸಂದೇಶ ನೀಡುತ್ತವೆ. ವ್ಯಕ್ತಿಯ ಮೌಲ್ಯ ಅವರ ಸಾಧನೆಯಿಂದ ಅಳೆಯಬೇಕು, ನೋಟದಿಂದ ಅಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com