ಅಕ್ಷಯ್ ಕುಮಾರ್ ಪುತ್ರ ಆರವ್ 'ನನ್ನ ಹಾರ್ಟ್': ನಟಿ ಅನನ್ಯಾ ಪಾಂಡೆಗೆ ಮತ್ತೊಂದು ಲವ್?

ಅನನ್ಯಾ ಪಾಂಡೆ ಮತ್ತು ಆರವ್ ಭಾಟಿಯಾ ಅವರು ಮುಂಬೈನಲ್ಲಿ ನಡೆದ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
Actress Ananya Panday Calls Akshay Kumar's Son, Aarav Bhatia 'My Heart'
ಆರವ್ - ನಟಿ ಅನನ್ಯಾ ಪಾಂಡೆ
Updated on: 

ಈಗಾಗಲೇ ಹಲವು ಹೀರೋಗಳೊಂದಿಗೆ ಡೇಟಿಂಗ್ ನಡೆಸಿ, ತಕ್ಷಣವೇ ಬ್ರೇಕಪ್ ಹೇಳಿ ಅಚ್ಚರಿ ಮೂಡಿಸುತ್ತಿದ್ದ ಮಾಡಿಕೊಂಡಿದ್ದ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರು ಇದೀಗ ಬಾಲಿವುಡ್ ಹಿರಿಯ ನಟ ಅಕ್ಷಯ್ ಕುಮಾರ್ ಅವರ ಪುತ್ರ ಆರವ್ ಭಾಟಿಯಾ 'ನನ್ನ ಹೃದಯ' ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಅನನ್ಯಾ ಪಾಂಡೆ ಮತ್ತು ಆರವ್ ಭಾಟಿಯಾ ಅವರು ಮುಂಬೈನಲ್ಲಿ ನಡೆದ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಆರವ್ ಬಿಳಿ ಕುರ್ತಾ-ಶೇರ್ವಾನಿಯಲ್ಲಿ ಮಿಂಚಿದರೆ, ಅನನ್ಯಾ ಕಭಿ ಖುಷಿ ಕಭಿ ಗಮ್‌ನಲ್ಲಿ ರಾಣಿ ಮುಖರ್ಜಿಯವರ 'ಸೇ ಶವಾ ಶವಾ' ಚಿತ್ರದ ಐಕಾನಿಕ್ ಲೆಹೆಂಗಾದ ಮರುಸೃಷ್ಟಿಯಲ್ಲಿ ಮಿಂಚಿದರು.

Actress Ananya Panday Calls Akshay Kumar's Son, Aarav Bhatia 'My Heart'
ಗಲ್ವಾನ್ ಘರ್ಷಣೆಯ 'ಮಾತೃಭೂಮಿ' ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್; ವಿಳಂಬಕ್ಕೆ ಕಾರಣ ನೀಡಿದ ಸಲ್ಮಾನ್

ಈ ಕಾರ್ಯಕ್ರಮದ ಬಳಿಕ ಅನನ್ಯಾ ಪಾಂಡೆ ಅವರ ಇನ್‌ಸ್ಟಾಗ್ರಾಮ್ ಶೀರ್ಷಿಕೆ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಆರವ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ನಟಿ ಅನನ್ಯಾ, 'ನನ್ನ ಹೃದಯ' ಎಂದು ಸರಳವಾಗಿ ಬರೆದಿದ್ದಾರೆ.

ಅನನ್ಯಾ ಪಾಂಡೆ ಅವರು ಈ ಮೊದಲು ಉದ್ಯಮಿ ಕರಣ್ ಜೈಸಿಂಗ್ ಜೊತೆ ಡೇಟಿಂಗ್ ನಡೆಸಿದ್ದರು. ಕೆಲವೇ ದಿನಗಳಲ್ಲಿ ಬೇರೆಯಾದರು. ಬಳಿಕ ಬಾಲಿವುಡ್ ಸ್ಟಾರ್ ಹೀರೋಗಳಾದ ಕಾರ್ತಿಕ್ ಆರ್ಯನ್, ಇಶಾನ್ ಖಟ್ಟರ್, ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಸ್ವಲ್ಪ ಕಾಲ ಡೇಟಿಂಗ್ ನಡೆಸಿದ್ದರು. ಇದೀಗ ಅಕ್ಷಯ್ ಕುಮಾರ್ ಪುತ್ರನ ಜೊತೆ ಅನನ್ಯಾ ಡೇಟಿಂಗ್ ನಡೆಸುತ್ತಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ನಟ ಚುಂಕಿ ಪಾಂಡೆ ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನನ್ಯಾ ಪಾಂಡೆ, ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯ ಸ್ಥಾನ ಪಡೆದರು. 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಅನನ್ಯಾ ಪಾಂಡೆ.. ಆ ನಂತರ 'ಪತಿ ಪತ್ನಿ ಔರ್ ವೋ', 'ಡ್ರೀಮ್ ಗರ್ಲ್ 2', 'ಗೆಹರಿಯಾನ್', 'ಕಹೋ ಗಯೇ ಹಮ್ ಕಹಾನ್', 'ಸಿಟಿಆರ್‌ಎಲ್', 'ಕಾಲ್ ಮಿ ಬೇ', 'ಕೇಸರಿ ಚಾಪ್ಟರ್ 2' ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X