ಸರ್ಕಾರದ ಮಾತೃಭೂಮಿ ಸಿನಿಮಾ ಒತ್ತಡದಿಂದ ಸ್ಕ್ರಿಪ್ಟ್ ಬದಲಾವಣೆ? ಬಕವಾಸ್ ಎಂದು ವದಂತಿಗಳಿಗೆ ತೆರೆ ಎಳೆದ ನಟ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಕಥೆ ಬದಲಾಯಿಸಲು ಸರ್ಕಾರದ ಕಡೆಯಿಂದ ಯಾವುದೇ ಒತ್ತಡ ಬಂದಿಲ್ಲ ಎಂದು ವರದಿಗಳನ್ನ ತಳ್ಳಿಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Matrabhumi by Salman Khan
ಮಾತೃಭೂಮಿ ಸಿನಿಮಾOnline Desk
Updated on: 

ಮುಂಬೈ (ಮಹಾರಾಷ್ಟ್ರ): 2020ರ ಗಲ್ವಾನ್ ಕಣಿವೆ ಸಂಘರ್ಷದಿಂದ ಪ್ರೇರಿತಗೊಂಡು ಬರುತ್ತಿರುವ ನಟ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಚಿತ್ರದಕಥೆ ಬದಲಾಯಿಸಲು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಡೆಯಿಂದ ಒತ್ತಡ ಇದೆ ಎಂಬ ಆರೋಪಗಳನ್ನ ತಳ್ಳಿಹಾಕಿರುವ ಬಾಲಿವುಡ್ ಭಾಯಿಜಾನ್, ಇಂತಹ ಸುದ್ದಿಗಳೆಲ್ಲವೂ ಬರೀ "ಬಕವಾಸ್" ಎಂದು ವರದಿಗಳನ್ನು ತಳ್ಳಿಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಆರೋಪವೇನು?

2020ರಲ್ಲಿ ನಡೆದ ಭಾರತ-ಚೀನಾ ಸೈನಿಕರ ನೈಜ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಆದರೆ, ಭಾರತ ಮತ್ತು ಚೀನಾ ನಡುವಿನ ಇತ್ತೀಚಿನ ರಾಜತಾಂತ್ರಿಕ ಹಾಗೂ ಗಡಿ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರದಲ್ಲಿರುವ ಚೀನಾ ವಿರೋಧಿ ಅಂಶಗಳನ್ನು ತೆಗೆದುಹಾಕಲು ಅಥವಾ ಚಿತ್ರಕಥೆಯನ್ನು ಮರುಬರಹ ಮಾಡಲು ಕೇಂದ್ರ ಸರ್ಕಾರವು ಚಿತ್ರತಂಡದ ಮೇಲೆ ಭಾರಿ ಒತ್ತಡ ಹೇರಿದೆ ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ, ಸೂಕ್ಷ್ಮ ರಾಜಕೀಯ ಕಾರಣಗಳಿಗಾಗಿ ಸೆನ್ಸಾರ್ ಮಂಡಳಿ (CBFC) ಇದಕ್ಕೆ ಅನುಮತಿ ನೀಡಲು ಹಿಂಜರಿಯುತ್ತಿದೆ ಎಂದು ಆರೋಪಿಸಲಾಗಿತ್ತು.

Matrabhumi by Salman Khan
'4 ಸಾವಿರ ಕೋಟಿ ಬಜೆಟ್, VFX ಬದಿಗಿಡಿ, ರಾಮ-ಸೀತೆಯ ಬಗ್ಗೆ ಮಾತಾಡಿ: 'ಮಾತೃಭೂಮಿ' ಚಿತ್ರದ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆಯಿದೆ'

ಒತ್ತಡವೆಂಬದು ಬಕವಾಸ್!

ಆರೋಪದ ಬಗ್ಗೆ ಮುಂಬೈನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಚೀನಾ ವಿರೋಧಿ ಅಂಶಗಳನ್ನು ತೆಗೆದುಹಾಕಲು ಭಾರತ ಸರ್ಕಾರವು ಚಿತ್ರಕಥೆಯನ್ನು ಬದಲಾಯಿಸುವಂತೆ ಅಥವಾ ಮರುಬರಹ ಮಾಡುವಂತೆ ಒತ್ತಡ ಹೇರಿದೆ ಎಂಬ ವರದಿಗಳನ್ನು "ಬಕವಾಸ್" (ಸಂಪೂರ್ಣ ಸುಳ್ಳು) ಎಂದು ತಳ್ಳಿಹಾಕಿದ್ದಾರೆ. ಜೊತೆಗೆ, ಚಿತ್ರದಲ್ಲಿ ಏನಾದರೂ ಬದಲಾವಣೆಗಳಾಗಿದ್ದರೆ ಅದು ಚಿತ್ರತಂಡದ ನಿರ್ದೇಶಕರಾದ ಅಪೂರ್ವ ಲಾಖಿಯಾ ಮತ್ತು ತಮ್ಮದೇ ಆದ ಸ್ವತಂತ್ರ ಸೃಜನಶೀಲ ನಿರ್ಧಾರಗಳೇ ಹೊರತು ಯಾವುದೇ ಬಾಹ್ಯ ರಾಜಕೀಯ ಪ್ರಭಾವದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು, "ನಾವು ಯಾವುದೇ ದೇಶದ ವಿರುದ್ಧ ನಿಲುವು ತಳೆದು ಈ ಸಿನಿಮಾ ಮಾಡುತ್ತಿಲ್ಲ. ಯುದ್ಧದ ಸನ್ನಿವೇಶಗಳಲ್ಲಿ ಎರಡೂ ಕಡೆಯ (ಭಾರತ ಮತ್ತು ಚೀನಾ) ಸೈನಿಕರು ಹಾಗೂ ಅವರ ಕುಟುಂಬಗಳು ಅನುಭವಿಸುವ ನೋವು ಮತ್ತು ಭಾವನಾತ್ಮಕ ಹೋರಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರಲ್ಲಿ ಯಾವುದೇ ನೆಗೆಟಿವ್ ಶಕ್ತಿಗಳಿಲ್ಲ, ಕೇವಲ ಅಲ್ಲಿನ ಪರಿಸ್ಥಿತಿಗಳು ನೆಗೆಟಿವ್ ಆಗಿರುತ್ತವೆ ಅಷ್ಟೆ" ಎಂದು ಸಲ್ಮಾನ್ ಚಿತ್ರದ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಇದರೊಂದಿಗೆ, ಈ ವಾರ್ ಡ್ರಾಮಾ ಸಿನಿಮಾವು ಎಲ್ಲಾ ವದಂತಿಗಳನ್ನು ದಾಟಿ 2026ರ ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭವ್ಯವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X