

ಮುಂಬೈ: 'ಲಸ್ಟ್ ಸ್ಟೋರೀಸ್ 3'(Lust Stories 3) ನಟ ಗುರ್‌ಫತೇಹ್ ಪಿರ್ಜಾದಾ ಅವರ ಮುಂಬೈ ಅಪಾರ್ಟ್‌ಮೆಂಟ್‌ನ ಬಾಲ್ಕನಿ ಮತ್ತು ಕೋಣೆಯ ಕೆಲವು ಭಾಗಗಳಿಗೆ, ದೀಪಾವಳಿಯಂದು ಹೊರಗಿನಿಂದ ಹಾರಿಬಂದ ಪಟಾಕಿಗಳಿಂದ ಬೆಂಕಿ ತಗುಲಿದ ಆಘಾತಕಾರಿ ಘಟನೆ ನಡೆದಿದೆ.
"ನಾವು ಅದೃಷ್ಟವಶಾತ್ ಪಾರಾದೆವು. ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾದ್ದರಿಂದ ದೊಡ್ಡ ಹಾನಿ ತಪ್ಪಿತು. ಆದರೆ ಪರಿಸ್ಥಿತಿ ಇನ್ನೂ ಗಂಭೀರವಾಗಬಹುದಿತ್ತು" ಎಂದು ಪಿರ್ಜಾದಾ ಆತಂಕ ವ್ಯಕ್ತಪಡಿಸಿದ್ದಾರೆ.
"ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಮುಂದೆ ಏನಾಗುತ್ತದೋ ನೋಡೋಣ. ಒಂದು ರಾಕೆಟ್ ನನ್ನ ಬಾಲ್ಕನಿಗೆ ಬಂದು ಬಿದ್ದಿದ್ದರಿಂದ ಈ ಬೆಂಕಿ ಹೊತ್ತಿಕೊಂಡಿತು. ನಾವು ವಾಸಿಸುವ ಪ್ರದೇಶದಲ್ಲಿರುವ ದಟ್ಟ ಹೊಗೆ(smog) ಮತ್ತು ಇಲ್ಲಿನ ಅಸುರಕ್ಷಿತ ವಾತಾವರಣವನ್ನು ಗಮನಿಸಿದರೆ, ಪಟಾಕಿಗಳಿಗೆ ಅನುಮತಿ ನೀಡುವುದೇ ಅತ್ಯಂತ ಮೂರ್ಖತನದ ಸಂಗತಿ" ಎಂದು ನಟ ಕಿಡಿ ಕಾರಿದ್ದಾರೆ.
ದೀಪಾವಳಿ ಹಬ್ಬಕ್ಕೆ ಅಬ್ಬರಿಸಿದ 'ರಾಮಾಯಣ': ನಾಲ್ಕೇ ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ!ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮನೆಗೆ ಹಾನಿಯಾದ ಚಿತ್ರಗಳನ್ನು ಹಂಚಿಕೊಂಡಿರುವ ನಟ, ಮುಂಬೈ ಪೊಲೀಸ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯನ್ನು(BMC) ಟ್ಯಾಗ್ ಮಾಡುವ ಮೂಲಕ, ನಗರದಲ್ಲಿ ಪಟಾಕಿ ಸಿಡಿಸುತ್ತಿರುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
"ಜನಸಾಮಾನ್ಯರ ಈ ಮೂರ್ಖತನ ನಿಜಕ್ಕೂ ಆಘಾತಕಾರಿ... ಪಟಾಕಿಗಳಿಂದ ನನ್ನ ಬಾಲ್ಕನಿ ಸಂಪೂರ್ಣವಾಗಿ ಸುಟ್ಟುಹೋಗಿದೆ, ಅಷ್ಟೇ ಅಲ್ಲದೆ ನನ್ನ ಕೋಣೆಯ ಬಹುಭಾಗವೂ ಸುಟ್ಟುಹೋಗಿದೆ. ಇಡೀ ನಗರವೇ ಉರಿಯುತ್ತಿದೆ ಮತ್ತು ಇದೊಂದು 'ಗ್ಯಾಸ್ ಚೇಂಬರ್'(ವಿಷಾನಿಲ ತುಂಬಿದ ಕೋಣೆ) ಆಗಿ ಮಾರ್ಪಟ್ಟಿದೆ" ಎಂದು ಪಿರ್ಜಾದಾ ಬರೆದುಕೊಂಡಿದ್ದಾರೆ.
ಪರಿಸರ ಮಾಲಿನ್ಯ, ಆರೋಗ್ಯ, ವಾಯು ಮಾಲಿನ್ಯ ಮತ್ತು ಪ್ರಾಣಿಗಳ ಕಲ್ಯಾಣವನ್ನು ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿ, ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳಿಂದ ದೂರವಿರಲು ಅನೇಕ ನಟರು ಬಹಿರಂಗವಾಗಿಯೇ ನಿರ್ಧರಿಸಿದ್ದಾರೆ.