ದೀಪಾವಳಿ ಹಬ್ಬಕ್ಕೆ ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್‌ನಲ್ಲಿ ಕುರಾನ್‌ ಪದ್ಯ; ಬಾಲಿವುಡ್ ನಟಿಗೆ ಲೀಗಲ್ ನೋಟಿಸ್‌!

ಭೋಪಾಲ್ ರಾಜಮನೆತನಕ್ಕೆ ಸೇರಿದ 30 ಕ್ಯಾರೆಟ್ ಪಚ್ಚೆ ಪೆಂಡೆಂಟ್ ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಇದರಲ್ಲಿ ಪವಿತ್ರ ಕುರಾನ್‌ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ.
Bollywood actor Kareena Kapoor Khan’s Diwali Emerald Pendant Sparks Row Over Quranic Verse, Congress Leader Sends Legal Notice
ಕರೀನಾ ಕಪೂರ್ - ಪೆಂಡೆಂಟ್‌
Updated on: 

ಭೋಪಾಲ್: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ದೀಪಾವಳಿ ಹಬ್ಬದಂದು ಧರಿಸಿದ್ದ ಪಚ್ಚೆ ಪೆಂಡೆಂಟ್‌ನಲ್ಲಿ ಖುರಾನ್ ಪದ್ಯ ಆಯತ್-ಉಲ್-ಕುರ್ಸಿಯನ್ನು ಹೊಂದಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಭೋಪಾಲ್ ರಾಜಮನೆತನಕ್ಕೆ ಸೇರಿದ 30 ಕ್ಯಾರೆಟ್ ಪಚ್ಚೆ ಪೆಂಡೆಂಟ್ ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಇದರಲ್ಲಿ ಪವಿತ್ರ ಕುರಾನ್‌ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ. ಇದನ್ನು ಫ್ಯಾಷನ್ ಪರಿಕರವಾಗಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್, ಕರೀನಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿರುವ ಫೋಟೋಗಳನ್ನು ತೆಗೆದುಹಾಕುವಂತೆ ಮತ್ತು ಅದನ್ನು ಧರಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಅವರು ಕರೀನಾ ಕಪೂರ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.

Bollywood actor Kareena Kapoor Khan’s Diwali Emerald Pendant Sparks Row Over Quranic Verse, Congress Leader Sends Legal Notice
ಪಟಾಕಿಗಳಿಂದ ಬಾಲಿವುಡ್ ನಟನ ಮನೆಗೆ ಬೆಂಕಿ; ಹೊತ್ತಿ ಉರಿದ ಬಾಲ್ಕನಿ! ಅನುಮತಿ ನೀಡುವುದೇ ಮೂರ್ಖತನ: ಪಿರ್ಜಾದಾ ಕಿಡಿ

ಕರೀನಾ ಕಪೂರ್ ಅವರು ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು. ಕುರಾನ್‌ನ ವಚನಗಳು ಮುಸ್ಲಿಮರಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿವೆ. ಅವುಗಳನ್ನು ಗೌರವದಿಂದ ಕಾಣಬೇಕು. ಕೆಲವರು ಧಾರ್ಮಿಕ ಶುದ್ಧೀಕರಣವಾದ ವುಡು ಮಾಡದೆ ಕುರಾನ್‌ನ ವಚನಗಳನ್ನು ಮುಟ್ಟುವುದನ್ನೂ ತಪ್ಪಿಸುತ್ತಾರೆ ಎಂದು ಹಫೀಜ್ ಹೇಳಿದ್ದಾರೆ.

ಇಂಡಿಯಾ ಟುಡೇ ವರದಿ ಪ್ರಕಾರ, ಹಫೀಜ್ ಅವರು ಕರೀನಾ ಕಪೂರ್ ಅವರು ಪೆಂಡೆಂಟ್‌ ಧರಿಸಿರುವ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಮತ್ತು ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X