ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್; ಪತ್ನಿ ಕರೀನಾ ಕಪೂರ್ ಜೊತೆಗಿನ ವಿವಾದ ಇದಕ್ಕೆ ಕಾರಣನಾ? ಪೊಲೀಸರಿಂದ ತನಿಖೆ ಶುರು!

ಈ ಆಡಿಯೋ ಕ್ಲಿಪ್ ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಪರಾರಿಯಾಗಿರುವ ಆರೋಪಿ ಜೀಶನ್ ಅಖ್ತರ್ ಅವರದ್ದೇ ಅಥವಾ ವಂಚಕರಿಂದ ಸೃಷ್ಟಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
Saif Ali Khan,kareena
ಸೈಫ್ ಅಲಿಖಾನ್, ಕರೀನಾ ಕಪೂರ್
Updated on: 

ನವದೆಹಲಿ: ಇತ್ತೀಚಿಗೆ ಬಾಲಿವುಡ್ ನಟರಿಗೆ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಟ ಸೈಫ್ ಅಲಿ ಖಾನ್‌ಗೆ ಬೆದರಿಕೆ ಹಾಕುವ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆಡಿಯೋ ಕ್ಲಿಪ್ ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಪರಾರಿಯಾಗಿರುವ ಆರೋಪಿ ಜೀಶನ್ ಅಖ್ತರ್ ಅವರದ್ದೇ ಅಥವಾ ವಂಚಕರಿಂದ ಸೃಷ್ಟಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಉತ್ತರ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅಪರಾಧ ಸಿಂಡಿಕೇಟ್ ರೋಹಿತ್ ಗೋದಾರ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಸಂದೇಶವನ್ನು ಪ್ರಸಾರ ಮಾಡಲಾಗಿದೆ ಎಂದು ವರದಿಯಾಗಿದೆ, ಆಡಿಯೋದಲ್ಲಿ ತಾನು ಅಖ್ತರ್ ಎಂದು ಹೇಳಿಕೊಂಡಿದ್ದಾರೆ.

ಅಕ್ಟೋಬರ್ 2024 ರಲ್ಲಿ ಬಾಂದ್ರಾದಲ್ಲಿರುವ ತನ್ನ ಮಗ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಸಿದ್ದಿಕ್ ಅವರನ್ನು ಗುಂಡಿಕ್ಕಿ ಕೊಂದಾಗಿನಿಂದ ಅಖ್ತರ್ ಕಾಣೆಯಾಗಿದ್ದಾನೆ. ಆರಂಭದಲ್ಲಿ ತನಿಖಾಧಿಕಾರಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಹ್ಯಾಂಡ್ಲರ್ ಎಂದು ಗುರುತಿಸಿದ್ದರು, ನಂತರ ಅಖ್ತರ್ ಪರಿಶೀಲಿಸದ ಸಾಮಾಜಿಕ ಮಾಧ್ಯಮ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದು, ವಿದೇಶಕ್ಕೆ ಪರಾರಿಯಾಗಿದ್ದು, ರೋಹಿತ್ ಗೋದಾರ ಬಣದೊಂದಿಗೆ ಗುರುತಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಆರಂಭಿಕ ಮಾಹಿತಿಯ ಪ್ರಕಾರ, ಖಾನ್ ಅವರ ಪತ್ನಿ ಕರೀನಾ ಕಪೂರ್ ಅವರ ಇತ್ತೀಚಿನ ವಿವಾದಕ್ಕೆ ಸಂಬಂಧಿಸಿದಂತೆ ಅವರಿಗೆ ಈ ಎಚ್ಚರಿಕೆ ನೀಡಲಾಗಿದೆ. "ಮುಂಬೈ ಪೊಲೀಸರು ಬೆದರಿಕೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಅದನ್ನು ನಿಜವಾಗಿಯೂ ಜೀಶನ್ ಅಖ್ತರ್ ಕಳುಹಿಸಿದ್ದಾರೆಯೇ ಅಥವಾ ಅವರಂತೆ ನಟಿಸುವ ಯಾರಾದರೂ ಕಳುಹಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ" ಎಂದು ಮುಂಬೈನಲ್ಲಿ ಸಂಘಟಿತ ಅಪರಾಧ ಮತ್ತು ಸೈಬರ್-ಸುಲಿಗೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಒಂದು ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಧಿವಿಜ್ಞಾನ ಮತ್ತು ಸೈಬರ್-ಅಪರಾಧ ತಂಡಗಳು ತಿಳಿದಿರುವ ಮಾದರಿಗಳ ವಿರುದ್ಧ ಧ್ವನಿ ಟಿಪ್ಪಣಿಯ ಅಕೌಸ್ಟಿಕ್ ಮಾರ್ಕರ್‌ಗಳನ್ನು ವಿಶ್ಲೇಷಿಸುತ್ತಿವೆ. ಪ್ರಮುಖ ಬಾಲಿವುಡ್ ನಟರನ್ನು ಗುರಿಯಾಗಿಸಿಕೊಂಡು AI- ರಚಿತ ವಂಚನೆ ಕರೆಗಳು ಹೆಚ್ಚುತ್ತಿವೆ.ಈ ತಿಂಗಳ ಆರಂಭದಲ್ಲಿ, ನಟರಾದ ಆಯುಷ್ಮಾನ್ ಖುರಾನಾ ಮತ್ತು ತುಷಾರ್ ಕಪೂರ್ ಅವರಿಗೆ ಇದೇ ರೀತಿಯ ಬೆದರಿಕೆ ಆಡಿಯೋ ಕಳುಹಿಸಿದ ಆರೋಪದ ಮೇಲೆ, ಬೆಂಗಳೂರಿನಲ್ಲಿ ತಂತ್ರಜ್ಞನಾಗಿ (techie) ಕೆಲಸ ಮಾಡುತ್ತಿದ್ದ 30 ವರ್ಷದ ಐಐಟಿ (IIT) ಪದವೀಧರ ವೈಭವ್ ಮಿಶ್ರಾ ಎಂಬಾತನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

Saif Ali Khan,kareena
ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ತೀವ್ರ; ಸೈಫ್ ಅಲಿಖಾನ್ ರಕ್ತದ ಮಾದರಿ, ಬಟ್ಟೆ ಸಂಗ್ರಹಿಸಿದ ಪೊಲೀಸರು!

ಈ ಮಧ್ಯೆ ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಮತ್ತು ನಟ ಅಮಿತಾಬ್ ಬಚ್ಚನ್ ಅವರ ನಿವಾಸದ ಹೊರಗಡೆ ಗುಂಡಿನ ದಾಳಿ ನಡೆದಿತ್ತು. ಸೈಫ್ ಅಲಿಖಾನ್ ಕೂಡಾ ತಮ್ಮ ಬಾಂದ್ರಾ ಮನೆಯೊಳಗೆ ಇರಿತದ ದಾಳಿಯಿಂದ ಬದುಕುಳಿದಿದ್ದರು. ಅದೇ ರೀತಿ ನಟ ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮನೆಗಳ ಹೊರಗೆ ಗುಂಡು ಹಾರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X