ಕೌನ್ ಬನೇಗಾ ಕರೋಡ್‌ಪತಿ ಶೂಟಿಂಗ್ ವೇಳೆ ಬಿಗ್ ಬಿಗೆ ಗಾಯ: ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಅಮಿತಾಭ್

ಕೌನ್ ಬನೇಗಾ ಕರೋಡ್‌ಪತಿ-18 ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಬಾಲಿವುಡ್‌ನ ಹಿರಿಯ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ತಮ್ಮ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Amitabh Bachchan Injured On KBC Sets After Accidental Slip, Mega Star Shares Health Update
ಮೆಗಾಸ್ಟಾರ್ ಅಮಿತಾಭ್ ಬಚ್ಚನ್Online Desk
Updated on: 

ಮುಂಬೈ (ಮಹಾರಾಷ್ಟ್ರ): ಕೌನ್ ಬನೇಗಾ ಕರೋಡ್‌ಪತಿ-18 (KBC 18) ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಬಾಲಿವುಡ್‌ನ ಹಿರಿಯ ನಟ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ತಮ್ಮ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಆದರೆ, ಸದ್ಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸ್ವತಃ ಬಿಗ್ ಬಿ ಅವರೇ ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಘಟನೆ ನಡೆದಿದ್ದು ಹೇಗೆ?

ಇತ್ತೀಚಿನ ಕೆಬಿಸಿ ಸಂಚಿಕೆಯ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಅವರು ಸೆಟ್‌ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಎಡ ಮೊಣಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಸಾಮಾನ್ಯವಾಗಿ ಕೆಬಿಸಿ ಶೋ ಆರಂಭದಲ್ಲಿ ಬಿಗ್ ಬಿ ಅವರು ವೇದಿಕೆಯ ಮಧ್ಯದಲ್ಲಿ ಅತ್ಯಂತ ಉತ್ಸಾಹದಿಂದ ನಿಂತುಕೊಂಡು ತಮ್ಮ ಆರಂಭಿಕ ಭಾಷಣ ಪ್ರಸ್ತುತಪಡಿಸುತ್ತಾರೆ. ಆದರೆ, ಗಾಯದ ಕಾರಣದಿಂದಾಗಿ ಅವರು ಈ ಬಾರಿ ಎಂದಿನಂತೆ ನಿಲ್ಲಲು ಸಾಧ್ಯವಾಗದೆ, ಗೇಮ್ ಪೋಡಿಯಂನಲ್ಲಿ ಕುಳಿತುಕೊಂಡೇ ಶೋ ಆರಂಭಿಸಿದರು.

ಮುಂದುವರೆದು, ಪ್ರೇಕ್ಷಕರಿಗೆ ಶೋನಲ್ಲೇ ಈ ಬಗ್ಗೆ ಮಾಹಿತಿ ನೀಡಿದ ಬಿಗ್ ಬಿ, "ನಿನ್ನೆ ಶೂಟಿಂಗ್ ಮಾಡುವಾಗ ನಾನು ಜಾರಿ ಬಿದ್ದೆ, ಇದರಿಂದ ನನ್ನ ಎಡ ಮೊಣಕಾಲಿಗೆ ಪೆಟ್ಟಾಗಿದೆ. ಸದ್ಯಕ್ಕೆ ಹೆಚ್ಚು ಹೊತ್ತು ನಿಲ್ಲಲು ಕಷ್ಟವಾಗುತ್ತಿದೆ, ಹಾಗಾಗಿ ಇಂದು ಕುಳಿತುಕೊಂಡೇ ಮಾತನಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ. ತದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 83 ವರ್ಷದ ಅಮಿತಾಭ್ ಬಚ್ಚನ್ ಅವರು ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದು, "ಇದು ಸಣ್ಣ ಗಾಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ, ನಾನು ಚೇತರಿಸಿಕೊಳ್ಳುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಗಾಯದ ನಡುವೆಯೂ ಅವರು ಕೆಬಿಸಿ ಶೋ ಚಿತ್ರೀಕರಣವನ್ನು ನಿಲ್ಲಿಸದೆ ನಿಗದಿತ ವೇಳಾಪಟ್ಟಿಯಂತೆಯೇ ಮುಂದುವರಿಸಿದ್ದಾರೆ.

Amitabh Bachchan Injured On KBC Sets After Accidental Slip, Mega Star Shares Health Update
KBCಗೆ ಅಮಿತಾಬ್ ಬಚ್ಚನ್ ವಿದಾಯ? ಈ ಬಗ್ಗೆ ಬಿಗ್ ಬಿ ಹೇಳಿದ್ದೇನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com