'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

ಕಳೆದ ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರಿಗೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
'Kamaal kar diya pilot ji': Superstar Salman Khan praises Capt Smit Machchhar
ಸಲ್ಮಾನ್ ಖಾನ್ - ಸ್ಮಿತ್ ಮಚ್ಚರ್
Updated on: 

ಮುಂಬೈ: ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಯತ್ನವನ್ನು ವಿಫಲಗೊಳಿಸಿದ 'ಫ್ಲೈದುಬೈ' (flydubai) ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಶ್ಲಾಘಿಸಿದ್ದಾರೆ.

ಕಳೆದ ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರಿಗೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

"ಅದ್ಭುತ ಕೆಲಸ ಮಾಡಿದ್ದೀರಿ ಪೈಲಟ್ ಜೀ, ನಿಮ್ಮ ಧೈರ್ಯಕ್ಕೆ ನಾವೆಲ್ಲರೂ ಸೆಲ್ಯೂಟ್ ಮಾಡುತ್ತೇವೆ... ನಿಮ್ಮೊಂದಿಗೆ ವಿಮಾನ ಪ್ರಯಾಣ ಮಾಡುವುದು ಸಂತೋಷದ ವಿಷಯವಾಗಿರುತ್ತದೆ... ಉತ್ತಮ ಕೆಲಸ ಮಾಡಿದ್ದೀರಿ ಸಹೋದರ... ಕ್ಯಾಪ್ಟನ್ ಸ್ಮಿತ್ ಮಚ್ಚಾರ್" ಎಂದು ನಟ ಸಲ್ಮಾನ್ ಖಾನ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

'Kamaal kar diya pilot ji': Superstar Salman Khan praises Capt Smit Machchhar
ರಿಯಲ್ ಹೀರೋ, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ 'ಇಸ್ರೇಲ್ ಸರ್ಕಾರದಿಂದ ಸೆಲ್ಯೂಟ್'

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ.

ಆ ಘಟನೆಯ ಸಮಯದಲ್ಲಿ ತಮಗೆ ಧೈರ್ಯ ನೀಡಿದ ಅಂಶಗಳ ಬಗ್ಗೆಯೂ ಮಚ್ಚಾರ್ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್‌ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com