'ಫಿಲ್ಟರ್ ಮುಖ್ಯ': 'ಹಾಲಿನಂತ ದೇಹ' ಎಂದ ಅನ್ನು ಕಪೂರ್​ ಹೇಳಿಕೆಗೆ ಮಿಲ್ಕಿ ಬ್ಯೂಟಿ ತಮನ್ನಾ ಫಸ್ಟ್ ರಿಯಾಕ್ಷನ್!

ಹಿರಿಯ ನಟ ಅನ್ನು ಕಪೂರ್ ಅವರು ತಮ್ಮ ಮೈಬಣ್ಣ ಮತ್ತು ದೇಹದ ಆಕೃತಿಯ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ತಮನ್ನಾ ಅವರನ್ನು ಪ್ರಶ್ನಿಸಲಾಯಿತು.
Tamannaah-Annu Kapoor
ತಮನ್ನಾ ಭಾಟಿಯಾ-ಅನ್ನು ಕಪೂರ್
Updated on: 

ಬಾಲಿವುಡ್ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು, ಹಿರಿಯ ನಟ ಅನ್ನು ಕಪೂರ್ ಅವರು ತಮ್ಮ ರೂಪ ಮತ್ತು ದೇಹದ ಬಣ್ಣದ ಬಗ್ಗೆ ನೀಡಿದ ಹೇಳಿಕೆಗಳಿಂದ ಉಂಟಾದ ವಿವಾದದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಇಂತಹ ಟೀಕೆ-ಟಿಪ್ಪಣಿಗಳಲ್ಲಿ ಸಿಲುಕಿಕೊಳ್ಳುವ ಬದಲು, ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಯಾವುದಕ್ಕೆ ತಮ್ಮ ಗಮನ ನೀಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಮನ್ನಾ ಹೇಳಿದ್ದಾರೆ.

'ಎನ್‌ಡಿಟಿವಿ ಪ್ರಾಫಿಟ್ ಇಗ್ನೈಟ್ 2026' ಕಾರ್ಯಕ್ರಮದಲ್ಲಿ, ಹಿರಿಯ ನಟ ಅನ್ನು ಕಪೂರ್ ಅವರು ತಮ್ಮ ಮೈಬಣ್ಣ ಮತ್ತು ದೇಹದ ಆಕೃತಿಯ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ತಮನ್ನಾ ಅವರನ್ನು ಪ್ರಶ್ನಿಸಲಾಯಿತು.

Tamannaah-Annu Kapoor
ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್

"ಇದಕ್ಕೆ ಉತ್ತರಿಸಿದ ನಟಿ, ಒಬ್ಬ ಸೃಜನಶೀಲ ವ್ಯಕ್ತಿಯಾಗಿ, ನಮ್ಮ ಪ್ರಮುಖ ಕೆಲಸವೆಂದರೆ ಆಲಿಸುವುದು(ಎದುರಿಗಿರುವವರ ಮಾತುಗಳನ್ನು ಕೇಳಿಸಿಕೊಳ್ಳುವುದು). ಹೀಗೆ ಕೇಳಿಸಿಕೊಳ್ಳುವಾಗ, ನಾವು ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ಕಡೆಗಣಿಸಬೇಕು ಎನ್ನುವುದನ್ನು ಫಿಲ್ಟರ್ ಮಾಡಬೇಕು. ಇದು ಬಹಳ ಮುಖ್ಯ" ಎಂದು ಅವರು ಹೇಳಿದ್ದಾರೆ.

"ಒಬ್ಬ ಮಹಿಳೆಯಾಗಿ, ಇಂತಹ ವಿಷಯಗಳಿಗೆ ನಾವು ಹೆಚ್ಚು ಮಹತ್ವ ನೀಡಲು ಪ್ರಾರಂಭಿಸಿದರೆ, ಬಹುಶಃ ಜೀವನದಲ್ಲಿ ಮುಂದೆ ಸಾಗಲು ನಮಗೆ ಸಾಧ್ಯವಾಗುವುದಿಲ್ಲ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದಿದ್ದಾರೆ.

ಅನ್ನು ಕಪೂರ್ ಅವರು ಖಾಸಗಿ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತಮನ್ನಾ ಅವರ ಕುರಿತು, ಓ ದೇವರೆ ಅವಳು ಎಂಥಾ ಹಾಲಿನಂತ ದೇಹ ಹೊಂದಿದ್ದಾಳೆ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದು ಒಬ್ಬ ಮಹಿಳೆ ವಿರುದ್ಧ ಬಳಸುತ್ತಿರುವ ಅಗೌರವದ ಮತ್ತು ಅಸಭ್ಯ ಭಾಷೆ ಎಂದು ಹಲವರು ಕಿಡಿಕಾರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X