'ಸಹೋದರನಿಗೆ ಇಲ್ಲದ ಸಮಸ್ಯೆ ನಿಮಗೇಕೆ?'; ರಕ್ಷಾಬಂಧನ ಜಾಹೀರಾತು ಕುರಿತು ಕಂಗನಾ ವಿರುದ್ಧ ರಘು ರಾಮ್ ಪರೋಕ್ಷ ವಾಗ್ದಾಳಿ!

ಆಭರಣ ಬ್ರಾಂಡ್ GIVA ಬಾಲಿವುಡ್ ನಟಿ ಕೃತಿ ಸನೋನ್ ಅವರನ್ನು ಒಳಗೊಂಡ ರಕ್ಷಾ ಬಂಧನದ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ವಿವಾದ ಆರಂಭವಾಯಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೃತಿ ಅವರ ಉಡುಪನ್ನು ಟೀಕಿಸಿದರು.
Kriti Sanon in Raksha Bandhan ad
ರಕ್ಷಾ ಬಂಧನ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್
Updated on

ನವದೆಹಲಿ: ರಕ್ಷಾ ಬಂಧನ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಬಗ್ಗೆ ಇತ್ತೀಚೆಗೆ ನಡೆದ ವಿವಾದದ ಮಧ್ಯೆ, ರೋಡೀಸ್ ಕಾರ್ಯಕ್ರಮದ ಮಾಜಿ ಜಡ್ಜ್ ರಘು ರಾಮ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಟಿಯ ಉಡುಪಿನ ಬಗ್ಗೆ ಜನರಿಗೆ ಏಕೆ ಸಮಸ್ಯೆ ಅಥವಾ ಸಾಮಾನ್ಯವಾಗಿ, ಮಹಿಳೆಯರು ಏನು ಧರಿಸಬಹುದು ಅಥವಾ ಏನು ಧರಿಸಬಾರದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಪುರುಷರಿಗೆ ಯಾರು ನೀಡಿದರು ಎಂದು ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿ ರಘು ರಾಮ್, 'ಕೃತಿ ಸನೋನ್ ಅವರ ರಾಖಿ ಜಾಹೀರಾತು ವಿವಾದ ಹುಟ್ಟಿಕೊಂಡಿತು. ಮತ್ತು ಬಹುಶಃ ಈಗ ಅದು ಹೋಗಿದೆ ಅಥವಾ ಅದು ಕಣ್ಮರೆಯಾಗುತ್ತದೆ. ಆದರೆ, ನಮಗೆ ಮತ್ತೆ ನೋವುಂಟುಮಾಡುವ ಹೊಸದೇನಾದರೂ ಬರುತ್ತದೆ. ಕಾಮೆಂಟ್‌ನಲ್ಲಿ ನಿಮ್ಮೊಂದಿಗೆ ಚರ್ಚಿಸಲು ನನ್ನ ಬಳಿಯಲ್ಲಿ ಸದ್ಯಕ್ಕೆ ಎರಡು ಪ್ರಶ್ನೆಗಳಿವೆ' ಎಂದಿದ್ದಾರೆ.

'ನಾನು ಯೋಚಿಸಿದೆ- ನಿಜವಾಗಿಯೂ ಸಮಸ್ಯೆ ಏನು? ಒಬ್ಬ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಿದ್ದಾಳೆ. ಸಹೋದರನಿಗೆ ಆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ಹಾಗಾದರೆ ನಿನಗೆ ಏಕೆ? ಹೀಗಿರುವಾಗ ನನಗೇ ಏನೋ ಒಂದು ವಿಚಾರ ಅರ್ಥವಾಗದಿರಬಹುದೇನೋ ಎಂದು ನಾನು ಯೋಚಿಸಿದೆ. ಈಗ ನನಗೆ ಸಮಸ್ಯೆ ಏನೆಂದು ಅರ್ಥವಾಗಬೇಕು, ದಯವಿಟ್ಟು ಅದನ್ನು ನನಗೆ ವಿವರಿಸಿ' ಎಂದಿದ್ದಾರೆ.

'ನನ್ನಲ್ಲಿ ಈಗ ಎರಡು ಪ್ರಶ್ನೆಗಳಿವೆ ಸಮಸ್ಯೆಗಳಿವೆ. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಏಕೆ ಸಮಸ್ಯೆಯಾಗುತ್ತದೆ ಮತ್ತು ನಿಖರವಾಗಿ ಆ ಸಮಸ್ಯೆ ಏನು? ಮಹಿಳೆಯರು ನಂತರ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂದು ಹೇಳಬೇಡಿ. ಹಾಗೆ ಹೇಳಲೇಬೇಡಿ. ಅದು ಕೆಟ್ಟದ್ದು, ಸ್ವೀಕಾರಾರ್ಹವಲ್ಲದ ಆಲೋಚನೆ ಮತ್ತು ಕ್ರಿಮಿನಲ್ ಮನಸ್ಥಿತಿ' ಎಂದು ರಘು ರಾಮ್ ಹೇಳಿದ್ದಾರೆ.

Kriti Sanon in Raksha Bandhan ad
'ಉದ್ಯೋಗಿಗಳು, ಮಳಿಗೆಗಳ ಸುರಕ್ಷತೆಯೇ ಆದ್ಯತೆ': ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನ ಜಾಹೀರಾತು ಹಿಂಪಡೆದ ಬಗ್ಗೆ GIVA

'ಒಬ್ಬ ರಾಜಕಾರಣಿ ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು- ನೀವು ಸಿಹಿತಿಂಡಿಗಳ ಪೆಟ್ಟಿಗೆಯನ್ನು ತೆರೆದಿಟ್ಟರೆ, ನೊಣಗಳು ಬರುತ್ತವೆ ಎಂದು ಹೇಳಿದರು. ಮಹಿಳೆಯರು ಏನು ಧರಿಸಬೇಕೆಂದು ನಿರ್ದೇಶಿಸಲು ಪುರುಷರಿಗೆ ಯಾವ ವಿಶೇಷ ಅಧಿಕಾರ ಇದೆ ಎಂದು ಅವರು ಭಾವಿಸುತ್ತಾರೆ? ಇವು ನನ್ನ ಎರಡು ಪ್ರಶ್ನೆಗಳು. ದಯವಿಟ್ಟು ಎಚ್ಚರಿಕೆಯಿಂದ ಯೋಚಿಸಿ ಮತ್ತು ಅವುಗಳಿಗೆ ಪ್ರತಿಕ್ರಿಯಿಸಿ ಮತ್ತು ನಾನು ಯಾವಾಗಲೂ ಮಾಡುವಂತೆ ಕಾಮೆಂಟ್‌ಗಳಲ್ಲಿ ನಿಮ್ಮೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಯಾವಾಗಲೂ ಈ ಸಂಭಾಷಣೆಗಳಿಗಾಗಿ ಎದುರು ನೋಡುತ್ತೇನೆ. ಕಾಮೆಂಟ್‌ಗಳಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ' ಎಂದು ಮಾತು ಮುಗಿಸಿದ್ದಾರೆ.

Kriti Sanon in Raksha Bandhan ad
'ಮಹಿಳೆಯರು ಏನು ಧರಿಸಬೇಕೆಂದು ಹೇಳುವುದನ್ನು ನಿಲ್ಲಿಸಿ': ಕಂಗನಾ ರಣಾವತ್ ಟೀಕೆಗೆ ಕೃತಿ ಸನೋನ್ ತಿರುಗೇಟು

ಏನಿದು ವಿವಾದ?

ಆಭರಣ ಬ್ರಾಂಡ್ GIVA ಬಾಲಿವುಡ್ ನಟಿ ಕೃತಿ ಸನೋನ್ ಅವರನ್ನು ಒಳಗೊಂಡ ರಕ್ಷಾ ಬಂಧನದ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ವಿವಾದ ಆರಂಭವಾಯಿತು. ಜಾಹೀರಾತಿನಲ್ಲಿ ಕೃತಿ ತನ್ನ ಅಣ್ಣ ಹಾಗೂ ಸಾಕು ನಾಯಿಗೆ ರಾಖಿ ಕಟ್ಟುತ್ತಿರುವುದು ಕಂಡುಬಂದಿತ್ತು. ಇದರಲ್ಲಿ ಕೃತಿ ಬ್ರಾಲೆಟ್ ಶೈಲಿಯ ಬ್ಲೌಸ್, ಕೇಪ್ ಮತ್ತು ಡ್ರಾಪ್ಡ್ ಸ್ಕರ್ಟ್ ಹೊಂದಿರುವ ಇಂಡೋ-ವೆಸ್ಟರ್ನ್ ಉಡುಪನ್ನು ಧರಿಸಿದ್ದರು.

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೃತಿ ಅವರ ಉಡುಪನ್ನು ಟೀಕಿಸಿದರು ಮತ್ತು ಕೌಟುಂಬಿಕ ಮತ್ತು ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ಹಬ್ಬಕ್ಕೆ ಈ ಉಡುಗೆ ತೊಡುವುದು ಸೂಕ್ತವಲ್ಲ ಎಂದು ಭಾವಿಸಿದರು.

ಕೃತಿ ಅವರ ಜಾಹೀರಾತನ್ನು ಟೀಕಿಸಿದಿ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ, 'ಮಹಿಳೆಯಾಗಿರಲು ಇದೊಂದು ಅದ್ಭುತ ಸಮಯ. ನಮ್ಮ ಬಳಿ ವೈವಿಧ್ಯಮಯ ಬಟ್ಟೆಗಳು ಇವೆ. ಕಾಕ್‌ಟೈಲ್ ಉಡುಪುಗಳಿಂದ ಲೆಹೆಂಗಾ ಚೋಲಿಗಳವರೆಗೆ, ಜೀನ್ಸ್‌ನಿಂದ ಸೀರೆಗಳವರೆಗೆ, ಬಿಕಿನಿಗಳಿಂದ ಸಲ್ವಾರ್ ಕಮೀಜ್‌ವರೆಗೆ, ಇಂದು ನಮಗೆ ಲಭ್ಯವಿರುವ ಹಲವು ಆಯ್ಕೆಗಳನ್ನು ಬಿಟ್ಟು ನೀವು ನಿಮ್ಮ ಸಹೋದರನಿಗೆ ಒಳ ಉಡುಪು ಧರಿಸಿ ರಾಖಿ ಏಕೆ ಕಟ್ಟಿದ್ದೀರಿ? ನಿಮ್ಮ ಎಲ್ಲ ಸ್ಟೈಲಿಂಗ್ ಆಯ್ಕೆಗಳು ಇಲ್ಲವೇ? ಜಾಹೀರಾತು ಉದ್ದೇಶಪೂರ್ವಕವಾಗಿ ಅಸಹ್ಯಕರವಾಗಿದೆ!' ಎಂದು ಬರೆದಿದ್ದಾರೆ.

ನಂತರ ಕೃತಿ ಸನೋನ್ ಇದಕ್ಕೆ ಪ್ರತಿಕ್ರಿಯಿಸಿದರು, ಈ ಅಭಿಯಾನದ ಹಿಂದಿನ ಕಲ್ಪನೆಯನ್ನು ಸಮರ್ಥಿಸಿಕೊಂಡರು. ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೃತಿ ಸನೋನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದು ವಿವಾದಕ್ಕೆ ತಿರುಗುತ್ತಿದ್ದಂತೆ ಆಭರಣ ಬ್ರಾಂಡ್ GIVA ತನ್ನ ರಕ್ಷಾ ಬಂಧನ ಜಾಹೀರಾತನ್ನು ತೆಗೆದುಹಾಕಿತು.

Kriti Sanon in Raksha Bandhan ad
'ಮಹಿಳೆಯಾಗಿ ಇದೊಂದು ಅದ್ಭುತ ಸಮಯ, ಬಿಕಿನಿ ಧರಿಸಿ ರಾಖಿ ಕಟ್ಟುವುದೇಕೆ?': ಕಂಗನಾ ರಣಾವತ್ ವಾಗ್ದಾಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com