

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮುಂಬೈನಲ್ಲಿ ಹೊರಗೆ ಹೋಗಿದ್ದಾಗ ಪಾಪರಾಜಿಯೊಬ್ಬರು ತೀರಾ ಹತ್ತಿರ ಬಂದು ನಟಿಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಸುತಾರಿಯಾ, ಕ್ಯಾಮರಾವನ್ನು ಪಕಕ್ಕೆ ತಳ್ಳಿ ಕೋಪದಿಂದ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು. ಭದ್ರತಾ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸುತಾರಿಯಾ ಮಳಿಗೆಯೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.
ಈ ನಡುವೆ ಫೋಟೋಗ್ರಾಫರ್ ಒಬ್ಬರು ಕ್ಯಾಮೆರಾವನ್ನು ತೀರಾ ಹತ್ತಿರಕ್ಕೆ ತಂದಾಗ, ತಾಳ್ಮೆ ಕಳೆದುಕೊಂಡ ತಾರಾ ಕ್ಯಾಮೆರಾವನ್ನು ಬದಿಗೆ ತಳ್ಳಿ ಮುಂದೆ ಸಾಗಿದರು. ಇಷ್ಟೇ ಅಲ್ಲದೆ, ಕೆಲವು ಛಾಯಾಗ್ರಾಹಕರು ನಟಿಯ ಹೆಸರನ್ನು ಗೇಲಿ ಮಾಡುವ ರೀತಿಯಲ್ಲಿ ಕೂಗುತ್ತಾ, ಅಸಭ್ಯವಾಗಿ ನಡೆದುಕೊಂಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆದ ಈ ವಿಡಿಯೋ, ಪಾಪರಾಜಿಗಳ ವರ್ತನೆ ಮತ್ತು ಸೆಲೆಬ್ರಿಟಿಗಳ ವೈಯಕ್ತಿಕ ಸ್ವಾತಂತ್ರ್ಯದ (personal space) ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ತಾರಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು "ಈ ಪಾಪರಾಜಿಗಳ ಮುಖಕ್ಕೆ ಗುದ್ದಬೇಕು ಎಂದಿದ್ದಾರೆ. ಇನ್ನೊಬ್ಬರು ತಾರಾ ಸುತಾರಿಯಾ ಸರಿಯಾದ ಕೆಲಸ ಮಾಡಿದ್ದಾರೆಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, ಸೆಲೆಬ್ರಿಟಿಗಳಿಗೂ ಖಾಸಗಿ ಜೀವನವಿರುತ್ತದೆ ಎಂಬುದನ್ನು ಪಾಪರಾಜಿಗಳು ಅರ್ಥಮಾಡಿಕೊಳ್ಳಬೇಕು. ಕ್ಯಾಮೆರಾಗಳೊಂದಿಗೆ ಎಲ್ಲೆಂದರಲ್ಲಿ ನುಗ್ಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.