ನಟ ಅಜೇಯ್ ರಾವ್-ಸ್ವಪ್ನ ವಿವಾಹ
ಕೊಪ್ಪಳ: ಸ್ಯಾಂಡಲ್ ವುಡ್ ನಾಯಕ ನಟ ಅಜೇಯ್ ರಾವ್ ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಕೊಪ್ಪಳದ ಹುಲಿಗೆ ಗ್ರಾಮದ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ನಟ ಅಜೇಯ್ ಸ್ವಪ್ನ ಎಂಬ ತಮ್ಮ ಸ್ನೇಹಿತೆಯನ್ನು ಪ್ರೀತಿಸಿ, ಕುಟುಂಬದ ಸಮ್ಮತಿ ಮೇರೆಗೆ ಅವರನ್ನು ಸರಳವಾಗಿ ವಿವಾಹವಾಗಿರುವುದು ವಿಶೇಷ. ಸ್ವಪ್ನ ಹೊಸಪೇಟೆ ಮೂಲದವೆರೆಂದು ತಿಳಿದುಬಂದಿದ್ದು, ಅಜೇಯ್ ಕುಟುಂಬದ ಪರಿಚಯಸ್ಥ ಎಂಜಿನಿಯರ್ ರೊಬ್ಬರ ಮಗಳು ಎಂದು ಹೇಳಲಾಗುತ್ತಿದೆ.
ಅಜೇಯ್ ಕೂಡ ಹೊಸಪೇಟೆ ಮೂಲದವರಾಗಿರುವುದು ವಿಶೇಷ. ಇದೇ ಡಿಸೆಂಬರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ