
ಕೊಪ್ಪಳ: ಸಾಂಡಲ್ ವುಡ್ ನಾಯಕ ನಟ ಅಜೇಯ್ ರಾವ್ ಅವರ ಮದುವೆ ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಹುಲಿಗೆಮ್ಮ ದೇವಸ್ಥಾನದಲ್ಲಿ ಇಂದು ಸರಳವಾಗಿ ನಡೆಯಲಿದೆ.
ಮದುವೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪೊಲೀಸ್ ಬಂದೋಬಸ್ತ್ ನೆರವು ಪಡೆಯಲಾಗಿದೆ. ಪ್ರೀತಿಸಿ ಕುಟುಂಬದ ಸಮ್ಮತಿ ಪಡೆದು ಮದುವೆಯಾಗುತ್ತಿರುವುದು ವಿಶೇಷ. ಹುಲಿಗೆಮ್ಮ ದೇವಸ್ಥಾನದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬೆಳಿಗ್ಗೆ 10 ರಿಂದ 10.30ರ ಮುಹೂರ್ತದಲ್ಲಿ ಮದುವೆ ನಡೆಯಲಿದೆ.
ವಧುವಿನ ಹೆಸರನ್ನು ಗೌಪ್ಯವಾಗಿ ಇಡಲಾಗಿದ್ದು, ಹೊಸಪೇಟೆ ಮೂಲದ ಎಂಜಿನಿಯರ್ ಒಬ್ಬರ ಮಗಳು ಎಂದು ಹೇಳಲಾಗುತ್ತಿದೆ. ಡಿ.20 ರಂದು ಬೆಂಗಳೂರಿನಲ್ಲಿ ಆರತಕ್ಷತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಅವರೇ ನಟಿಸಿರುವ ಜೈ ಬಜರಂಗ ಬಲಿ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಲಿದೆ. ಅಜೇಯ್ ಹೊಸಪೇಟೆಯವರು.
ಈ ಕುರಿತಂತೆ ದೇವಸ್ಥಾನ ಆಡಳಿತ ಮಂಡಳಿ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದು, ಮುನಿರಾಬಾದ್ ನಲ್ಲಿ ಈಗಾಗಲೇ ಒಂದು ಕೆಎಸ್ಆರ್ ಪಿ ತುಕಡಿ ಹಾಗೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Advertisement