ಪೂನಂ ಪಾಂಡೆ ನಟನೆಯ 'ಮಾಲಿನಿ' ಚಿತ್ರದ ಫಸ್ಟ್ ಲುಕ್

ಬಿಚ್ಚಮ್ಮಳಾಗಿ ಸಾಮಾಜಿಕ ಜಾಲತಾಣಗಳಲ್ಲಿ...
'ಮಾಲಿನಿ' ಚಿತ್ರದ ಫಸ್ಟ್ ಲುಕ್
'ಮಾಲಿನಿ' ಚಿತ್ರದ ಫಸ್ಟ್ ಲುಕ್
Updated on: 

ಬಿಚ್ಚಮ್ಮಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಈಗ ದಕ್ಷಿಣ ಭಾರತದ ಕಡೆ ಮೂಖ ಮಾಡಿದ್ದಾರೆ.

ಮಾಲಿನಿ ಚಿತ್ರದ ಮೂಲಕ ಟಾಲಿವುಡ್‌ಗೆ ಪಾಂಡೆ ಎಂಟ್ರಿ ಕೊಟ್ಟಿದ್ದಾಳೆ. ಮಾಲಿನಿ ಚಿತ್ರ ಭಯೋತ್ಪಾದನೆ ಹಿನ್ನೆಲೆ ಹೊಂದಿದೆ. ಆ್ಯಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಪೂನಂ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಮಾಲಿನಿ ಚಿತ್ರದ ಫಸ್ಟ್ ಲುಕ್ ಹೊರಬಂದಿದ್ದು. ಅದರಲ್ಲಿ ತುಂಬಾ ಹಾಟ್ ಆಗಿ ಕಾಣಿಸಿದ್ದಾರೆ.

ಮಹೇಶ್ ರಥಿ ನಿರ್ಮಾಣದಲ್ಲಿ ಕೆ. ವೀರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರದ ಪೋಸ್ಟರ್‌ನಲ್ಲಿ ಹಾಟ್ ಬಾಂಬ್ ಪೂನಂ ಕೈಯಲ್ಲಿ ಗನ್ ಹಿಡಿದಿದ್ದು ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾಳೆ. ಸದ್ಯ ಚಿತ್ರದ ಚಿತ್ರೀಕರಣ ವಿಶಾಖಪಟ್ಟಣಂ ಹಾಗೂ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

ಬಾಲಿವುಡ್ ನಶಾ ಚಿತ್ರದದ ಮೂಲಕ ಚಿತ್ರ ರಸಿಕರ ಎದೆ ಕಿಚ್ಚು ಹಚ್ಚಿದ್ದ ಪೂನಂ ಪಾಂಡೆ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡುವ ಸೂಚನೆ ಹೆಚ್ಚಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com