ಚಿತ್ರ ನಿರ್ಮಾಣ ಸಹಾಯಕನಾದ ಏಂಜಲೀನ ಜೋಲಿಯ ೧೩ ವರ್ಷದ ಮಗ

ಹಾಲಿವುಡ್ ದಂಪತಿ ಬ್ರಾಡ್ ಪಿಟ್ ಮತ್ತು ಏಂಜಲೀನ ಅವರ ಹಿರಿಯ ಕುಮಾರ 'ಬೈ ದ ಸೀ' ...
ಬ್ರಾಡ್ ಪಿಟ್ ಮತ್ತು ಏಂಜಲೀನ ಜೋಲಿ (ಸಂಗ್ರಹ ಚಿತ್ರ)
ಬ್ರಾಡ್ ಪಿಟ್ ಮತ್ತು ಏಂಜಲೀನ ಜೋಲಿ (ಸಂಗ್ರಹ ಚಿತ್ರ)

ಲಂಡನ್: ಹಾಲಿವುಡ್ ದಂಪತಿ ಬ್ರಾಡ್ ಪಿಟ್ ಮತ್ತು ಏಂಜಲೀನ ಅವರ ಹಿರಿಯ ಕುಮಾರ 'ಬೈ ದ ಸೀ' ಸಿನೆಮಾದಲ್ಲಿ ಸಹಾಯಕನಾಗಿ ಕೆಲಸ ಮಾಡಲಿದ್ದಾನೆ ಎಂದು ತಿಳಿದು ಬಂದಿದೆ.

೧೩ ವರ್ಷದ ಬಾಲಕ ಮೆಡ್ಡಾಕ್ಸ್ ನಿರ್ಮಾಣ ಕಾರ್ಯಗಳಲ್ಲಿ ಸಹಾಯಕನಾಗಿ ಕೆಲಸ ಮಾಡಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷ ಬಿಡುಗಡೆಯಾದ 'ಮೆಲೆಫಿಶಿಯಂಟ್' ಚಿತ್ರದ ನಾಯಕ ನಟಿ ಮತ್ತು ನಿರ್ದೇಶಕಿ ಏಂಜಲೀನ ಜೋಲಿ ಈ ವರ್ಷದ ಶುರುವಿನಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾದ 'ಅನ್ ಬ್ರೋಕನ್' ಸಿನೆಮಾ ಸೆಟ್ ನಲ್ಲಿ ತನ್ನ ಮಗನಿಗೆ ಮೆಡ್ಡಾಕ್ಸ್ ನಿಗೆ ಮೊದಲ ಕೆಲಸ ಕೊಟ್ಟಿದ್ದರಂತೆ.

ಮೆಡ್ಡಾಕ್ಸ್ ಸಿಡ್ನಿಯಾ ಸಿನೆಮಾ ಸೆಟ್ಟಿನಲ್ಲಿ ಓಡಾಡಿಕೊಂಡು, ಚಿತ್ರ ನಟರ ಜೊತೆ ಮಾತನಾಡಿಕೊಂಡು ಆಗುಹೋಗುಗಳನ್ನು ವಿಚಾರಿಸುತ್ತಿದ್ದ ದೃಶ್ಯಗಳು ಕಂಡು ಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com