ಸಿಂಪಲ್ಲಾಗೊಂದ್ ಸಿಂಗಿಂಗ್ ಶೋ

ಬಿಗ್‍ಬಾಸ್ ನಂತರ ಕಿರುತೆರೆಯಿಂದ ವಿಮುಖರಾಗಿದ್ದ ಅರುಣ್ ಸಾಗರ್, ಒಂದು ದೀರ್ಘವಿರಾಮದ ನಂತರ ಮತ್ತೆ ವಾಪಸ್ಸಾಗಿದ್ದಾರೆ. ಜೀ ಕನ್ನಡದಲ್ಲಿ ವೀಕೆಂಡ್ ವಿಥ್ ರಮೇಶ್, ಡಿವೈಡೆಡ್ ಮತ್ತು ಲೈಫ್ ಸೂಪರ್ ಗುರೂ ಥರದ ವಿಭಿನ್ನ ರಿಯಾಲಿಟಿ ಷೋಗಳು ಪಡೆದ ಜನಪ್ರಿಯತೆಯಿಂದ...
ಕಿರುತೆರೆ ನಟ  ಅರುಣ್ ಸಾಗರ್
ಕಿರುತೆರೆ ನಟ ಅರುಣ್ ಸಾಗರ್

ಬಿಗ್‍ಬಾಸ್ ನಂತರ ಕಿರುತೆರೆಯಿಂದ ವಿಮುಖರಾಗಿದ್ದ ಅರುಣ್ ಸಾಗರ್, ಒಂದು ದೀರ್ಘವಿರಾಮದ ನಂತರ ಮತ್ತೆ ವಾಪಸ್ಸಾಗಿದ್ದಾರೆ. ಜೀ ಕನ್ನಡದಲ್ಲಿ ವೀಕೆಂಡ್ ವಿಥ್ ರಮೇಶ್, ಡಿವೈಡೆಡ್ ಮತ್ತು ಲೈಫ್ ಸೂಪರ್ ಗುರೂ ಥರದ ವಿಭಿನ್ನ ರಿಯಾಲಿಟಿ ಷೋಗಳು ಪಡೆದ ಜನಪ್ರಿಯತೆಯಿಂದ ಪ್ರೇರಿತರಾಗಿರುವ ಜೀ ಕನ್ನಡ ಹೊಸದೊಂದು ಕಾನ್ಸೆಪ್ಟಿನೊಂದಿಗೆ ವೀಕ್ಷರೆದುರು ಬರುತ್ತಿದೆ. ಅದರ ಸಾರಥ್ಯ ಅರುಣ್ ಸಾಗರ್‍ಗೆ ನೀಡಲಾಗಿದೆ.

ಶೋ ಹೆಸರು ಸಿಂಪಲ್ಲಾಗೊಂದ್ ಸಿಂಗಿಂಗ್ ಶೋ! ಇದೇ ಏ.4ರಿಂದ ಪ್ರಾರಂಭವಾಗುತ್ತಿರುವ ಈ ರಿಯಾಲಿಟಿ ಶೋ ತನ್ನ ವಿಭಿನ್ನ ಪ್ರೊಮೊಗಳಿಂದ ಈಗಾಗಲೇ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಗಾನಾ ಬಜಾನಾ
ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ಸುತ್ತುಗಳಿದ್ದು, ಮೊದಲನೇ ಸುತ್ತಿನ ಹೆಸರು ಗಾನಾ ಬಜಾನಾ. ಇದರಲ್ಲಿ ವಿದೇಶಿಯರೊಬ್ಬರು ಹಾಡುವ ಕನ್ನಡ ಹಾಡನ್ನು ಕೇಳಿಸಿಕೊಂಡು ಸರಿಯಾದ ಸಾಹಿತ್ಯದೊಂದಿಗೆ ಹಾಡಬೇಕಾಗುತ್ತದೆ. ಇದರಲ್ಲಿ ಒಟ್ಟು 4 ಸುತ್ತುಗಳಿದ್ದು ಪ್ರತಿ ಸುತ್ತಿಗೂ 2500 ರು. ಬಹುಮಾನ ಇರುತ್ತದೆ.

ಚಿತ್ರಗೀತೆ ಸ್ಪರ್ಧೆ
ಎರಡನೇ ಸುತ್ತಿನಲ್ಲಿ ಚಿತ್ರಗೀತೆ ಸ್ಪರ್ಧೆ. ಇದರಲ್ಲಿ ಯಾವುದಾದರೊಂದು ಹಾಡಿಗೆ ಸಂಬಂಧಿಸಿದಂತೆ ಒಂದಷ್ಟು ಫೋಟೋಗಳನ್ನು ತೋರಿಸಲಾಗುತ್ತೆ. ಅದನ್ನು ನೋಡಿ ಸ್ಪರ್ಧಿ ಆ ಹಾಡನ್ನು ಹಾಡಬೇಕಾಗುತ್ತೆ. ಇಲ್ಲೂ ನಾಲ್ಕು ಸುತ್ತುಗಳಿದ್ದು ಪ್ರತಿ ಸುತ್ತಿಗೂ 5000 ರು. ಬಹುಮಾನವಿರುತ್ತದೆ.

ಮಿಸ್ಸಿಂಗ್ ಲಿರಿಕ್
ಮೂರನೇ ಸುತ್ತಿನ ಹೆಸರು ಮಿಸ್ಸಿಂಗ್ ಲಿರಿಕ್. ಇಲ್ಲಿ ಒಂದು ಹಾಡನ್ನು ಕೇಳಿಸಿ ಮಧ್ಯದಲ್ಲಿ ಅದರ ಒಂದು ಪದವನ್ನು ಮ್ಯೂಟ್ ಮಾಡಲಾಗುತ್ತೆ. ಸ್ಪರ್ಥಿಗಳು ಹಾಗೆ ಮ್ಯೂಟ್ ಆಗಿರೋ ಪದವನ್ನು ಗ್ರಹಿಸಿ ಹಾಡಬೇಕು. ಇದು 2 ಸುತ್ತಿನ ಸ್ಪರ್ಧೆಯಾಗಿದ್ದು ಪ್ರತಿ ಸುತ್ತಿಗೂ 10,000 ರು. ಬಹುಮಾನವಿರುತ್ತದೆ.

ಹಾಡು ನಿಮ್ಮ ಪಾಡು

ಕೊನೆಯ ಸುತ್ತಿನ ಹೆಸರು `ಹಾಡು ನಿಮ್ಮ ಪಾಡು'. ಇದೊಂದು ಆಕರ್ಷಕ ಸುತ್ತಾಗಿದ್ದು, ಇಲ್ಲಿ ಸ್ಪರ್ಧಿಗೆ ಹಾಡನ್ನು ಹಾಡಲು ಕೊಡಲಾಗುತ್ತದೆ. ಹಾಗೆ ಹಾಡುವಾಗ ಇನ್ನೊಬ್ಬ ವ್ಯಕ್ತಿ ಅವರು ಹಾಡದಂತೆ ಅಡ್ಡಿಪಡಿಸುತ್ತಾನೆ. ಈ ಅಡಚಣೆಯ ನಡುವೆಯೂ ಸ್ಪರ್ಧಿಹಾಡನ್ನು ಹಾಡಬೇಕು. ಈ ಸುತ್ತಿನ ವಿಜೇತರನ್ನು ಆಯ್ಕೆ ಮಾಡುವ ಅವಕಾಶವಿರುವುದು ವೀಕ್ಷಕರಿಗೆ! ಇದು ಕೇವಲ ಒಂದು ಸುತ್ತಿನ ಸ್ಪರ್ಧೆಯಾಗಿದ್ದು 25,000 ರು. ಬಹುಮಾನವಿರುತ್ತದೆ. ನಾಲ್ಕು ಸುತ್ತಿನ ಒಟ್ಟು ಬಹುಮಾನ ಒಂದು ಲಕ್ಷ ರುಪಾಯಿ.

ಏಂಜಲ್ ಮೀಡಿಯಾ ವಕ್ರ್ಸ್ ಪ್ರೊಡಕ್ಷನ್ ಸಂಸ್ಥೆ ಸಿಂಪಲ್ಲಾಗೊಂದು ಸಿಂಗಿಂಗ್ ಶೋ ಅನ್ನು ನಿರ್ಮಾಣಮಾಡುತ್ತಿದ್ದು ಏ.4ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10ರ ವರೆಗೆ ಈ ಶೋ ಪ್ರಸಾರವಾಗಲಿದೆ. ಈ ಕಾನ್ಸೆಪ್ಟ್ ನಲ್ಲಿರುವ ವಿಶೇಷತೆ ನೋಡುಗರಿಗೆ ಇಷ್ಟವಾಗುತ್ತದೆ ಎಂದು ವಾಹಿನಿಯ ಬಿಸಿನೆಸ್ ಹೆಡ್ ಸಿಜು ಪ್ರಭಾಕರ್ ಮತ್ತು ಪ್ರೊಗ್ರಾಂ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com