

ನವದೆಹಲಿ: ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ, ಬಾಲಿವುಡ್ ನ ಖ್ಯಾತ ನಟಿ ಸೋನಮ್ ಕಪೂರ್ 'ಎಲ್ಲೆ ಸ್ತನ ಕ್ಯಾನ್ಸರ್ ಪ್ರಚಾರ' ಕಾರ್ಯಕ್ರಮಕ್ಕೆ ರಾಯಭಾರಿಯಾಗಿದ್ದಾರೆ.
ಆಗಾನ್ ಕ್ಯಾನ್ಸರ್ ಫೌಂಡೇಶನ್ ಮತ್ತು ಎಲ್ಲೆ ಸ್ತನ ಕ್ಯಾನ್ಸರ್ ಪ್ರಚಾರ ಒಟ್ಟಿಗೆ ಆಯೋಜಿಸಿರುವ ಭಾನುವಾರದ ಅರಿವು ಮೂಡಿಸುವ ಕಾರ್ಯಕ್ರಮ ದ ತಾಜ್ ಮಹಲ್ ಹೋಟೆಲ್ ನಲ್ಲಿ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
"ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಆಗನ್ ಕ್ಯಾನ್ಸರ್ ಫೌಂಡೇಶನ್ ಜೊತೆಗೆ ಭಾಗಿಯಾಗಿರುವುದು ನನಗೆ ಹೆಮ್ಮೆ. ಎಲ್ಲರಿಗೂ ಸ್ತನ ಕ್ಯಾನ್ಸರ್ ಹೊಂದಿರುವ ಒಬ್ಬರು ಗೊತ್ತಿರುತ್ತಾರೆ. ಸ್ತನ ಕ್ಯಾನ್ಸರ್ ಗೆ ನನ್ನ ಚಿಕ್ಕಮ್ಮನನ್ನು ಕಳೆದುಕೊಂಡೆ.
"ಸ್ತನ ಕ್ಯಾನ್ಸರ್ ಇರುವಿಕೆಯ ಬಗ್ಗೆ ಮೊದಲೇ ತಿಳಿದುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದೇ ಈ ರೋಗದ ವಿರುದ್ಧ ಹೋರಾಡುವ ಸರಿಯಾದ ಕ್ರಮ. ಇದನ್ನು ತಿಳಿದುಕೊಳ್ಳಲು ನಡೆಸುವ ಪರೀಕ್ಷೆಗಳ ಬಗ್ಗೆ, ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ನನಗೆ ಸಾಧ್ಯವಾದಷ್ಟು ಕೆಲಸವನ್ನು ನಗೆ ಮಾಡಲು ಇಷ್ಟ" ಎಂದು 'ಖೂಬ್ಸೂರತ್' ನಟಿ ತಿಳಿಸಿದ್ದಾರೆ.