ಮತ್ತೊಂದು ದಾಖಲೆ ಬರೆದ "ರಾಮಾಚಾರಿ": 10 ಭಾಷೆಗಳಿಗೆ ಚಿತ್ರ ಡಬ್

ನಟ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ 100ನೇ ದಿನದ ಸಂಭ್ರಮದಲ್ಲಿರುವಂತೆಯೇ ಮತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದೆ...
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಪೋಸ್ಟರ್
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಪೋಸ್ಟರ್

ಬೆಂಗಳೂರು: ನಟ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ 100ನೇ ದಿನದ ಸಂಭ್ರಮದಲ್ಲಿರುವಂತೆಯೇ ಮತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದೆ.

ಈ ಹಿಂದೆ ದಾಖಲೆ ಗಳಿಕೆ ಮತ್ತು ತೆಲುಗು ಭಾಷೆಗೆ ರೀಮೇಕ್ ಅಗುತ್ತಿರುವ ವಿಚಾರವಾಗಿ ಸುದ್ದಿಯಲ್ಲಿದ್ದ ರಾಮಾಚಾರಿ ಚಿತ್ರ ಇದೀಗ ಡಬ್ ಆಗುವ ವಿಚಾರದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ" ಚಿತ್ರ ಬರೊಬ್ಬರಿ 10 ಭಾಷೆಗಳಿಗೆ ಡಬ್ ಆಗುತ್ತಿದೆ. ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ಬೋಜ್‍ಪುರಿ ಸೇರಿದಂತೆ ಒಟ್ಟು ಹತ್ತು ಭಾಷೆಗಳಿಗೆ ಕನ್ನಡದ ಸಿನಿಮಾ ಡಬ್ ಆಗಲು ಸಿದ್ದತೆ ನಡೆದಿದೆ ಎಂದು ತಿಳಿದುಬಂದಿದೆ.

ಕನ್ನಡ ಚಿತ್ರವೊಂದು ಏಕಕಾಲದಲ್ಲಿ 10 ಭಾಷೆಗಳಿಗೆ ಡಬ್ ಆಗುತ್ತಿದ್ದು, ಇದು ಹೊಸ ದಾಖಲೆ ಎನ್ನಲಾಗುತ್ತಿದೆ. ಇನ್ನು ಚಿತ್ರದಲ್ಲಿ ಯಶ್ ಮತ್ತು ರಾಧಿಕಾ ಅವರ ಅಮೋಘ ನಟನೆಯಿಂದಾಗಿ ನಿರ್ಮಾಪಕರು ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದಲ್ಲಿ ತೆರೆಕಂಡ "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ" ಚಿತ್ರವು ಈಗಾಗಲೇ ಕನ್ನಡದಲ್ಲಿ ಭರ್ಜರಿ 100 ದಿನಗಳ ಪ್ರದರ್ಶನಗೊಂಡು ಮುಂದುವರೆಯುತ್ತಿರುವಂತೆಯೇ, ತೆಲುಗ ಮತ್ತು ತಮಿಳು ಭಾಷೆಗಳಲ್ಲಿ ಈ ಚಿತ್ರವನ್ನು ರಿಮೇಕ್ ಮಾಡುವ ಕಾರ್ಯಕೂಡ ಚಾಲ್ತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com