ಪುಲಿ ಮತ್ತು ರುದ್ರಮದೇವಿ ಕನ್ನಡದ ಮೊದಲ ಅಧಿಕೃತ ಡಬ್ಬಿಂಗ್ ಸಿನೆಮಾಗಳು?
ಬೆಂಗಳೂರು: ಕನ್ನಡ ಚಲನಚಿತ್ರೋದ್ಯಮದಲ್ಲಿ ಅನಧಿಕೃತ ಮತ್ತು ಅಸಂವಿಧಾನಕ ಎಂದು ಬಣ್ಣಿಸಲಾಗುವ ಡಬ್ಬಿಂಗ್ ನಿಷೇಧದ ಬಗ್ಗೆ ಪರ ವಿರೋಧ ಚರ್ಚೆಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. ಇತ್ತೀಚೆಗಷ್ಟೇ ಸಿಸಿಐ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸೇರಿದಂತೆ ಮೂರು ಸಂಸ್ಥೆಗಳಿಗೆ, ಅಸಂವಿಧಾನಿಕ ಡಬ್ಬಿಂಗ್ ನಿಷೇಧಕ್ಕಾಗಿ ೨೫ಲಕ್ಷರೂ ದಂಡ ವಿಧಿಸಿತ್ತು. ಅಲ್ಲದೇ ಕೃಷ್ಣೇಗೌಡ ಎಂಬುವವರು ಕರ್ನಾಟಕ ಡಬ್ಬಿಂಗ್ ಚಲನಚಿತ್ರ ಮಂಡಲಿ ಎಂಬ ಹೆಸರಿನ ಸಂಸ್ಥೆಯನ್ನು ಕೂಡ ನೊಂದಾಯಿಸಿದ್ದರು.
ಈಗ ಬಲ್ಲ ಮೂಲಗಳ ಪ್ರಕಾರ ವಿಜಯ್ ನಟನೆಯ ತಮಿಳು ಚಿತ್ರ ಪುಲಿ ಮತ್ತು ಅನುಷ್ಕಾ ಶೆಟ್ಟಿ ನಟನೆಯ ರುದ್ರಮದೇವಿ ಚಲನಚಿತ್ರಗಳ ಡಬ್ಬಿಂಗ್ ಕಾರ್ಯ ಸದ್ದಿಲ್ಲದೇ ಹೈದರಾಬಾದಿನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಇವುಗಳ ಬಿಡುಗಡೆ ಕೂಡ ಶೀಘ್ರದಲ್ಲೇ ಆಗಲಿದೆ ಎನ್ನಲಾಗಿದೆ.
ಕನ್ನಡ ಚಿತ್ರೋದ್ಯಮದ ಕೆಲವು ಪ್ರಭಾವಿ ನಟ, ನಿರ್ದೇಶಕರು ಹಾಗೂ ನಿರ್ಮಾಪಕರು ಇನ್ನೂ ಕೂಡ ಡಬ್ಬಿಂಗ್ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಬಹುಶಃ ಈ ಸಿನೆಮಾಗಳೇ ಅವರನ್ನು ಈ ಹೇಳಿಕೆಗಳಿಗೆ ಬ್ರೇಕ್ ಹಾಕುತ್ತವೆ ಎನ್ನುತ್ತಾರೆ ಗಾಂಧಿನರದ ಡಬ್ಬಿಂಗ್ ಪರ ಪಂಡಿತರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ