
ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಮಗಳು ನಿರುಪಮ ಮದುವೆಯ ಕರೆಯೋಲೆಯೊಂದಿಗೆ ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರರ ಮನೆಗೆ ಆಗಮಿಸಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರನ್ನು ಮದುವೆಗೆ ಆಹ್ವಾನಿಸಿದರು.
ಮದುವೆ ಕರೆಯೋಲೆಯೊಂದಿಗೆ ತೆರಳಿದ ಶಿವರಾಜ್ ಕುಮಾರ್ ಉಪೇಂದ್ರರೊಂದಿಗೆ ಸಮಾಜಮುಖಿ ವಿಷಯಗಳು ಕುರಿತಾಗಿ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಬಹುನಿರೀಕ್ಷಿತ ಉಪ್ಪಿ2 ಚಿತ್ರ ರಾಜ್ಯಾದ್ಯಾಂತ ಬಿಡುಗಡೆಗೊಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರೋದ್ಯಮದ ಗಣ್ಯರಿಗಾಗಿ ಉಪ್ಪಿ2 ಚಿತ್ರದ ವಿಶೇಷ ಪ್ರದರ್ಶನ ಮಾಡಲಾಯಿತು. ಚಿತ್ರವನ್ನು ನೋಡಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಉಪ್ಪಿ2 ಚಿತ್ರ ನಿಜಕ್ಕೂ ವಿಭಿನ್ನ ಫಿಲಾಸಫಿಯನ್ನು ಹೊಂದಿದೆ. ನಿಜ ಜೀವನದಲ್ಲಿ ನಡೆಯುವಂತಾ ಘಟನಾವಳಿಗಳನ್ನೇ ತೆರೆಯ ಮೇಲೆ ಉಪೇಂದ್ರ ಅವರು ತೆರೆದಿಟ್ಟಿದ್ದಾರೆ. ಪ್ರಸ್ತುತತೆಯನ್ನು ನಂಬಿ ಬದುಕಿದರೆ ಯಾವುದೇ ತೊಂದರೆಯಾಗ ಎಂಬುದನ್ನು ತೋರಿಸಿದ್ದಾರೆ ಎಂದರು.
Advertisement