

ಭಜರಂಗಿ ಭಾಯಿಜಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದ ನಿರ್ದೇಶಕ ಕಬೀರ್ ಖಾನ್'ಗೆ ವಿಶೇಷ ಗಿಫ್ಟ್' ನೀಡಿದ್ದಾರೆ. ಸಲ್ಲು ಮಿಯಾ ಅತ್ಯುತ್ತಮ ನಟನಷ್ಟೇ ಅಲ್ಲ, ಉತ್ತಮ ಚಿತ್ರ ಕಲೆಗಾರ ಎಂಬುದು ಬಿಟೌನ್' ನಲ್ಲಿ ಎಲ್ಲರಿಗೂ ಗೊತ್ತಿರುವ ವಿಷಯ.
ತಮ್ಮ ಪ್ರೀತಿಯ ನಿರ್ದೇಶಕ ಕಬೀರ್ ಖಾನ್'ಗೆ ತಾವೇ ಬಿಡಿಸಿದ ವರ್ಣಚಿತ್ರದ ಕಲಾತ್ಮಕ ಕೊಡುಗೆಯನ್ನು ನೀಡಿದ್ದಾರೆ. ಹವ್ಯಾಸಿ ಕಲಾವಿದ ಸಲ್ಮಾನ್ ಖಾನ್ ಈ ಚಿತ್ರಕಲೆಯ ಮೂಲಕ ಭಜರಂಗಿ ಭಾಯಿಜಾನ್ ನಿರ್ದೇಶಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಏಕ್ ಥಾ ಟೈಗರ್ ಚಿತ್ರದ ಮೂಲಕ ಸಲ್ಲು ಜೊತೆಗೂಡಿರುವ ನಿರ್ದೇಶಕ ಕಬೀರ್ ಖಾನ್ ನನ್ನ ಗೆಳೆಯ, ನನ್ನ ನಟ, ನನ್ನ ನಿರ್ಮಾಪಕನಿಂದ ಅತ್ಯುತ್ತಮ ಗಿಫ್ಟ್ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.