ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ
ಸಿನಿಮಾ ಸುದ್ದಿ
ಟ್ವಿಟ್ಟರ್ ಬೆಂಬಲಿಗರು: ಪ್ರಿಯಾಂಕ ಚೋಪ್ರಾ ಏಶಿಯಾದಲ್ಲೇ ಮೂರನೆ ಸ್ಥಾನದಲ್ಲಿರುವ ಮಹಿಳೆ
ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಟ್ವಿಟ್ಟರ್ ನಲ್ಲಿ ೧೨ ದಶಲಕ್ಷ ಟ್ವಿಟ್ಟರ್ ಬೆಂಬಲಿಗರೊಂದಿಗೆ ಏಶಿಯಾದಲ್ಲಿ ಮೂರನೇ ಸ್ಥಾನದಲ್ಲಿರುವ
ಮುಂಬೈ: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಟ್ವಿಟ್ಟರ್ ನಲ್ಲಿ ೧೨ ದಶಲಕ್ಷ ಟ್ವಿಟ್ಟರ್ ಬೆಂಬಲಿಗರೊಂದಿಗೆ ಏಶಿಯಾದಲ್ಲಿ ಮೂರನೇ ಸ್ಥಾನದಲ್ಲಿರುವ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇಂದು ಅವರ ಬಹು ನಿರೀಕ್ಷಿತ 'ಬಾಜಿರಾವ್ ಮಸ್ತಾನಿ' ಬಿಡುಗಡೆ ಕಂಡಿದೆ.
"ಎಲ್ಲರಿಗೂ ಧನ್ಯವಾದಗಳು. ೧೨ ಲಕ್ಷ ಬೆಂಬಲಿಗರು. ನೀವೆಲ್ಲರೂ ನನಗೆ ಶಕ್ತಿ" ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ಇಂಡೋನೇಶಿಯಾದ ಗಾಯಕಿ-ನಟಿ ಅಗ್ನೇಜ್ ಮೊ (೧೪.೫ ಮಿಲಿಯನ್ ಬೆಂಬಲಿಗರು) ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (೧೨.೫ ಮಿಲಿಯನ್ ಬೆಂಬಲಿಗರು) ಇವರ ನಂತರದಲ್ಲಿ ಏಶಿಯಾದಲ್ಲೇ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ ಖ್ಯಾತಿ ಪ್ರಿಯಾಂಕ ಅವರಿಗೆ ಸಲ್ಲಿದೆ.
ಅಮೆರಿಕಾದ ಟಿವಿ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನಟಿಸಿರುವ ಪ್ರಿಯಾಂಕ ಜಾಗತಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಫ್ಯಾಶನ್', 'ಬರ್ಫಿ', 'ಮೇರಿ ಕೋಮ್' ಇವರಿಗೆ ಅತಿ ಹೆಚ್ಚು ಹೆಸರು ತಂದುಕೊಟ್ಟ ಚಿತ್ರಗಳು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ