
ಸ್ಯಾನ್ ಲಿಯನಾರ್ಡೊ: ನೃತ್ಯಗಾರ್ತಿ, ಹಾಡುಗಾರ್ತಿ ಹಾಲಿವುಡ್ ತಾರೆ ಜೆನ್ನಿಫರ್ ಲೋಪೆಸ್, ಉದಯಪುರದಲ್ಲಿ ನಡೆಯಲಿರುವ ಇಂಗ್ಲೆಂಡ್ ಮೂಲದ ಸಂಜಯ್ ಹಿಂದುಜಾ(೪೮) ಮತ್ತು ವಿನ್ಯಾಸಗಾರ್ತಿ ಅನು ಮಹ್ತಾನಿ ಅವರ ಮದುವೆಯಲ್ಲಿ ನೃತ್ಯ ಮಾಡಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಕ್ಷಯ್ ಕುಮಾರ್ ಕೂಡ ಇದೇ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.
ರಾಜಸ್ಥಾನ ಉದಯಪುರದಲ್ಲಿ ಫೆಬ್ರವರಿ ೧೦ ರಿಂದ ೧೨ ವರೆಗೆ ಮದುವೆ ಕಾರ್ಯಕ್ರಮಗಳು ಜರುಗಲಿವೆ.
ಮದುವೆಯ ಜವಳಿಯನ್ನು ವಿನ್ಯಾಸ ಮಾಡುತ್ತಿರುವ ಮನೀಶ್ ಮಲ್ಹೊತ್ರಾ ಜೆನ್ನಿಫರ್ ಅವರಿಗೆ ಉಡುಗೆ ವಿನ್ಯಾಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹಿಂದುಸ್ತಾನ್ ಟೈಮ್ಸ್ ಗೆ ಹೇಳಿರುವುದು ವರದಿಯಾಗಿದೆ.
Advertisement