ಕಾರ್ಟೂನ್‍ ರೂಪದಲ್ಲಿ ಶೋಲೆ

ಭಾರತದ ಸಿನಿಮಾ ಇತಿಹಾಸದಲ್ಲೆ ಹೊಸ ಮೈಲುಗಲ್ಲು ಸಾಧಿಸಿದ ಬಾಲಿವುಡ್‍ನ `ಶೋಲೆ' ಚಿತ್ರವು...
ಶೋಲೆ ಅಡ್ವೆಂಚರ್ಸ್
ಶೋಲೆ ಅಡ್ವೆಂಚರ್ಸ್
Updated on

ಭಾರತದ ಸಿನಿಮಾ ಇತಿಹಾಸದಲ್ಲೆ ಹೊಸ ಮೈಲುಗಲ್ಲು ಸಾಧಿಸಿದ ಬಾಲಿವುಡ್‍ನ `ಶೋಲೆ' ಚಿತ್ರವು ಯಾರನ್ನು ತಾನೆ ಸೆಳೆದಿಲ್ಲ. ರಮೇಶ್ ಸಿಪ್ಪಿ ನೇತೃತ್ವದ ಅಮಿತಾಭ್, ಧರ್ಮೇಂದ್ರರ ಹೇಮಮಾಲಿನಿ, ಅಮ್ಜದ್ ಖಾನ್‍ರ ಈ ಚಿತ್ರವನ್ನು `ಶೋಲೆ ಅಡ್ವೆಂಚರ್ಸ್' ಎಂಬ ಹೆಸರಿ ನಿಂದ ಚಿಣ್ಣರ ಕಾರ್ಟೂನ್ ನೆಟ್ ವರ್ಕ್ ವಾಹಿನಿ ಪೋಗೋದಲ್ಲಿ ಪ್ರಸಾರ ಪ್ರಾರಂಭಿಸಿದೆ.

`ಛೋಟಾ ಭೀಮ್ ನಂತೆಯೇ ಈ ಅನಿಮೇಶನ್ ಚಿತ್ರದ ಪಾತ್ರಗಳು ಮಕ್ಕಳನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ. ಗಬ್ಬರ್ ಸಿಂಗ್‍ರ ಆರ್ಭಟವೂ ಮಕ್ಕಳನ್ನು ಬೆದರಿಸದ ರಂಜಿಸಲಿದೆಯೇನೋ ನೋಡೋಣ.

 ಈಗಾಗಲೇ ತ್ರಿಡಿ ರೂಪದಲ್ಲಿ ಕೂಡ ತೆರೆಯ ಮೇಲೆ ಬಂದ ಈ ಚಿತ್ರವೀಗ ಮಕ್ಕಳನ್ನು ತಲುಪುವುದರಲ್ಲಿ ಅನುಮಾನವೇ ಇಲ್ಲ. ಶೋಲೆ ಮೀಡಿಯಾ ಮತ್ತು ಎಂಟರ್ ಟೇನ್‍ಮೆಂಟ್ ಮುಖ್ಯಸ್ಥ ಸಾಶ್ ಚಾ ಸಿಪ್ಪಿ ಹೇಳುವ ಪ್ರಕಾರ `ಶೋಲೆ ಒಂದು ಆಲ್ ಟೈಲ್ ಕ್ಲಾಸಿಕ್ ಚಿತ್ರ, ನಾಲ್ಕು ತಲೆಮಾರುಗಳನ್ನು ರಂಜಿಸಿದೆ' ಎನ್ನುತ್ತಾರೆ. ಇಲ್ಲಿನ ಪಾತ್ರಗಳು ಚಿಣ್ಣರ ಮನಸ್ಸಿನಲ್ಲಿ ನಲಿದಾಡಲಿವೆ ಎಂಬ ವಿಶ್ವಾಸವನ್ನು ಗ್ರಾಫಿಕ್ಸ್ ನ ಕಾರ್ಯನಿರ್ವಾಹಕರಾದ ಶರಬ್ ದೇವರಾಜನ್ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com